More

    ಒಲಿಂಪಿಕ್ಸ್‌ನ ಈ ಕ್ರೀಡೆಯಲ್ಲಿ ಕಡಿಮೆ ಅಂಕ ಪಡೆದವರೇ ಚಿನ್ನ ಗೆಲ್ತಾರೆ!

    ಟೋಕಿಯೊ: ಕ್ರೀಡೆಯಲ್ಲಿ ಸಾಮಾನ್ಯವಾಗಿ ಹೆಚ್ಚು ಸ್ಕೋರ್ ಮಾಡಿದವರು, ಹೆಚ್ಚು ಗೇಮ್ ಗೆದ್ದವರು, ಹೆಚ್ಚು ಅಂಕ ಗಳಿಸಿದವರು ವಿಜೇತರಾಗುತ್ತಾರೆ. ಆದರೆ ಒಲಿಂಪಿಕ್ಸ್‌ನಲ್ಲಿರುವ ಕ್ರೀಡೆಗಳ ಪೈಕಿ ಇದೊಂದು ಕ್ರೀಡೆಯಲ್ಲಿ ಮಾತ್ರ ಕಡಿಮೆ ಅಂಕ ಗಳಿಸಿದವರೇ ವಿಜೇತರಾಗುತ್ತಾರೆ! ಆ ಕ್ರೀಡೆಯೇ ಸೈಲಿಂಗ್ ಅಂದರೆ ಹಾಯಿದೋಣಿ ಸ್ಪರ್ಧೆ.

    ಸೈಲಿಂಗ್‌ನಲ್ಲಿ ಆರಂಭದಲ್ಲಿ ಹಲವು ಸರಣಿ (10) ರೇಸ್‌ಗಳು ನಡೆಯುತ್ತವೆ. ಪ್ರತಿ ರೇಸ್‌ನ ಸ್ಥಾನ ಗಳಿಕೆಯ ಆಧಾರದಲ್ಲಿ ಅಂಕ ಲಭಿಸುತ್ತದೆ. ಪ್ರಥಮ, ದ್ವಿತೀಯ, ತೃತೀಯಕ್ಕೆ 1, 2, 3ರಂತೆ ಅಂಕಗಳು ಸಿಗುತ್ತವೆ. ಕೊನೆಗೆ ನಡೆಯುವ ಫೈನಲ್ ರೇಸ್‌ನಲ್ಲಿ ಪದಕ ನಿರ್ಧಾರವಾಗುತ್ತದೆ. ಅದರಲ್ಲಿ ದ್ವಿಗುಣ ಅಂಕ ನೀಡಲಾಗುತ್ತದೆ. ಅಂತಿಮವಾಗಿ ಅತ್ಯಂತ ಕಡಿಮೆ ಅಂಕ ಪಡೆದವರು ವಿಜೇತರಾಗುತ್ತಾರೆ. ಯಾಕೆಂದರೆ ಕಡಿಮೆ ಅಂಕ ಪಡೆದವರು ಹೆಚ್ಚು ಬಾರಿ 1ರಿಂದ 5ರೊಳಗಿನ ಸ್ಥಾನ ಪಡೆದವರಾಗಿರುತ್ತಾರೆ. ಅಲ್ಲದೆ ಒಂದು ರೇಸ್‌ನಲ್ಲಿ ಹಿಂದೆ ಬಿದ್ದರೂ ಮತ್ತೊಂದು ರೇಸ್‌ನಲ್ಲಿ ಪುಟಿದೇಳುವ ಅವಕಾಶವಿರುತ್ತದೆ.

    ಇದನ್ನೂ ಓದಿ: ಟೋಕಿಯೊದಲ್ಲಿ ಒಂದೇ ದಿನಕ್ಕೆ ಸಾನಿಯಾ-ಅಂಕಿತಾ, ಪ್ರಣತಿ ಸವಾಲು ಅಂತ್ಯ

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ನಾಲ್ವರು ಸೈಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಈ ಪೈಕಿ ತಮಿಳುನಾಡಿನ ನೇತ್ರಾ ಕುಮಾನನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಮೊದಲ ಮಹಿಳಾ ಸೈಲರ್ ಆಗಿದ್ದಾರೆ. ವಿಷ್ಣು ಸರವಣನ್, ವರುಣ್ ಠಕ್ಕರ್ ಮತ್ತು ಕೊಡಗು ಮೂಲದ ಕೆಸಿ ಗಣಪತಿ ಸ್ಪರ್ಧೆಯಲ್ಲಿರುವ ಇತರ ಮೂವರು ಭಾರತೀಯರು.

    ಒಲಿಂಪಿಕ್ಸ್‌ನಲ್ಲಿ ಮಹಿಳಾ ಕ್ರೀಡಾಪಟುಗಳನ್ನು ಸೆಕ್ಸಿಯಾಗಿ ಚಿತ್ರೀಕರಿಸುವಂತಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts