More

    ಪಂಚಾಯಿತಿ ಚುನಾವಣೆ : ಮುಂದೂಡುವ‌ ಬಗ್ಗೆ ಸಚಿವ ಈಶ್ವರಪ್ಪ ಹೇಳಿದ್ದೇನು?

    ಬೆಂಗಳೂರು : ಕರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯತಿ(ತಾ.ಪಂ.) ಮತ್ತು ಜಿಲ್ಲಾ ಪಂಚಾಯತಿ(ಜಿ.ಪಂ.) ಚುನಾವಣೆಯನ್ನು ಮುಂದೂಡುವ ಬಗ್ಗೆ ಚಿಂತನೆ ನಡೆಯುತ್ತಿರುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಈ ಬಗ್ಗೆ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಿ ನಂತರ ಸಚಿವ ಸಂಪುಟ‌ ಸಭೆಯಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ ಅವರು, ಕೋವಿಡ್ ಹೆಚ್ಚಳದಿಂದ ತಾ.ಪಂ., ಜಿ.ಪಂ. ಚುನಾವಣೆ ಬೇಡವೆಂಬ ಸಲಹೆ ಬಂದಿದೆ. ಹಾಗಾಗಿ ಸದ್ಯಕ್ಕೆ ಚುನಾವಣೆ ಮುಂದಕ್ಕೆ ಹಾಕಲು ಚಿಂತನೆ ಮಾಡಿದ್ದೇವೆ ಎಂದರು. ಈ ಬಗ್ಗೆ ಸಂಪುಟ ಸಬ್ ಕಮಿಟಿ ಸಭೆಯಲ್ಲಿ ಚರ್ಚಿಸುತ್ತೇವೆ. ನಂತರ ಅಂತಿಮ ತೀರ್ಮಾನ ಮಾಡುತ್ತೇವೆ. ಅವಧಿ ಮುಗಿದ ಕಡೆ ಆಡಳಿತಾಧಿಕಾರಿ ಹಾಕಬೇಕು. ಈ ವಿಚಾರದ ಬಗ್ಗೆಯೂ ಚರ್ಚೆ ನಡೆದಿದೆ ಎಂದರು.

    ಇದನ್ನೂ ಓದಿ: ಪರೀಕ್ಷೆ ಈಗಲೇ ಬೇಡ ಎಂದು ಪ್ರತಿಭಟಿಸಿದ ವಿದ್ಯಾರ್ಥಿಗಳು- ಸ್ಪಂದಿಸಿದ ವಿವಿ, ಅನಿರ್ದಿಷ್ಟಾವಧಿಗೆ ಮುಂದೂಡಿಕೆ

    “ಕೋವಿಡ್ ಹೆಚ್ಚು ಉಲ್ಬಣವಾಗುತ್ತಿದೆ. ಮೂರುವರೆ ಕೋಟಿ ಜನ ಚುನಾವಣೆಯಲ್ಲಿ ಭಾಗಿಯಾಗಬೇಕಾಗುತ್ತದೆ. ಹಾಗಾಗಿ ಮುಂದೂಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ” ಎಂದ ಈಶ್ವರಪ್ಪ, ಇದನ್ನು ವಿವರವಾಗಿ ಕ್ಯಾಬಿನೆಟ್​​ನಲ್ಲಿ ಚರ್ಚಿಸಿ ನಂತರ ನಿರ್ಣಯವನ್ನು ಚುನಾವಣಾ ಆಯೋಗಕ್ಕೆ ಕಳಿಸುತ್ತೇವೆ ಎಂದರು.

    ರಾಜಧಾನಿಯಲ್ಲಿ ಒಂದು ವಾರ ಲಾಕ್​ಡೌನ್ ; ‘ಇಷ್ಟು ಕೇಸ್ ಬಂದರೆ ಆರೋಗ್ಯ ವ್ಯವಸ್ಥೆ ಕುಸಿದೀತು’ ಎಂದ ಸಿಎಂ

    ಮಗ ಚೇತರಿಸಿಕೊಳ್ಳಲಿಲ್ಲ ಅಂತ ಮಗಳಿಗೂ ವಿಷವುಣಿಸಿದಳು… ಮನ ಕಲಕುತ್ತೆ ಈ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts