More

    ಸುಪ್ರೀಂ ಕೋರ್ಟ್ ಮುಂದೆ ವಾಟ್ಸ್​ಆ್ಯಪ್ ಹೊಸ ನೀತಿ ವಿವಾದ

    ನವದೆಹಲಿ: ಭಾರತೀಯ ಬಳಕೆದಾರರಿಗೆ ಹೊಸ ಪ್ರೈವೆಸಿ ನೀತಿ ಜಾರಿಗೊಳಿಸುವ ವಾಟ್ಸ್​ಆ್ಯಪ್ ಪ್ರಸ್ತಾವನೆಯು ಇದೀಗ ಸುಪ್ರೀಂ ಕೋರ್ಟ್​ನಲ್ಲಿ ಚರ್ಚೆಯಾಗಲಿದೆ. ಈ ಬಗ್ಗೆ ಸಲ್ಲಿಸಿರುವ ರಿಟ್ ಅರ್ಜಿಯ ಮೇಲೆ ಕೇಂದ್ರ ಸರ್ಕಾರ, ವಾಟ್ಸ್​ಆ್ಯಪ್ ಮತ್ತು ಅದರ ಒಡೆತನ ಹೊಂದಿರುವ ಫೇಸ್​ಬುಕ್​ಗೆ ನೋಟೀಸು ಜಾರಿಮಾಡಿರುವ ಸರ್ವೋಚ್ಛ ನ್ಯಾಯಾಲಯ, “ಜನರ ಗೌಪ್ಯತೆಯನ್ನು ಕಾಪಾಡಬೇಕು” ಎಂದಿದೆ.

    ವಾಟ್ಸ್​ಆ್ಯಪ್ ಪ್ರೈವೆಸಿ ನೀತಿ ಬದಲಾವಣೆಗೆ ತಡೆ ಕೋರಿ ಕರ್ಮಣ್ಯ ಸಿಂಗ್ ಸರೀನ್ ಮತ್ತು ಇತರರು ಸಲ್ಲಿಸಿರುವ ರಿಟ್ ಅರ್ಜಿ ಸೋಮವಾರ ವಿಚಾರಣೆಗೆ ಬಂದಿತು. “ವಾಟ್ಸ್​ಆ್ಯಪ್ ಮೂಲಕ ಜನರು ಕಳುಹಿಸುವ ಸಂದೇಶಗಳ ಸರ್ಕ್ಯೂಟ್​ಅನ್ನು ಫೇಸ್​ಬುಕ್​ಗೆ ಖುಲಾಸೆ ಮಾಡಲಾಗುವುದು ಎಂದು ಕೇಳಿದ್ದೇವೆ. ಜನರು ಡೇಟಾ ಮತ್ತು ಪ್ರೈವೆಸಿಯನ್ನು ಕಳೆದುಕೊಳ್ಳಬಹುದೆಂದು ಆತಂಕಕ್ಕೀಡಾಗಿದ್ದಾರೆ” ಎಂದು ಮುಖ್ಯ ನ್ಯಾಯಮೂರ್ತಿ ಶರದ್ ಎ.ಬೋಬ್ಡೆ ಹೇಳಿದರು. ವಾಟ್ಸ್​ಅ್ಯಪ್ ವಕೀಲರಾದ ಕಪಿಲ್ ಸಿಬಾಲ್ ಇದನ್ನು “ತಪ್ಪು ಮಾಹಿತಿ” ಎಂದಾಗ, ಮುಖ್ಯ ನ್ಯಾಯಮೂರ್ತಿಗಳು ಈ ಬಗ್ಗೆ ಪ್ರಮಾಣ ಮಾಡಿ ಹೇಳಿ ಎಂದು ಕೇಳಿದರು.

    ಇದನ್ನೂ ಓದಿ: ವಾಟ್ಸ್​ಆ್ಯಪ್​ ನಿಯಮ ಹಿಂಪಡೆಯಲು ಸೂಚನೆ; ಭಾರತೀಯರ ಡೇಟಾ ರಕ್ಷಣೆಗೆ ಕೇಂದ್ರ ಕ್ರಮ

    ಪ್ರೈವೆಸಿ ಸ್ಟಾಡಂರ್ಡ್​ಗಳ ವಿಷಯದಲ್ಲಿ ವಾಟ್ಸ್​ಆ್ಯಪ್ ಭಾರತೀಯ ಮತ್ತು ಯುರೋಪೀಯ ಬಳಕೆದಾರರ ನಡುವೆ ಭೇದಭಾವ ಮಾಡುತ್ತಿದೆ. ಇಲ್ಲಿನ ಬಳಕೆದಾರರ ಮಾಹಿತಿಯನ್ನು ಲಾಭಕ್ಕಾಗಿ ಇತರ ಕಂಪೆನಿಗಳೊಂದಿಗೆ ಶೇರ್ ಮಾಡಿಕೊಳ್ಳಲು ಮುಂದಾಗಿದೆ ಎಂದು ಅರ್ಜಿದಾರರ ವಕೀಲ ಶ್ಯಾಂ ದಿವಾನ್ ಆರೋಪಿಸಿದರು. ವಾಟ್ಸ್​ಆ್ಯಪ್ ವಕೀಲರು, “ಡೇಟಾ ರಕ್ಷಣೆಗಾಗಿ ಯುರೋಪಿನಲ್ಲಿ ವಿಶೇಷ ಕಾನೂನು ಇದೆ. ಆ ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಿದ್ದೇವೆ. ಭಾರತದ ಸಂಸತ್ತು ಕಾನೂನು ರಚಿಸಿದರೆ ನಾವದನ್ನು ಪಾಲಿಸುತ್ತೇವೆ” ಎಂದರು.

    “ನೀವು (ಫೇಸ್​ಬುಕ್ ಮತ್ತು ವಾಟ್ಸ್ಆ್ಯಪ್) ಎರಡು ಅಥವಾ ಮೂರು ಟ್ರಿಲಿಯನ್ ಡಾಲರ್ ಕಂಪೆನಿಯಾಗಿರಬಹುದು. ಆದರೆ ಜನರು ಅವರ ಪ್ರೈವೆಸಿಗೆ ಬೆಲೆ ಕೊಡುತ್ತಾರೆ. ಜನರ ಪ್ರೈವೆಸಿಯನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಹೇಳಿದರು. ಎರಡೂ ಕಂಪೆನಿಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಈ ಕುರಿತು ವಿವರಣೆ ನೀಡಿ ನಾಲ್ಕು ವಾರಗಳೊಳಗೆ ಹೇಳಿಕೆ ಸಲ್ಲಿಸಲು ಸೂಚಿಸಿದರು.

    ಇದನ್ನೂ ಓದಿ: ನಿಮ್ಮ ಖಾಸಗಿ ವಿಷಯ ನೀವೇ ಇಟ್ಕೊಳಿ, ನಮಗೆ ಬೇಡಪ್ಪ ಎಂದ ವಾಟ್ಸ್​ಆ್ಯಪ್​ ಏನು ಹೇಳಿದೆ ನೋಡಿ…

    ಫೆಬ್ರವರಿ 8 ರಿಂದ ತನ್ನ ಹೊಸ ಸೇವಾ ಷರತ್ತುಗಳನ್ನು ಜಾರಿಗೆ ತರುವುದಾಗಿ ವಾಟ್ಸ್​ಆ್ಯಪ್ ಸೂಚನೆ ನೀಡಿತ್ತು. ಬಳಕೆದಾರರಲ್ಲಿ ಈ ಬಗ್ಗೆ ಭಾರೀ ಪ್ರಮಾಣದಲ್ಲಿ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಅದರ ಅನುಷ್ಠಾನವನ್ನು ಮೂರು ತಿಂಗಳ ಕಾಲ ಮುಂದಕ್ಕೆ ಹಾಕಿದೆ.(ಏಜೆನ್ಸೀಸ್)

    ಟೂಲ್​ಕಿಟ್​ ಪ್ರಕರಣದಲ್ಲಿ ದಿಶಾ ನಂತರ ವಕೀಲೆ ನಿಕಿತಾ ಸೇರಿ ಇಬ್ಬರಿಗೆ ವಾರಂಟ್; ಜೂಮ್​ನಲ್ಲೇ ನಡೆದಿತ್ತು ದಾಳಿಯ ಸಂಚು!

    ನಿರುದ್ಯೋಗ ಕೊನೆಗಾಣಿಸಲು ಪಣ ತೊಟ್ಟ ಸೋನು ಸೂದ್​; ಈ ಬಾರಿ ಅವರು ಮಾಡಿರುವ ಕೆಲಸ ಹೇಗಿದೆ ನೋಡಿ…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts