More

    ಮೀನು ಮಾರುಕಟ್ಟೆ ಯಾವಾಗ ಮುಕ್ತ?

    ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ

    ನಗರದ ಗಣೇಶಪೇಟೆಯಲ್ಲಿ ಹು-ಧಾ ಸ್ಮಾರ್ಟ್ ಸಿಟಿ ಅನುದಾನದಡಿ 5.65 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಿುಸಿರುವ ರಿಟೇಲ್ ಮೀನು ಮಾರುಕಟ್ಟೆ ಉದ್ಘಾಟನೆಯಾಗಿ ಐದು ತಿಂಗಳು ಗತಿಸುತ್ತ ಬಂದರೂ ಈವರೆಗೂ ವ್ಯಾಪಾರಸ್ಥರು ಮತ್ತು ಗ್ರಾಹಕರ ಬಳಕೆಗೆ ಮುಕ್ತವಾಗಿಲ್ಲ.

    2023ರ ಫೆಬ್ರವರಿ 19ರಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಪ್ರಸಾದ ಅಬ್ಬಯ್ಯ ಮತ್ತಿತರ ಜನಪ್ರತಿ ನಿಧಿಗಳ ಸಮ್ಮುಖದಲ್ಲಿ ಮಾರುಕಟ್ಟೆ ಲೋಕಾರ್ಪಣೆ ಮಾಡ ಲಾಗಿತ್ತು. ಆದರೆ, ಈವರೆಗೆ ಬಳಕೆಗೆ ನೀಡಿಲ್ಲ ಎಂಬುದು ವ್ಯಾಪಾರಸ್ಥರ ಅಳಲು.

    ಹೊಸ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ವ್ಯಾಪಾರಸ್ಥರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಉದ್ಘಾಟನೆ ಆದಾಗಿನಿಂದ ಹು-ಧಾ ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಮತ್ತು ಶಾಸಕರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಶೀಘ್ರ ಕೊಡುವುದಾಗಿ ಹೇಳುತ್ತ ಬಂದಿದ್ದಾರೆ ಎನ್ನುತ್ತಾರೆ ಮೀನು ವ್ಯಾಪಾರಸ್ಥರು.

    ಸ್ಥಳಾವಕಾಶ: 13,880 ಚದರ ಅಡಿ ಇರುವ ಮಾರುಕಟ್ಟೆ ಪ್ರದೇಶದಲ್ಲಿ 8,587 ಚದರ ಅಡಿಯಲ್ಲಿ ಕಟ್ಟಡ ನಿರ್ವಿುಸಲಾಗಿದೆ. ಒಟ್ಟು 36 ಮೀನು ಮಾರಾಟ ಕಟ್ಟೆಗಳನ್ನು ನಿರ್ವಿುಸಲಾಗಿದೆ. ನೆಲಮಹಡಿಯಲ್ಲಿ 96 ದ್ವಿಚಕ್ರ ವಾಹನ ನಿಲ್ಲಿಸಲು ರ್ಪಾಂಗ್ ವ್ಯವಸ್ಥೆ ಮಾಡಲಾಗಿದೆ.

    ನೀರು ಸಂಗ್ರಹ ವ್ಯವಸ್ಥೆ: ಮೀನು ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ನೀರು ಅಗತ್ಯವಾಗಿ ಬೇಕು. ಹೀಗಾಗಿ, 10 ಸಾವಿರ ಲೀಟರ್ ಸಂಗ್ರಹ ಸಾಮರ್ಥ್ಯದ ಅಂಡರ್​ಗ್ರೌಂಡ್ ವಾಟರ್ ಟ್ಯಾಂಕ್, 5 ಸಾವಿರ ಲೀಟರ್ ಸಂಗ್ರಹದ ಓವರ್​ಹೆಡ್ ಟ್ಯಾಂಕ್ ನಿರ್ವಿುಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಅಗ್ನಿ ಅವಘಡ ಸಂಭವಿಸಿದರೆ ಬೆಂಕಿ ನಂದಿಸುವ ಉದ್ದೇಶದಿಂದ 25 ಸಾವಿರ ಲೀಟರ್ ಸಂಗ್ರಹದ ಓವರ್​ಹೆಡ್ ವಾಟರ್ ಟ್ಯಾಂಕ್ ನಿರ್ವಿುಸಲಾಗಿದೆ.

    ಹು-ಧಾ ಸ್ಮಾರ್ಟ್ ಸಿಟಿ ನಿಯಮಿತವು ಗಣೇಶಪೇಟೆಯಲ್ಲಿ 5.65 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ, ಉತ್ತಮ ಪರಿಸರದೊಂದಿಗೆ ಬಳಕೆದಾರ ಸ್ನೇಹಿಯಾಗಿ ರಿಟೇಲ್ ಮಾರುಕಟ್ಟೆ ನಿರ್ವಿುಸಿದೆ. ಒಳಾಂಗಣದಲ್ಲಿ ಸಾಕಷ್ಟು ಗಾಳಿಯಾಡಲು ಟಬೋ ವೆಂಟಿಲೇಟರ್ ವ್ಯವಸ್ಥೆ ಅಳವಡಿಸಲಾಗಿದೆ. ಕಟ್ಟಡವನ್ನು ಪಾಲಿಕೆಗೆ ಹಸ್ತಾಂತರಿಸಲಾಗಿದೆ.

    | ಪ್ರಿಯಾಂಗಾ ಎಂ. ಹು-ಧಾ ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕಿ

    ಆಗಸ್ಟ್ 15ರಂದು ಬಂದರುಗಳಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮೀನುಗಾರರು ಮೀನು ಹಿಡಿಯಲು ತೆರಳುತ್ತಾರೆ. ಅಂದಿನಿಂದ ಮೀನು ಮಾರಾಟ ಶುರುವಾಗಲಿದೆ. ಅಷ್ಟರೊಳಗೆ ಹೊಸ ಮೀನು ಮಾರುಕಟ್ಟೆಯಲ್ಲಿ ಮಳಿಗೆಗಳನ್ನು ನೀಡಿದರೆ ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ.

    | ಮಹಮ್ಮದ್ ಯುಸೂಫ್ ಧಾರವಾಡಕರ

    ರಿಟೇಲ್ ಮೀನು ವ್ಯಾಪಾರಸ್ಥ ಹುಬ್ಬಳ್ಳಿ

    ಗಣೇಶಪೇಟೆಯಲ್ಲಿ ಹೊಸದಾಗಿ ಸುಸಜ್ಜಿತವಾಗಿ ನಿರ್ವಿುಸಿರುವ ಮೀನು ರಿಟೇಲ್ ಮಾರಾಟ ಮಾರುಕಟ್ಟೆ ಕಟ್ಟಡ ಕುರಿತ ಫೈಲ್ ಅನ್ನು ಪರಿಶೀಲಿಸುತ್ತೇನೆ. ನಂತರ ಜನಪ್ರತಿನಿಧಿಗಳೊಂದಿಗೆ ರ್ಚಚಿಸಿ ಆದಷ್ಟು ಬೇಗ ಬಳಕೆಗೆ ನೀಡಲು ಕ್ರಮ ಕೈಗೊಳ್ಳುತ್ತೇನೆ.

    | ಡಾ. ಈಶ್ವರ ಉಳ್ಳಾಗಡ್ಡಿ ಆಯುಕ್ತರು-ಹುಧಾಮಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts