ನವದೆಹಲಿ : ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂ.ಹೆಚ್.ಒ.)ಯ ಸಹಭಾಗಿತ್ವದಲ್ಲಿ ಸಾಮಾಜಿಕ ನೆಟ್ವರ್ಕಿಂಗ್ ಸಂಸ್ಥೆ ವಾಟ್ಸ್ಆ್ಯಪ್, ಹೊಸ ಸ್ಟಿಕ್ಕರ್ ಪ್ಯಾಕ್ ಒಂದನ್ನು ಬಿಡುಗಡೆ ಮಾಡಿದೆ. “ವಾಕ್ಸೀನ್ಸ್ ಫಾರ್ ಆಲ್” ಎಂಬ ಶೀರ್ಷಿಕೆಯ ಈ ಸ್ಟಿಕ್ಕರ್ ಪ್ಯಾಕ್ಅನ್ನು ಕರೊನಾ ಲಸಿಕೆಗಳ ವಿಷಯವನ್ನು ಆಧರಿಸಿ ಡಬ್ಲ್ಯೂ.ಹೆಚ್.ಒ. ವಿನ್ಯಾಸಗೊಳಿಸಿದೆ ಎನ್ನಲಾಗಿದೆ.
ಕರೊನಾ ಲಸಿಕೆಗಳ ಬಗ್ಗೆ ತನ್ನ ಬಳಕೆದಾರರು ಹೆಚ್ಚು ಸೃಜನಶೀಲವಾಗಿ ಸಂಭಾಷಣೆ ನಡೆಸಲು ಮತ್ತು ಸಂತೋಷ ವ್ಯಕ್ತಪಡಿಸಲು ಈ ಸ್ಟಿಕ್ಕರ್ ಪ್ಯಾಕ್ಅನ್ನು ವಿನ್ಯಾಸಗೊಳಿಸಲಾಗಿದೆ. ಹಾಗೇ, ಸಾಂಕ್ರಾಮಿಕದ ಸಂದರ್ಭದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಮೆಚ್ಚುಗೆಯನ್ನು ತೋರಿಸಲು ಸಹಾಯಕವಾಗಲಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ರಾಜಧಾನಿಯ 260 ಕೇಂದ್ರಗಳಲ್ಲಿ 24 ಗಂಟೆಗಳೂ ಕರೊನಾ ಲಸಿಕೆ ಲಭ್ಯ
“ಪ್ರಪಂಚದಾದ್ಯಂತ ಕರೊನಾ ಲಸಿಕೆಯನ್ನು ಹೊರತರಲಾಗುತ್ತಿರುವುದರಿಂದ, ಲಸಿಕೆ ತೆಗೆದುಕೊಳ್ಳುವುದನ್ನು ಉತ್ತೇಜಿಸುವ ಗುರಿಯಿಂದ ಈ ಪ್ಯಾಕ್ಅನ್ನು ತರಲಾಗಿದೆ. ಇದು ಭರವಸೆಯನ್ನು ಪ್ರತಿನಿಧಿಸುತ್ತದೆ” ಎಂದು ಡಬ್ಲ್ಯೂ.ಹೆಚ್.ಒ.ನ ಡಿಜಿಟಲ್ ಚಾನೆಲ್ಗಳ ಟೀಮ್ ಲೀಡರ್ ಆಂಡಿ ಪ್ಯಾಟಿಸನ್ ಹೇಳಿದ್ದಾರೆ. “ಕೋವಿಡ್-19 ಲಸಿಕೆಗಳು ಗೇಮ್ ಚೇಂಜರ್ ಆಗಿವೆ. ಆದರೆ, ಸದ್ಯಕ್ಕೆ, ನಾವು ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು, ದೈಹಿಕವಾಗಿ ದೂರವಿರಬೇಕು, ಜನಸಂದಣಿಯನ್ನು ತಪ್ಪಿಸಬೇಕು, ಒಳಾಂಗಣ ಸ್ಥಳಗಳಲ್ಲಿ ಚೆನ್ನಾಗಿ ಗಾಳಿ ಇರುವಂತೆ ನೋಡಿಕೊಳ್ಳಬೇಕು, ಮತ್ತು ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು” ಎಂದಿದ್ದಾರೆ. (ಏಜೆನ್ಸೀಸ್)
ಆರ್ಸಿಬಿಯ ಮತ್ತೊಬ್ಬ ಆಟಗಾರ ಡೇನಿಯಲ್ ಸ್ಯಾಮ್ಸ್ಗೆ ಕರೊನಾ
VIDEO | ವೇದಿಕೆಯ ಮೇಲೆ ಜಟಾಪಟಿ : ಮಿಸಸ್ ಶ್ರೀಲಂಕಾ ತಲೆಯಿಂದ ಮುಕುಟ ಕಿತ್ತುತೆಗೆದ ಮಿಸಸ್ ವರ್ಲ್ಡ್ !