More

    ಕೇರಳಕ್ಕೆ ಮೇ 27ರಂದು ಮುಂಗಾರು ಪ್ರವೇಶ; ಕರ್ನಾಟಕಕ್ಕೆ ಯಾವಾಗ? ಇಲ್ಲಿದೆ ಮಾಹಿತಿ..

    ಬೆಂಗಳೂರು: ಈ ಬಾರಿ ರಾಜ್ಯಕ್ಕೆ ನೈಋತ್ಯ ಮುಂಗಾರು ಮಾರುತಗಳು ಮಾಸಾಂತ್ಯ ವೇಳೆಗೆ ಪ್ರವೇಶಿಸುವ ಸಾಧ್ಯತೆ ಇದೆ. ದಕ್ಷಿಣ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಹಾಗೂ ಬಂಗಾಳಕೊಲ್ಲಿಯಲ್ಲಿ ಈಗಾಗಲೆ ಮುಂಗಾರು ಮಾರುತಗಳ ಸೃಷ್ಟಿಗೆ ಪೂರಕ ವಾತಾವರಣ ಉಂಟಾಗಿದ್ದು, ಮೇ 27ರಂದು ಕೇರಳಕ್ಕೆ ಮಾರುತಗಳು ಪ್ರವೇಶಿಸಲಿವೆ. ಬಳಿಕ ಮಾರುತಗಳು ಪ್ರಬಲವಾದರೆ ಅಂದಿನ ದಿನದಲ್ಲೇ ರಾಜ್ಯದ ಕರಾವಳಿ ಭಾಗಕ್ಕೆ ಆಗಮಿಸಲಿದೆ. ಇಲ್ಲವಾದರೆ ಒಂದರೆಡು ದಿನಗಳಲ್ಲಿ ತಡವಾಗಿ ಮಾರುತಗಳು ಆಗಮಿಸಬಹುದು.

    2017ರಲ್ಲಿ ಮೇ 30, 2018ರಲ್ಲಿ ಮೇ 29, 2019ರಲ್ಲಿ ಜೂ. 6, 2020ರಲ್ಲಿ ಜೂ. 5 ಹಾಗೂ 2021ರಲ್ಲಿ ಮೇ 31ರಂದು ಕೇರಳಕ್ಕೆ ಮಾರುತಗಳು ಪ್ರವೇಶಿಸುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, 2017 ಮತ್ತು 2018ರಲ್ಲಿ ವಾಡಿಕೆಗಿಂತ ಮುನ್ನ, 2019ರಲ್ಲಿ ಜೂ.8ರಂದು, 2020ರಲ್ಲಿ ಜೂ.1ರಂದು ಹಾಗೂ 2021ರಲ್ಲಿ ಜೂ.3ರಂದು ಮುಂಗಾರು ಮಾರುತಗಳು ಕೇರಳಕ್ಕೆ ಪ್ರವೇಶಿಸಿದ್ದವು. ಸದ್ಯದ ಹವಾಮಾನ ಪರಿಸ್ಥಿತಿ ಪ್ರಕಾರ ಈ ಬಾರಿ ವಾಡಿಕೆಗಿಂತ ಮುನ್ನವೇ ಮಾರುತಗಳು ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.

    ಸದ್ಯದ ಹವಾಮಾನ ಪರಿಸ್ಥಿತಿಯನ್ನು ಅವಲೋಕಿಸಿದರೆ ರಾಜ್ಯದಲ್ಲಿ ವಾಡಿಕೆಗಿಂತ ಮುನ್ನವೇ ಮುಂಗಾರು ಮಾರುತ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ವಾತಾವರಣದಲ್ಲಿ ಏನಾದರೂ ಬದಲಾವಣೆಯಾದರೆ ಮಾರುತಗಳು ಪ್ರವೇಶಿಸಲು ವಿಳಂಬವಾಗಬಹುದು. ಈ ಬಾರಿ ಉತ್ತಮ ವರ್ಷಧಾರೆಯಾಗಲಿದ್ದು, ರೈತರಿಗೆ ಅನುಕೂಲವಾಗಲಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸರೆಡ್ಡಿ ಹೇಳಿದ್ದಾರೆ.

    ಮಳೆ ಕುಂಠಿತ: ಸೈಕ್ಲೋನ್ ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯು ಶನಿವಾರ (ಮೇ 14) ಬಳಿಕ ಇಳಿಮುಖವಾಗಲಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ಸುರಿಯಲಿದೆ. ಶುಕ್ರವಾರ ಚಾಮರಾಜನಗರದ ಹರದನಹಳ್ಳಿಯಲ್ಲಿ 86 ಮಿಮೀ, ಮೈಸೂರಿನ ಸುತ್ತೂರಿನಲ್ಲಿ 55 ಮಿಮೀ, ರಾಮನಗರದಲ್ಲಿ 48 ಮಿಮೀ ಹಾಗೂ ಬಾಗಲಕೋಟೆಯಲ್ಲಿ 40 ಮಿಮೀ ಮಳೆ ಸುರಿದಿದೆ.

    ಬಣ್ಣಬಣ್ಣದ ಡಿಸೈನ್ ಕಾರೊಳಗಿತ್ತು ಕೊಳೆತ ಶವ; 2 ವರ್ಷಗಳಿಂದ ಒಂದೇ ಕಡೆ ನಿಲ್ಲಿಸಲಾಗಿದ್ದ ಕಾರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts