More

    ಸಚಿನ್ ಪೈಲಟ್ ವಯಸ್ಸೆಷ್ಟಪ್ಪಾ…?

    ಭೋಪಾಲ್: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿರುವ ಸಚಿನ್​ ಪೈಲಟ್​ ಮತ್ತು ಬೆಂಬಲಿಗರ ವಿರುದ್ಧ ಈಗ ಕಾಂಗ್ರೆಸ್​ ಪಾಳಯದ ಹಿರಿಯರಿಂದ ತಣ್ಣನೆಯ ಆಕ್ರೋಶ ವ್ಯಕ್ತವಾಗಿದೆ. ಮಧ್ಯಪ್ರದೇಶದ ಭೋಪಾಲದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್​, ಬಂಡಾಯದ ಬಾವುಟ ಹಾರಿಸಿರುವ ಸಚಿನ್ ಪೈಲಟ್ ವಯಸ್ಸೆಷ್ಟು ಎಂದು ಕೇಳಿದ್ದಾರೆ.

    ರಾಜಸ್ಥಾನದ ಕಾಂಗ್ರೆಸ್ ಅಧ್ಯಕ್ಷ ಸ್ಥಾನ, ಉಪಮುಖ್ಯಮಂತ್ರಿ ಪದವಿಯಿಂದ ಸಚಿನ್ ಪೈಲಟ್ ಅವರನ್ನು ನಿನ್ನೆಯಷ್ಟೇ ಕಾಂಗ್ರೆಸ್ ವರಿಷ್ಠರು ವಜಾಗೊಳಿಸಿದ್ದರು. ಇದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ದಿಗ್ವಿಜಯ್ ಸಿಂಗ್, ಇಷ್ಟಕ್ಕೂ ಆತನ ವಯಸ್ಸು ಎಷ್ಟು?- ಇನ್ನೂ ಯುವಕ ಇದ್ದಾನೆ ಸಚಿನ್ ಪೈಲಟ್​. ಅವರನ್ನು ಸಂಸದರನ್ನಾಗಿ ಮಾಡಲಾಗಿತ್ತು. ಕೇಂದ್ರ ಸಚಿವ ಸ್ಥಾನವೂ ಸಿಕ್ಕಿತ್ತು. ರಾಜಸ್ಥಾನದಲ್ಲಿ ಪಕ್ಷದ ಅಧ್ಯಕ್ಷನೂ ಆಗಿದ್ದ. ಉಪಮುಖ್ಯಮಂತ್ರಿಯೂ ಆಗಿದ್ದ. ಪಕ್ಷ ಸಂಘಟನೆಯ ಹೊಣೆಗಾರಿಕೆ ಆತನ ಮೇಲಿತ್ತು. ಸ್ವಲ್ಪ ತಾಳ್ಮೆ ವಹಿಸಬೇಕಾಗಿತ್ತು ಆತ ಎಂದು ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಜಲಜನಕ ಚಾಲಿತ ವಾಹನ ಉತ್ಪಾದನೆಗೆ ಕೇಂದ್ರದ ಗ್ರೀನ್ ಸಿಗ್ನಲ್​

    ಇತ್ತೀಚಿನ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ ಪೈಲಟ್​ ಪಕ್ಷದ ಶಿಸ್ತು ಉಲ್ಲಂಘಿಸುತ್ತಿರುವುದು ಎದ್ದು ಕಾಣುತ್ತಿದೆ. ಅವರ ನಡವಳಿಕೆಗಳೆಲ್ಲವೂ ಅದೇ ರೀತಿ ಇದ್ದವು. ಈ ಯುವಕರಿಗೆ ತಾಳ್ಮೆ ಅನ್ನೋದೆ ಇಲ್ಲ ನೋಡಿ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಟ್ವಿಟರ್​ನಲ್ಲಿ ಸಚಿನ್ ಪೈಲಟ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರ ವಿಡಿಯೋಗಳನ್ನೂ ಹಂಚಿಕೊಂಡಿರುವ ಸಿಂಗ್, ರಾಷ್ಟ್ರಮಟ್ಟದಲ್ಲಿ ಈ ಇಬ್ಬರು ಯುವ ಉದಯೋನ್ಮುಖ ನೇತಾರರ ಬಗ್ಗೆ ಭಾರಿ ವಿಶ್ವಾಸ ಮತ್ತು ನಿರೀಕ್ಷೆಗಳಿದ್ದವು. ಈಗ ಅವರು ಏನು ಹೇಳುತ್ತಾರೆ ಎಂಬುದನ್ನು ಕೇಳಿ ಮತ್ತು ಏನು ಮಾಡುತ್ತಾರೆ ಎಂಬುದನ್ನೂ ನೋಡಿ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)

    ರಾಜಸ್ಥಾನ ರಾಜಕೀಯದಲ್ಲಿ ನಂಬರ್ ಗೇಮ್​ – ಈಗೇನಿದೆ ಪರಿಸ್ಥಿತಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts