More

    ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಂತಸದ ಸಂಗತಿ; ಟೆಲಿಗ್ರಾಂ ಆ್ಯಪ್​ಗೆ ಪೈಪೋಟಿಯಂತೆ ಮತ್ತೊಂದು ಅಪ್​ಡೇಟ್​..

    ಬೆಂಗಳೂರು: ಮೆಸೇಜಿಂಗ್​ ಆ್ಯಪ್​ನ ಫೀಚರ್​ಗಳಲ್ಲಿ ಬಹಳಷ್ಟು ಅಡ್ವಾನ್ಸ್ಡ್​​ ಆಗಿರುವ ಟೆಲಿಗ್ರಾಂ ಆ್ಯಪ್​ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಒಂದೊಂದೇ ಅಪ್​ಡೇಟ್​ಗಳನ್ನು ನೀಡುತ್ತಿರುವ ವಾಟ್ಸ್​ಆ್ಯಪ್​ ಇದೀಗ ಮತ್ತೊಂದು ಅಪ್​ಡೇಟ್​ ಕೊಟ್ಟಿದೆ.

    ಟೆಲಿಗ್ರಾಂ ಆ್ಯಪ್​ನಲ್ಲಿ ಹೆಚ್ಚಿನ ಫೈಲ್​ ಟ್ರಾನ್ಸ್​ಫರ್​ಗೆ ಅವಕಾಶ ಇರುವಂತೆ ಅದೇ ದಾರಿಯಲ್ಲಿ ಸಾಗಿದ ವಾಟ್ಸ್​ಆ್ಯಪ್​ 2 ಜಿಬಿ ಫೈಲ್​ ಶೇರಿಂಗ್ ಅವಕಾಶ ನೀಡಿತ್ತು. ಟೆಲಿಗ್ರಾಮ್​ನಲ್ಲಿರುವ ಮತ್ತೊಂದು ಆಪ್ಷನ್​ ಎಂದರೆ ಮೆಸೇಜ್​ಗಳಿಗೆ ರಿಯಾಕ್ಷನ್​. ಅದನ್ನೂ ವಾಟ್ಸ್​ಆ್ಯಪ್​ ಇತ್ತೀಚೆಗೆ ನೀಡಿದೆ.

    ಇದೀಗ ಅದು ತನ್ನ ಗ್ರೂಪ್ ಮೆಂಬರ್ ಸಂಖ್ಯೆಯನ್ನು ಹೆಚ್ಚಿಸಿದೆ. ಇದುವರೆಗೆ ವಾಟ್ಸ್​ಆ್ಯಪ್​ನಲ್ಲಿ ಗ್ರೂಪ್​ ಗರಿಷ್ಠ ಮಿತಿ 256 ಇದ್ದು, ಅದನ್ನು ಈಗ ದುಪ್ಪಟ್ಟು ಮಾಡಲಾಗಿದೆ. ಅಂದರೆ ಇನ್ನುಮುಂದೆ ವಾಟ್ಸ್​ಆ್ಯಪ್​ನಲ್ಲಿ 512 ನಂಬರ್​ಗಳನ್ನು ಗ್ರೂಪ್​ನಲ್ಲಿ ಸೇರಿಸಬಹುದಾಗಿದೆ.

    ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಂತಸದ ಸಂಗತಿ; ಟೆಲಿಗ್ರಾಂ ಆ್ಯಪ್​ಗೆ ಪೈಪೋಟಿಯಂತೆ ಮತ್ತೊಂದು ಅಪ್​ಡೇಟ್​..

    ಇದು ಬೀಟಾ ಯೂಸರ್​ಗಳಿಗೆ ಬಹುತೇಕ ಈಗಾಗಲೇ ಸಿಗಲಾರಂಭಿಸಿದ್ದು, ಉಳಿದವರಿಗೆ ಸದ್ಯದಲ್ಲೇ ಲಭ್ಯವಾಗಲಿದೆ. ಟೆಲಿಗ್ರಾಂ ಆ್ಯಪ್​ನಲ್ಲಿ ಈ ಸಾಮರ್ಥ್ಯ 2 ಲಕ್ಷ ಇದ್ದರೂ ಸದ್ಯದ ಅಪ್​ಡೇಟ್​ನಿಂದ ವಾಟ್ಸ್​ಆ್ಯಪ್​ ಬಳಕೆದಾರರು ಒಂದಷ್ಟು ಖುಷಿಯಾಗಿರುವುದಂತೂ ನಿಜ.

    ಹೆರಿಗೆ ಆದ 3 ವರ್ಷಗಳ ಬಳಿಕ ತಾಯಿಯ ಮಡಿಲನ್ನು ಸೇರಿದ ಮಗು; ಆಸ್ಪತ್ರೆ ಸಿಬ್ಬಂದಿಯ ಎಡವಟ್ಟು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts