More

    ಇನ್ವೆಸ್ಟ್​ ಕರ್ನಾಟಕ ಸಮಾವೇಶಕ್ಕೆ ಪ್ರಧಾನಿ ಚಾಲನೆ: ಬ್ರ್ಯಾಂಡ್ ಬೆಂಗಳೂರು ಎಂದು ಕೊಂಡಾಡಿದ ಮೋದಿ

    ಬೆಂಗಳೂರು: ಇದು ಸಂಪ್ರದಾಯ ಮತ್ತು ತಂತ್ರಜ್ಞಾನ ಎರಡೂ ಇರುವ ಅದ್ಭುತ ಸ್ಥಳವಾಗಿದೆ. ಇದು ಪ್ರಕೃತಿ ಮತ್ತು ಸಂಸ್ಕೃತಿಯ ವಿಶಿಷ್ಟ ಸಂಗಮವಿರುವ ಸ್ಥಳವಾಗಿದೆ. ನಾವು ಪ್ರತಿಭೆ ಮತ್ತು ತಂತ್ರಜ್ಞಾನದ ಬಗ್ಗೆ ಮಾತನಾಡುವಾಗ ನಮ್ಮ ಮನಸ್ಸಿಗೆ ಮೊದಲು ಬರುವುದೇ ಬ್ರ್ಯಾಂಡ್ ಬೆಂಗಳೂರು ಎಂದು ಪ್ರಧಾನಿ ಮೋದಿ ಸಿಲಿಕಾನ್​ ಸಿಟಿಯನ್ನು ಕೊಂಡಾಡಿದರು.

    ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಇನ್ವೆಸ್ಟ್​ ಕರ್ನಾಟಕ-2022 ಜಾಗತಿಕ‌ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿ ಪ್ರಧಾನಿ ಮೋದಿ ಮಾತನಾಡಿದರು.

    ಪ್ರಪಂಚದ ವಿವಿಧ ದೇಶಗಳಿಂದ ಬಂದಿರುವ ಹೂಡಿಕೆದಾರರಿಗೆ ಸ್ವಾಗತ ಕೋರಿ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ನಿನ್ನೆ ಕರ್ನಾಟಕ ರಾಜ್ಯೋತ್ಸವ ಸಮಾರಂಭ ನಡೆದಿದೆ. ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವ ಶುಭಾಶಯಗಳು. ಕರ್ನಾಟಕ ಸ್ಟಾರ್ಟಪ್ ಹಬ್, ಪ್ರಪಂಚದಲ್ಲಿ ಬ್ರಾಂಡ್ ಬೆಂಗಳೂರು ಎಂಬ ಹೆಸರು ಖ್ಯಾತಿ ಪಡೆದಿದೆ. ಕರ್ನಾಟಕ ಪ್ರವಾಸೋದ್ಯಮ ತಾಣವಾಗಿದೆ. ಇಲ್ಲಿನ ಭಾಷಾ ಸಮೃದ್ಧಿಯಾಗಿದೆ. ಇಲ್ಲಿನ ಕಲೆ, ಸಂಸ್ಕೃತಿ ಮತ್ತು ಆಚರಣೆ ಅದ್ಭುತವಾಗಿದೆ ಎಂದರು.

    ಪ್ರಸ್ತುತ ಇದು ಸಾಂಕ್ರಮಿಕ ಕರೊನಾ ನಂತರದ ಜಾಗತಿಕ ಬಿಕ್ಕಟ್ಟಿನ ಸಮಯವಾಗಿದ್ದರೂ, ಪ್ರಪಂಚದಾದ್ಯಂತ ಇರುವ ಅರ್ಥಶಾಸ್ತ್ರಜ್ಞರು ಮತ್ತು ತಜ್ಞರು ಭಾರತವನ್ನು ಅನುಕೂಲಕರ ತಾಣವೆಂದು ವಿವರಿಸುತ್ತಿದ್ದಾರೆ. ನಮ್ಮ ಆರ್ಥಿಕತೆಯನ್ನು ಬಲಪಡಿಸಲು ನಾವು ನಮ್ಮ ಮೂಲಭೂತ ಅಂಶಗಳ ಮೇಲೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಸಹಿ ಮಾಡಲಾದ ಮುಕ್ತ ವ್ಯಾಪಾರ ಒಪ್ಪಂದಗಳು ನಮ್ಮ ಪೂರ್ವ ಸಿದ್ಧತೆಯ ಒಂದು ನೋಟವನ್ನು ಇಡೀ ಜಗತ್ತಿಗೆ ತೋರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಭಾರತ ಮುಂದುವರೆಯಬೇಕಿದ್ದರೆ ರಾಜ್ಯಗಳು ಮುಂದುವರೆಯಬೇಕು. ವಿಶೇಷ ಸೆಕ್ಟರ್‌ನಲ್ಲಿ ರಾಜ್ಯಗಳು ಒಡಂಬಡಿಕೆ ಮಾಡಿಕೊಳ್ಳುತ್ತಿರುವುದು ಸಂತೋಷದ ವಿಷಯವಾಗಿದೆ. ಈ ಸಮಾವೇಶದಲ್ಲಿ ಸಾವಿರಾರು ಕೋಟಿ ಹೂಡಿಕೆಯಾಗುತ್ತಿದೆ. ಇದರಿಂದ ಅನೇಕರಿಗೆ ಉದ್ಯೋಗ ಸಿಗಲಿದೆ. ಭಾರತ‌ ಹೀಗೆ ನಿರಂತರವಾಗಿ ಮುಂದೆ ಸಾಗಲಿದೆ. ಕೋವಿಡ್, ಯುಕ್ರೇನ್ ಯುದ್ಧದಿಂದ ಇಡೀ ವಿಶ್ವ ಬಳಲುತ್ತಿದೆ. ಭಾರತದಲ್ಲಿ ಕೂಡ ಇದರ ಪರಿಣಾಮ ಸಾಕಷ್ಟು ಬೀರಿದೆ. ಆದರೆ, ಭಾರತ ಇದನ್ನು ಭಿನ್ನವಾಗಿ ನೋಡುತ್ತಿದೆ. ಭಾರತದ ಅರ್ಥವ್ಯವಸ್ಥೆ ಗಟ್ಟಿಯಾಗಿದೆ. ಎಷ್ಟೇ ಅಡೆತಡೆಗಳು ಬಂದರೂ ಭಾರತ ತನ್ನ ಕೆಲಸಗಳನ್ನು ಮಾಡುತ್ತಲೇ ಇದೆ. ಕೋವಿಡ್ ಸಮಯದಲ್ಲಿ ಔಷಧಿ, ಲಸಿಕೆಯನ್ನು ವಿಶ್ವಕ್ಕೆ ನೀಡುವಲ್ಲಿ ಕೂಡ ಯಶಸ್ವಿಯಾಗಿದೆ. ಭಾರತದ ಅರ್ಥವ್ಯವಸ್ಥೆಯು ದಿನದಿಂದ ದಿನಕ್ಕೆ ಗಟ್ಟಿಯಾಗಿ ಮುಂದುವರೆಯುತ್ತಿದೆ. ವಿಶ್ವಕ್ಕೆ ನಮ್ಮ ತಯಾರಿಯನ್ನು ತೋರಿಸಬೇಕಾಗಿದೆ. ಕೆಲವು ವರ್ಷಗಳ ಮುನ್ನ ನಾವು ಪಾಲಿಸಿ ಮೇಕಿಂಗ್‌ನಲ್ಲಿ ಕಷ್ಟ ಪಡುತ್ತಿದ್ದೆವು. ಆದ್ರೆ ಈಗ ನಮ್ಮ ನಿಲುವುಗಳು ಬದಲಾಗಿದೆ ಎಂದರು.

    ಉತ್ಪಾದನೆ ಮತ್ತು ಪೂರೈಕೆಯಲ್ಲಿ ನಮ್ಮ ದೇಶ ಭರವಸೆದಾಯಕವಾಗಿದೆ. ಇವತ್ತು ನಾವು ಯಾವ ಸ್ಥಾನದಲ್ಲಿದ್ದೇವೆ ಮತ್ತು ನಮ್ಮ ಪ್ರಯಾಣ ಎಲ್ಲಿಂದ ಶುರುವಾಯ್ತು ಅನ್ನೋದನ್ನು ನೆನಪಿಸಿಕೊಳ್ಳಬೇಕಿದೆ. ನಮ್ಮ ಕಾನೂನುಗಳನ್ನು ಉದ್ಯಮಸ್ನೇಹಿಯನ್ನಾಗಿ ಮಾಡಬೇಕಿದೆ. ನವ ಭಾರತ ನಿರ್ಮಾಣದ ಅಗತ್ಯ ಇದೆ. ಬ್ಯಾಂಕಿಂಗ್ ಸೇರಿ‌ ಹಲವು ವಲಯಗಳಲ್ಲಿ ಸುಧಾರಣೆ ಆಗುತ್ತಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಕರೆನ್ಸಿ ತರಲಾಗುತ್ತಿದೆ. ಹಳೆಯ ಹಲವು ಕಾನೂನುಗಳನ್ನು ರದ್ದು ಮಾಡಲಾಗಿದೆ. ಕಾರ್ಪೊರೇಟ್ ತೆರಿಗೆ ಇಳಿಸಿದ್ದೇವೆ. ಎಫ್​ಡಿಐ (ವಿದೇಶಿ ನೇರ ಬಂಡವಾಳ) ಹೂಡಿಕೆಗೆ ಹೊಸ ಅವಕಾಶಗಳನ್ನು ತೆರೆಯಲಾಗಿದೆ ಮತ್ತು ರಕ್ಷಣಾ ವಲಯದಲ್ಲೂ ಎಫ್​ಡಿಐಗೆ ಅವಕಾಶ ಕೊಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    6 ಲಕ್ಷ ಕೋಟಿ ರೂ. ಹೂಡಿಕೆ ಇನ್ವೆಸ್ಟ್ ಕರ್ನಾಟಕ ಗುರಿ; ಇಂದಿನಿಂದ ಜಾಗತಿಕ ಹೂಡಿಕೆದಾರರ ಸಮಾಗಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts