More

    ವಾಟ್ಸ್​​ಆ್ಯಪ್​ ವೆಬ್​ ಭದ್ರತೆ ಶೀಘ್ರವೇ ನಿಮ್ಮ ಬೆರಳ ತುದಿಯಲ್ಲಿ..!

    ವಾಟ್ಸ್​ಆ್ಯಪ್​ ವೆಬ್​ನ ಭದ್ರತೆ ಶೀಘ್ರ ನಿಮ್ಮ ಬೆರಳ ತುದಿಯಲ್ಲೇ ಸಿಗಲಿದೆ. ಅಂದರೆ, ಫಿಂಗರ್​ ಪ್ರಿಂಟ್​ ಕೊಟ್ಟರಷ್ಟೇ ವೆಬ್​ನಲ್ಲಿ ವಾಟ್ಸ್ಆ್ಯಪ್​ ಸೆಷನ್​ ಸಾಧ್ಯವಾಗಿಸುವಂಥ ವ್ಯವಸ್ಥೆ ನೀಡಲು ಕಂಪನಿ ಮುಂದಾಗಿದೆ.

    ಬಳಕೆದಾರರ ಖಾಸಗಿತನಕ್ಕೆ ಹೆಚ್ಚಿನ ಸುರಕ್ಷತೆ ನೀಡುವ ಸಲುವಾಗಿ ವಾಟ್ಸ್​​ಆ್ಯಪ್​ ವೆಬ್​ ಸಂಪರ್ಕಕ್ಕೆ ಫಿಂಗರ್ ಪ್ರಿಂಟ್​ ಮೂಲಕ ಅಥೆಂಟಿಕೇಷನ್​ ನೀಡುವಂತಹ ಟೆಕ್ನಾಲಜಿಯನ್ನು ಸಂಸ್ಥೆ ರೂಪಿಸುತ್ತಿದ್ದು, ಶೀಘ್ರದಲ್ಲೇ ಹೊಸ ಅಪ್​ಡೇಟ್​ನಲ್ಲಿ ಇದು ಲಭಿಸಲಿದೆ.

    ಸದ್ಯ ವೆಬ್​ ಮೂಲಕ ವಾಟ್ಸ್​ಆ್ಯಪ್​ ಬಳಸುವ ಗ್ರಾಹಕರು ತಮ್ಮ ಮೊಬೈಲ್​ಫೋನ್​ ಮೂಲಕ ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡಬೇಕಿದೆ. ಆದರೆ ಈ ಹೊಸ ಟೆಕ್ನಾಲಜಿಯಲ್ಲಿ ಫಿಂಗರ್ ಪ್ರಿಂಟ್​ ಮೂಲಕ ಅಥೆಂಟಿಕೇಷನ್​ ನಡೆಯಲಿದೆ. ಇದರಿಂದ ಗ್ರಾಹಕರಿಗೆ ಚಾಟ್​ಗೆ ಹೆಚ್ಚಿನ ಸುರಕ್ಷತೆ ಸಿಗಲಿದೆ. ಮಾತ್ರವಲ್ಲ ಗ್ರಾಹಕರ ಗ್ರಹಿಕೆಗೆ ಬರದಂತೆ ಇತರರು ಅವರ ಸೆಷನ್​ ಬಳಸದಂಥ ಭದ್ರತೆಯೂ ಇದರಿಂದ ಸಿಗಲಿದೆ ಎಂಬುದನ್ನು ವಾಟ್ಸ್​ಆ್ಯಪ್​ ಬೀಟಾ ಇನ್​ಫೋ ವರದಿ ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts