ಛೇ.. ಇದೆಂಥ ದುರಂತ!; ಮಗಳಿಗೆ ಮದ್ವೆ ಮಾಡಿಸಿ ಗಂಡನ ಮನೆಗೆ ಕಳಿಸಿದ ಬೆನ್ನಿಗೇ ತಂದೆಯ ಸಾವು..

ಕೊಡಗು: ದಿನವಿಡೀ ಮದುವೆಯ ಸಂಭ್ರಮದಲ್ಲಿದ್ದ ಈ ಮನೆಯವರು ಇನ್ನೇನು ಎಲ್ಲವೂ ಸಾಂಗವಾಗಿ ನೆರವೇರಿತು ಎಂದು ನಿಟ್ಟುಸಿರುಬಿಡುವಷ್ಟರಲ್ಲಿ ಆಗಬಾರದ್ದೊಂದು ಆಗಿಹೋಗಿದೆ. ಪರಿಣಾಮವಾಗಿ ಸಂಭ್ರಮದಿಂದ ಕೂಡಿದ್ದ ಕುಟಂಬಸ್ಥರಲ್ಲಿ ದುಃಖತಪ್ತರಾಗುವಂತಾಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆಯ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ‌ ಈ ದುರಂತ ಸಂಭವಿಸಿದ್ದು, ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಇದಕ್ಕೆ ಕಾರಣ ವಧುವಿನ ತಂದೆಯೇ ಮೃತಪಟ್ಟಿದ್ದು. ಕಿಬ್ಬೆಟ್ಟ ಗ್ರಾಮದ ಚಿನ್ನಪ್ಪ (60) ಎಂಬವರು ಇಂದು ತಮ್ಮ ಪುತ್ರಿಯ ಮದುವೆಯನ್ನು ಹಮ್ಮಿಕೊಂಡಿದ್ದರು. ಮದುವೆಯ ಬಳಿಕ ಸಂಜೆಯ ಸುಮಾರಿಗೆ ನವವಿವಾಹಿತರನ್ನು ಕಾರಿಗೆ … Continue reading ಛೇ.. ಇದೆಂಥ ದುರಂತ!; ಮಗಳಿಗೆ ಮದ್ವೆ ಮಾಡಿಸಿ ಗಂಡನ ಮನೆಗೆ ಕಳಿಸಿದ ಬೆನ್ನಿಗೇ ತಂದೆಯ ಸಾವು..