More

    ಅಸ್ತಮಾ ನಿಯಂತ್ರಣಕ್ಕೆ ಯಾವ ಯೋಗಾಸನ ಸಹಕಾರಿ?

    ಅಸ್ತಮಾ ನಿಯಂತ್ರಣಕ್ಕೆ ಯಾವ ಯೋಗಾಸನ ಸಹಕಾರಿ?ಅಸ್ತಮಾ ನಿಯಂತ್ರಣಕ್ಕೆ ಯೋಗ ಸಹಕಾರಿಯೇ? ಯಾವ ಆಸನ, ಪ್ರಾಣಾಯಾಮಗಳನ್ನು ಮಾಡಬೇಕು ತಿಳಿಸಿ?

    | ನೀಲಮ್ಮ 38 ವರ್ಷ, ಕಡೂರು

    ಅಸ್ತಮಾ ಒಂದು ದೀರ್ಘಕಾಲೀನ ಕಾಯಿಲೆ. ಅಸ್ತಮಾವು ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುವುದು. ಅಸ್ತಮಾ ರೋಗಲಕ್ಷಣಗಳನ್ನು ನಿಯಂತ್ರಿಸಲು ಯೋಗವನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. 2014ರಲ್ಲಿ ಸಂಶೋಧಕರು 14 ಅಧ್ಯಯನಗಳನ್ನು ವಿಶ್ಲೇಷಿಸಿದ್ದಾರೆ. ಈ ಅಧ್ಯಯನಗಳು ರೋಗಲಕ್ಷಣಗಳು, ಶ್ವಾಸಕೋಶದ ಕಾರ್ಯ ಮತ್ತು ಅಸ್ತಮಾ ಹೊಂದಿರುವ ಜನರ ಜೀವನದ ಗುಣಮಟ್ಟದ ಮೇಲೆ ಯೋಗದ ಪರಿಣಾಮವನ್ನು ಪರೀಕ್ಷಿಸಿವೆ. ಸಂಶೋಧಕರು ಯೋಗವು ಸಹಾಯ ಮಾಡುತ್ತದೆ ಎಂಬುದಕ್ಕೆ ಕನಿಷ್ಠ ಪುರಾವೆಗಳನ್ನು ಕಂಡುಕೊಂಡಿದ್ದಾರೆ. ಆದಾಗ್ಯೂ, ಇದು ಅಸ್ತಿತ್ವದಲ್ಲಿರುವ ಚಿಕಿತ್ಸೆಗೆ ಪೂರಕವಾಗಬಹುದು. ವಿಶೇಷವಾಗಿ ಇದು ಅಸ್ತಮಾ ಹೊಂದಿರುವ ವ್ಯಕ್ತಿಗೆ ಸಹಾಯವಾಗುತ್ತದೆ.

    ಯೋಗವು ಉಸಿರಾಟ ಮತ್ತು ದೇಹದ ಜಾಗೃತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ನಿಮ್ಮ ಉಸಿರಾಟದ ಪ್ರಮಾಣವನ್ನು ನಿಧಾನಗೊಳಿಸಲು ಮತ್ತು ಶಾಂತತೆಯನ್ನು ಉತ್ತೇಜಿಸಲು, ಒತ್ತಡವನ್ನು ನಿವಾರಿಸಲು ಕೂಡ ಯೋಗ ಸಹಾಯ ಮಾಡುತ್ತದೆ. ಇವೆಲ್ಲವೂ ಅಸ್ತಮಾ ಹೊಂದಿರುವ ಜನರಿಗೆ ಪ್ರಯೋಜನಕಾರಿಯಾಗಿದೆ ಎಂದು ಕ್ಲೀವ್ ಲ್ಯಾಂಡ್ ಕ್ಲಿನಿಕ್ ವೆಲ್​ನೆಸ್​ನಲ್ಲಿ ಪ್ರಮಾಣೀಕೃತ ಯೋಗ ಚಿಕಿತ್ಸಕ ಮತ್ತು ಯೋಗ ಕಾರ್ಯಕ್ರಮ ವ್ಯವಸ್ಥಾಪಕ ಜೂಡಿ ಬಾರ್ ಹೇಳುತ್ತಾರೆ. ಯೋಗವು ಕೆಲವು ಅಸ್ತಮಾ ಪರಿಹಾರವನ್ನು ಒದಗಿಸಲು ಸಹಾಯಮಾಡುತ್ತದೆ ಮತ್ತು ಇತರ ಆರೋಗ್ಯ ಪ್ರಯೋಜನಗಳಿಗೆ ಕಾರಣವಾಗಬಹುದು. ಯೋಗ ಅಭ್ಯಾಸದಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುತ್ತದೆ. ಶ್ವಾಸಕೋಶದ ಮಾರ್ಗದಲ್ಲಿ ಸಮರ್ಪಕವಾಗಿ, ಸರಾಗವಾಗಿ ವಾಯು ಸಂಚಾರವಾಗುತ್ತದೆ. ಆದುದರಿಂದ ಯೋಗಾಸನಗಳು, ಪ್ರಾಣಾಯಾಮಗಳು ಮತ್ತು ಧ್ಯಾನವನ್ನು ನಿತ್ಯ ನಿರಂತರವಾಗಿ ಅಭ್ಯಾಸಮಾಡಬೇಕು. ಯೋಗಾಸನಗಳಿಂದ ದೇಹದ ಒಳಗಿನ ಅಂಗಕ್ಕೆ ವ್ಯಾಯಾಮ ದೊರಕಿ, ರಕ್ತ ಪರಿಚಲನೆಯು ಸುಗಮ ವಾಗುವುದು. ಯೋಗದಿಂದ ದೈಹಿಕ, ಮಾನಸಿಕ ಶಾಂತಿ ಸಂಯಮಗಳನ್ನು ಕಾಯ್ದುಕೊಳ್ಳಲು ಸುಲಭ ಸಾಧ್ಯವಾಗುತ್ತದೆ.

    ಯೋಗಗಳ ಆಯ್ದ ಪಟ್ಟಿ: ಮುಖ್ಯವಾಗಿ ಅರ್ಧಚಕ್ರಾಸನ, ಪರ್ವತಾಸನ, ವಜ್ರಾಸನ, ಶಶಾಂಕಾಸನ, ಅರ್ಧ ಉಷ್ಟ್ರಾಸನ ಯಾ ಉಷ್ಟ್ರಾಸನ, ಸರ್ವಾಂಗಾಸನ, ಮಕರಾಸನ, ಭುಜಂಗಾಸನ, ಧನುರಾಸನ, ಊರ್ಧ್ವಮುಖ, ಶ್ವಾನಾಸನ, ಅಧೋಮುಖ ಶ್ವಾನಾಸನ, ವೀರಾಸನ, ಶವಾಸನ, ಸುಖ ಪ್ರಾಣಾಯಾಮ ಯಾ ಸರಳ ಪ್ರಾಣಯಾಮ. ನಾಡೀಶುದ್ಧಿ ಪ್ರಾಣಾಯಾಮ, ಉಜ್ಜಯೀ, ಧ್ಯಾನ ಹಾಗೂ ಮುದ್ರೆಗಳು. ಯೋಗವನ್ನು ಗುರುಮುಖೇನನೇ ಕಲಿತು ಅಭ್ಯಾಸ ಮಾಡಿ.

    • ಅಸ್ತಮಾ ಮುದ್ರೆಯ ಬಗ್ಗೆ ಮಾಹಿತಿ ತಿಳಿಸಿ.

    | ನರೇಶ 21 ವರ್ಷ ಕಾಸರಗೋಡು

    ಉತ್ತರ: ಹೆಸರೇ ಹೇಳುವಂತೆ ಅಸ್ತಮಾ ಅಥವಾ ಉಬ್ಬಸ ಕಾಯಿಲೆಯ ಹತೋಟಿಗೆ ಈ ಮುದ್ರೆ ಸಹಕಾರಿಯಾಗಿದೆ. ಈ ಮುದ್ರೆಯ ಅಭ್ಯಾಸದಿಂದ ಶ್ವಾಸನಾಳದ ಸ್ನಾಯುಗಳು ಪುನಶ್ಚೇತನಗೊಂಡು ಸರಾಗವಾಗಿ ಉಸಿರಾಟ ನಡೆಸಲು ಸಾಧ್ಯವಾಗುತ್ತದೆ. ದೀರ್ಘಕಾಲೀನ ಕಾಯಿಲೆಯಾದ ಆಸ್ತಮಾ, ಶ್ವಾಸಕೋಶದ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ. ಕಾಯಿಲೆ ಬಂದಾಗ ಗಾಳಿಯನ್ನು ಶ್ವಾಸಕೋಶದ ಒಳಗೆ ಹಾಗೂ ಹೊರಗೆ ಸಾಗಿಸುವ ಶ್ವಾಸನಾಳಗಳ ಒಳಗೋಡೆಗಳು ಊದಿಕೊಳ್ಳುತ್ತದೆ. ಶ್ವಾಸಕೋಶಕ್ಕೆ ಗಾಳಿ ಕಡಿಮೆ ಪ್ರಮಾಣದಲ್ಲಿ ಲಭಿಸುವುದರಿಂದ ಉಸಿರಾಟ ಅಸಮರ್ಪಕವಾಗುತ್ತದೆ. ಪರಿಣಾಮವಾಗಿ ಕೆಮ್ಮು, ಕಫ, ಎದೆ, ಬಿಗಿತ, ಇತ್ಯಾದಿ ಲಕ್ಷಣಗಳು ಕಂಡುಬರುತ್ತದೆ. (ವಿಶೇಷವಾಗಿ ರಾತ್ರಿ ಮತ್ತು ಮುಂಜಾನೆ)

    ವಿಧಾನ: ಈ ಮುದ್ರೆಯಲ್ಲಿ ಎರಡು ಕೈಯ ಮದ್ಯದ ಬೆರಳುಗಳು ರ್ಸ³ಸಬೇಕು. ಉಳಿದ ಎಲ್ಲಾ ಬೆರಳುಗಳು ನೇರವಾಗಿರಲಿ (ಚಿತ್ರದಲ್ಲಿರುವಂತೆ) ಸುಮಾರು 6 ನಿಮಿಷದಂತೆ ದಿನಕ್ಕೆ 3 ಬಾರಿ ಅಭ್ಯಾಸ ನಡೆಸಿ.

    ಈ ವಿಷಯದಲ್ಲಂತೂ ಡಾ.ಬ್ರೋ ‘ಸೂಪರ್ ಸ್ಟಾರ್​’; ‘ಎಷ್ಟು ಸಾವಿರ ಕೊಟ್ರೂ ಅದನ್ನು ಮಾತ್ರ ಮಾಡಲ್ಲ’ ಅಂತಾರೆ

    ‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts