More

  ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಫೇವರೆಟ್ ಫುಡ್ ಯಾವ್ದು ಗೊತ್ತಾ?

  ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತೊಮ್ಮೆ 100 ಬಿಲಿಯನ್‌ ಡಾಲರ್‌ ಒಡೆಯರಾಗಿ ಮೂಡಿ ಬಂದಿದ್ದಾರೆ. ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್ ಅಂಬಾನಿ ಸಂಪತ್ತು ಗುರುವಾರ 2.8 ಬಿಲಿಯನ್‌ ಡಾಲರ್‌ಗಳಷ್ಟು ಏರಿಕೆ ಕಂಡಿದ್ದು, 101.8 ಬಿಲಿಯನ್‌ ಡಾಲರ್‌ ತಲುಪಿದೆ.

  ಇದನ್ನೂ ಓದಿ:“ಸರಿಯಾಗಿ ನೆನಪಿದೆ..” 35 ವರ್ಷಗಳ ಹಿಂದೆ ‘ವ್ಯಾಲೆಂಟೈನ್ ಡೇ’ಯಂದು ಗೌರಿಗೆ ಶಾರುಖ್ ಕೊಟ್ಟ ಸರ್ಪ್ರೈಸ್ ಗಿಫ್ಟ್ ಇದೇ ನೋಡಿ!

  ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಬಗ್ಗೆ ತಿಳಿದುಕೊಳ್ಳಲು ಜನರು ತುಂಬಾನೆ ಆಕಸ್ತಿ ವಹಿಸುತ್ತಾರೆ. ಅವರ ಜೀವನ ಶೈಲಿ ಹೇಗಿರುತ್ತೆ? ಅವರು ಏನು ತಿನ್ನುತ್ತಾರೆ ಇತ್ಯಾದಿ? ಅವರ ಇಷ್ಟವಾ ಜಾಗ..ಇತ್ಯಾದಿ ಇಂದು ನಾವು ನಿಮಗೆ ಮುಕೇಶ್ ಅಂಬಾನಿ ಅವರ ಆಹಾರ ಕ್ರಮದ ಬಗ್ಗೆ ಹೇಳ್ತೀವಿ..ನೋಡಿ

  ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಫೇವರೆಟ್ ಫುಡ್ ಯಾವ್ದು ಗೊತ್ತಾ?

  ಮುಖೇಶ್ ಅಂಬಾನಿ ಹೆಸರು ಕೇಳಿದ ತಕ್ಷಣ, ಅವರ ಬಗ್ಗೆ ತಿಳಿದುಕೊಳ್ಳಲು ಜನರು ಇಷ್ಟ ಪಡ್ತಾರೆ. ಅವರು ಮನೆಯಲ್ಲಿ ಏನು ಮಾಡುತ್ತಾರೆ, ಮನೆಯಲ್ಲಿ ಎಷ್ಟು ಸೇವಕರು ಇದ್ದಾರೆ, ಮುಖೇಶ್ ಅಂಬಾನಿ ಅವರ ನೆಚ್ಚಿನ ಕಾರು ಯಾವುದು ಇತ್ಯಾದಿ. ಆದರೆ ಜನರು ತಿಳಿದುಕೊಳ್ಳಲು ಬಯಸುವ ಮತ್ತೊಂದು ವಿಷಯವಿದೆ, ಹೌದು ಇವರ ನೆಚ್ಚಿನ ಆಹಾರದ ಬಗ್ಗೆ ತಿಳಿಯೋಣ…

  ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅವರು 2022ರ ಜೂನ್‌ ನಂತರ ಮೊದಲ ಬಾರಿಗೆ 100 ಬಿಲಿಯನ್ ಡಾಲರ್‌ ಕ್ಲಬ್‌ಗೆ ಮರಳಿದ್ದಾರೆ. ಆದರೂ ಮುಖೇಶ್​ ಅಂಬಾನಿ ಅವರ ಆದರೆ ಇವರ ಜೀವನಶೈಲಿ ಮತ್ತು ಆಹಾರ ಕ್ರಮ ತುಂಬಾನೆ ಸಿಂಪಲ್ ಆಗಿದೆ. ಲಕ್ಸುರಿಯಾದ ಬದುಕು ಇದ್ದರೂ ಅವರಿಗೆ ಸಿಂಪಲ್ ಆಗಿರುವ ಜೀವನಶೈಲಿ ಮತ್ತು ಆಹಾರ ಸೇವಿಸೋದು ತುಂಬಾ ಇಷ್ಟ.

  ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಫೇವರೆಟ್ ಫುಡ್ ಯಾವ್ದು ಗೊತ್ತಾ?

  ಖಾಸಗಿ ಮಾಧ್ಯಮ ನಡೆಸಿದ ಸಂದರ್ಶನದಲ್ಲಿ ಮುಖೇಶ್​ ಅಂಬಾನಿ ಅವರು ಯಾವ ಬಗೆಯ ಆಹಾರ ಇಷ್ಟ ಪಡ್ತಾರೆ ಎಂದು ಕೇಳಿದಾಗ ಅವರು ನಾನು ಸೌತ್ ಇಂಡಿಯಾ ಆಹಾರ ನಾನು ತುಂಬಾ ಇಷ್ಟ ಪಡ್ತೀನಿ. ಇಡ್ಲಿ ಸಾಂಬಾರ್​ ತುಂಬಾ ಇಷ್ಟ ಪಡ್ತೀನಿ ಎಂದು ಹೇಳುತ್ತಾರೆ.

  ಮುಂಬೈನಲ್ಲಿ ಫೇವರೇಟ್​ ಜಾಗ ಯಾವುದು ಎಂದು ಕೇಳಿದಾಗ ಕಿಂಗ್ಸ್ ಸರ್ಕಲ್‌ನಲ್ಲಿರುವ ಪ್ರಸಿದ್ಧ ದಕ್ಷಿಣ ಭಾರತದ ರೆಸ್ಟೋರೆಂಟ್ ಮೈಸೂರು ಕೆಫೆ ಅವರ ನೆಚ್ಚಿನ ಊಟದ ಸ್ಥಳಗಳಲ್ಲಿ ಒಂದಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ರೆಸ್ಟೋರೆಂಟ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ICT) ಗೆ ಹತ್ತಿರದಲ್ಲಿದೆ. ಅಲ್ಲಿ ಮುಖೇಶ್ ಅಂಬಾನಿ ಅವರು 1974-79 ರಾಸಾಯನಿಕ ಎಂಜಿನಿಯರಿಂಗ್ನಲ್ಲಿ ಬಿಇ ಪದವಿ ಪಡೆದಿದ್ದರು.

  ಮೈಸೂರು ಕೆಫೆ ಬಳಿ ನೀವು ಹೋಗ್ತೀರ ಮೈಸೂರು ಕಫೆ ನಿಮ್ಮ ಬಳಿ ಬರುತ್ತಾ ಎಂಬ ಪ್ರಶ್ನೆಗೆ ನಾವು ಹೋಗ್ತೀವಿ ಕಫೆ ಮನೆ ಹತ್ತಿರ ಬರುತ್ತೆ ಎಂದು ಕಾಮಿಡಿಯಾಗಿ ಉತ್ತರಿಸಿದರು.

  ಕುದುರೆ ಏರಿದ ನಟಿ ಸಂಯುಕ್ತಾ ಮೆನನ್, ಯಾವ ಸಿನಿಮಾಕ್ಕೆ ತಯಾರಿ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts