More

    ಗ್ರಾಹಕರ ಗಮನಸೆಳೆಯುತ್ತಿದೆ ನಥಿಂಗ್ ಫೋನ್-2; ಏನಿದರ ವಿಶೇಷತೆ?

    ನವದೆಹಲಿ: ಕಳೆದ ವರ್ಷ ವಿಶ್ವದಾದ್ಯಂತ ಬಿಡುಗಡೆಯಾಗಿ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದ್ದ ನಥಿಂಗ್ ಫೋನ್ – 1ರ ಉತ್ತರಾಧಿಕಾರಿಯಾಗಿ, ನಥಿಂಗ್ ಫೋನ್ 2 ಶುಕ್ರವಾರದಂದು ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

    ಇದನ್ನೂ ಓದಿ: ಗೃಹಲಕ್ಷ್ಮೀ ನೋಂದಣಿಗೆ 400 ಕೌಂಟರ್: ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಹೇಳಿಕೆ

    ಈ ಸ್ಮಾರ್ಟ್ ಫೋನ್ 45W ಕೇಬಲ್ ಫಾಸ್ಟ್ ಚಾರ್ಜಿಂಗ್ ಜತೆಗೆ 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,700mAh ಬ್ಯಾಟರಿಯನ್ನು ಹೊಂದಿದೆ. ನಥಿಂಗ್‌ನ ಹೊಸ ಹ್ಯಾಂಡ್‌ಸೆಟ್ ಹಿಂದಿನ ಪ್ಯಾನೆಲ್‌ನಲ್ಲಿ ನವೀಕರಿಸಿದ ವಿನ್ಯಾಸಡಾ ಜತೆಗೆ ಗ್ಲಿಫ್ ಇಂಟರ್ ಫೇಸ್ ಹೊಂದಿದೆ. ಇದು 8GB + 128GB RAM , 2GB + 256GB ಮತ್ತು 12GB + 512GB ಎಂಬ ಮೂರು ಮಾದರಿಗಳಲ್ಲಿ ಲಭ್ಯವಿದ್ದು, ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ.

    6.7-ಇಂಚಿನ ಪೂರ್ಣ ಎಚ್ ಡಿ ಫ್ಲಸ್ LTPO OLED ಡಿಸ್‌ಪ್ಲೇಯನ್ನು ಹೊಂದಿದೆ. ನಥಿಂಗ್ ಫೋನ್ 2 4nm ಕ್ವಾಲಕಾಮ್ ಸ್ನ್ಯಾಪ್ ಡ್ರ್ಯಾಗನ್ 8+ Gen 1 SoC ಬೆಂಬಲದೊಂದಿಗೆ ಆಂಡ್ರಾಯ್ಡ್ 13- ಆಧಾರಿತ ನಥಿಂಗ್ ಓಎಸ್ 2.0 ಔಟ್-ಆಫ್-ದಿ-ಬಾಕ್ಸ್ ಆಪರೇಟಿಂಗ್ ಸಿಸ್ಟಮ್ ನಿಂದ ಬೆಂಬಲಿತವಾಗಿದೆ.

    ಇದನ್ನೂ ಓದಿ: ಮಾದಕ ವ್ಯಸನ ದುಷ್ಪರಿಣಾಮದ ಅರಿವು ಅಗತ್ಯ, ಮಾದಕ ವಸ್ತು ಸೇವನೆಯ ದುಷ್ಪರಿಣಾಮದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಬರ್ಕೆ ಠಾಣೆಸಬ್ ಇನ್‌ಸ್ಪೆಕ್ಟರ್ ನಾಗೇಶ್ ಹಸ್ಲರ್ ಹೇಳಿಕೆ

    ಡ್ಯುಯಲ್ ಹಿಂಬದಿಯ ಕ್ಯಾಮರಾ ಘಟಕವು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಎರಡೂ ಬೆಂಬಲದೊಂದಿಗೆ 1/1.56-ಇಂಚಿನ Sony IMX890 ಪ್ರಾಥಮಿಕ ಸಂವೇದಕದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಅಲ್ಟ್ರಾ-ವೈಡ್-ಆಂಗಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಮುಂಭಾಗದ ಕ್ಯಾಮೆರಾವು 1/2.74-ಇಂಚಿನ ಸೋನಿ IMX615 ಸಂವೇದಕವನ್ನು ಹೊಂದಿದೆ.

    ಅಲ್ಲದೇ ಭದ್ರತೆಗಾಗಿ, ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದ್ದು, ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಅಧಿಕೃತ ವೆಬ್​​ಸೈಟ್ ಅನ್ನು​​​​ ಪರಿಶೀಲಿಸಬಹುದಾಗಿದೆ. (ಏಜೆನ್ಸೀಸ್)

    ‘ಶೋಲೆ’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಈ ನಟ, ಈಗ ಒಂದು ಚಿತ್ರಕ್ಕೆ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts