More

    ಪ್ಯಾನ್​-ಆಧಾರ್ ಲಿಂಕ್​; ಕಡೇ ದಿನಾಂಕ ಮುಂದೂಡಲಾಗಿದ್ಯಾ?: ನಿಜಕ್ಕೂ ಕೊನೇ ದಿನ ಯಾವುದು?

    ಬೆಂಗಳೂರು: ಈಗ ಕೆಲವು ದಿನಗಳಿಂದ ಬಹುತೇಕ ಎಲ್ಲರ ಬಾಯಲ್ಲೂ ಪ್ಯಾನ್​ ಮತ್ತು ಆಧಾರ್ ಲಿಂಕ್​ ವಿಷಯದ್ದೇ ಮಾತು. ಇದೇ ಮಾ. 31ರ ಒಳಗೆ ಪ್ಯಾನ್​-ಆಧಾರ್ ಲಿಂಕ್ ಮಾಡಿಸಬೇಕು. ಒಂದು ವೇಳೆ ಅಷ್ಟರೊಳಗೆ ಲಿಂಕ್​ ಮಾಡಿಸದೇ ಇದ್ದರೆ ಅಂಥವರ ಪ್ಯಾನ್ ಏ. 1ರಿಂದ ನಿಷ್ಕ್ರಿಯವಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಇನ್ನುಳಿದಿರುವುದು ಕೆಲವೇ ದಿನ, ಒಂದು ವಾರ ಕೂಡ ಇಲ್ಲ ಎಂದು ಹಲವರು ಲಿಂಕ್ ಮಾಡಿಸಿಕೊಳ್ಳಲು ತರಾತುರಿ ಮಾಡುತ್ತಿದ್ದರೆ, ಇನ್ನು ಕೆಲವರು ಕಡೇ ದಿನಾಂಕವನ್ನು ಒಂದು ವರ್ಷ ವಿಸ್ತರಿಸಲಾಗಿದೆ. 2024ರ ಮಾ. 31ರ ವರೆಗೂ ಸಮಯವಿದೆ ಎಂದು ಹೇಳಲಾರಂಭಿಸಿದ್ದಾರೆ. ಹಾಗಂತ ಯಾರಾದರೂ ಸುಮ್ಮನಾದರೆ ಪ್ಯಾನ್ ನಿಷ್ಕ್ರಿಯವಾಗಿಬಿಡುತ್ತದೆ. ಏಕೆಂದರೆ ಪ್ಯಾನ್-ಆಧಾರ್ ಲಿಂಕ್ ಮಾಡಿಸಲು ವಿಧಿಸಿರುವ ಗಡುವನ್ನು ವಿಸ್ತರಿಸಿಲ್ಲ.

    ಇದನ್ನೂ ಓದಿ: ಚುನಾವಣಾ ಆಯೋಗಕ್ಕೆ ವಿಶೇಷ ಮನವಿ: ಜಾರಿಯಾಗುತ್ತಾ ಹೊಸ ಸೂಚನೆ?

    ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಿಸಲು ವಿಧಿಸಿರುವ ಗಡುವನ್ನು ಒಂದು ವರ್ಷ ಮಂದೂಡಲಾಗಿದ್ದು, ಆ ಕುರಿತ ಆದೇಶದ ತುಣುಕನ್ನು ಹಂಚಿಕೊಳ್ಳುತ್ತಿರುವ ಕೆಲವರು ಪ್ಯಾನ್​-ಆಧಾರ್ ಲಿಂಕ್ ಗಡುವು ಒಂದು ವರ್ಷ ಮುಂದಕ್ಕೆ ಹೋಗಿದೆ ಎಂದು ತಪ್ಪು ಮಾಹಿತಿ ಹರಿಯಬಿಡುತ್ತಿದ್ದಾರೆ. ಆದರೆ ಪ್ಯಾನ್​-ಆಧಾರ್ ಲಿಂಕ್ ಗಡುವು ಮುಂದೂಡಿಕೆ ಆಗಿಲ್ಲ. ಅದು ಈಗಾಗಲೇ ಹೇಳಿರುವಂತೆ ಇದೇ ಮಾ.31ಕ್ಕೆ ಮುಗಿಯಲಿದೆ. ಆದಾಯ ತೆರಿಗೆ ಇಲಾಖೆ ವೆಬ್​ಸೈಟ್​ನಲ್ಲಿ ಕೂಡ ಈ ಸುದ್ದಿ ಅಪ್​ಲೋಡ್ ಆಗುತ್ತಿರುವ ಈ ಕ್ಷಣದವರೆಗೂ ಕಡೇ ದಿನಾಂಕ 2023ರ ಮಾ. 31 ಎಂದೇ ತೋರಿಸುತ್ತಿದೆ. ಹಾಗಾಗಿ ಯಾರೂ ತಪ್ಪು ಮಾಹಿತಿಯನ್ನು ನಂಬಿ ಫಜೀತಿಗೆ ಒಳಗಾಗದಿರುವುದು ಒಳಿತು.

    ಪ್ಯಾನ್​-ಆಧಾರ್ ಲಿಂಕ್​; ಕಡೇ ದಿನಾಂಕ ಮುಂದೂಡಲಾಗಿದ್ಯಾ?: ನಿಜಕ್ಕೂ ಕೊನೇ ದಿನ ಯಾವುದು?

    ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

    ಚುನಾವಣೆಗೆ ನಿಲ್ಲುವವರಿಗೂ ಇಲ್ಲಿ 5 ಲಕ್ಷ ರೂ. ಕೊಡ್ತಾರೆ!; ಷರತ್ತುಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts