More

    ಈ ಭಾರತೀಯ ಮಹಿಳೆಯರು ಇದುವರೆಗೂ ಚಿನ್ನಾಭರಣ ಖರೀದಿಸಿಯೇ ಇಲ್ವಂತೆ!

    ನವದೆಹಲಿ: ಚಿನ್ನಾಭರಣ ಖರೀದಿಯಲ್ಲಿ ಭಾರತೀಯ ಮಹಿಳೆಯರು ಮುಂದೆ ಎಂಬ ವಿಚಾರವನ್ನು ಇದುವರೆಗೂ ಕೇಳುತ್ತಲೇ ಬಂದಿದ್ದೇವೆ. ಆದರೆ, ವರ್ಲ್ಡ್​ ಗೋಲ್ಡ್ ಕೌನ್ಸಿಲ್​ (ಡಬ್ಲ್ಯುಜಿಸಿ) ಇಲ್ಲೊಂದು ಅಚ್ಚರಿಯ ಸಂಗತಿಯನ್ನು ಪ್ರಕಟಿಸಿದೆ. ಈ ಭಾರತೀಯ ಮಹಿಳೆಯರು ಇದುವರೆಗೂ ಚಿನ್ನಾಭರಣ ಖರೀದಿಸಿಯೇ ಇಲ್ಲ ಎಂಬ ಅಂಶವದು!

    ರಿಟೇಲ್ ಗೋಲ್ಡ್ ಇನ್​ಸೈಟ್ಸ್​: ಇಂಡಿಯನ್ ಜುವೆಲ್ಲರಿ ಎಂಬ ವರದಿಯಲ್ಲಿ ಡಬ್ಲ್ಯುಜಿಸಿ ಈ ವಿಷಯವನ್ನು ಉಲ್ಲೇಖಿಸಿದೆ. ಈ ವರದಿ ಪ್ರಕಾರ, ಭಾರತದ ಮಹಿಳೆಯರ ಪೈಕಿ ಶೇಕಡ 37ರಷ್ಟು ಮಹಿಳೆಯರು ಇದುವರೆಗೂ ಚಿನ್ನಾಭರಣವನ್ನು ಖರೀದಿಸಿಯೇ ಇಲ್ಲ. ಈ ಶೇಕಡ 37 ಮಹಿಳೆಯರ ಪೈಕಿ ಶೇಕಡ 44 ಮಹಿಳೆಯರು ಗ್ರಾಮೀಣ ಭಾಗದವರು. ಶೇಕಡ 30 ನಗರ ಪ್ರದೇಶದವರು. ಚಿನ್ನಾಭರಣ ಇಂಡಸ್ಟ್ರಿಗೆ ಇವರು ಈಗ ಹೊಸ ಟಾರ್ಗೆಟ್​ ಅಥವಾ ಸಂಭಾವ್ಯ ಗ್ರಾಹಕರು! .

    ಇದನ್ನೂ ಓದಿ: ಲಗ್ನ ನೆಚ್ಚಿಕೊಂಡವರ ಬದುಕಿಗೆ ವಿಘ್ನ: ಬಾಣಸಿಗರು, ಡೆಕೋರೇಟರ್ಸ್, ಜವಳಿ ವ್ಯಾಪಾರಿಗಳು ಕಕ್ಕಾಬಿಕ್ಕಿ

    ಚಿನ್ನಾಭರಣ ಇದುವರೆಗೂ ಖರೀದಿಸಿಯೇ ಇರದ ಈ ಮಹಿಳೆಯರಿಗೆ ಯಾವತ್ತೂ ಚಿನ್ನದ ಮೇಲೆ ವ್ಯಾಮೋಹ ಬಂದಿಲ್ಲವಂತೆ. ಅದನ್ನು ಖರೀದಿಸಬೇಕು. ಧರಿಸಬೇಕು ಎಂಬಿತ್ಯಾದಿ ಆಸೆ ಒಮ್ಮೆಯೂ ಕಾಡಿಲ್ಲವಂತೆ. ಅಂದಹಾಗೆ, ಈ ಅಧ್ಯಯನವನ್ನು ಹಾಲ್ ಆ್ಯಂಡ್ ಪಾರ್ಟನರ್ಸ್​ ಸಂಸ್ಥೆ ಮಾಡಿದ್ದು, ಇದಕ್ಕಾಗಿ ಭಾರತ, ಚೀನಾ, ಅಮೆರಿಕದ 18-65 ವರ್ಷದೊಳಗಿನ 6,000 ಗ್ರಾಹಕರಿಂದ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದಾರೆ.

    ಭಾರತೀಯ ಮಹಿಳೆಯರು ಚಿನ್ನಾಭರಣ ಖರೀದಿಯನ್ನು ಹೂಡಿಕೆಯಾಗಿ ಕಾಣುತ್ತಾರೆ. ಸಂಕಷ್ಟಕಾಲದಲ್ಲಿ ನೆರವಿಗೆ ಬರುವ ಆಪದ್ಧನ ಎಂದೂ ಪರಿಗಣಿಸುತ್ತಾರೆ. ಇದನ್ನು ಸಮಾಜ ಕೂಡ ಒಪ್ಪಿಕೊಂಡಿದೆ. ಆದಾಗ್ಯೂ, ಸದ್ಯದ ಸನ್ನಿವೇಶದಲ್ಲಿ ಮಹಿಳೆಯರ ಸ್ವಾಭಿವ್ಯಕ್ತಿ, ಘನತೆ ಅಥವಾ ಫ್ಯಾಷನ್ ಅನ್ನು ಎತ್ತಿ ಹಿಡಿಯವಲ್ಲಿ ಹಿಂದೆ ಬಿದ್ದಿದೆ ಎಂಬ ಅಂಶವೂ ಅಧ್ಯಯನದ ವೇಳೆ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: VIDEO: ಮಿನಿಯನ್ಸ್​ ಮತ್ತು ಗ್ರೂ ಮೂಲಕ COVID19 ಕುರಿತ ಜಾಗೃತಿ

    ಭಾರತದಲ್ಲಿ ಚಿನ್ನ ಖರೀದಿಸಿದವರು ಬಹುತೇಕ ಯುವತಿಯರೇ ಆಗಿದ್ದು 18-24 ವರ್ಷದೊಳಗಿನವರ ಪಾಲು ಶೇಕಡ 33. ಕಳೆದ 12 ತಿಂಗಳ ಅವಧಿಯಲ್ಲಿ ಹೆಚ್ಚು ಚಿನ್ನ ಖರೀದಿಸಿದವರು ಇವರೇ. ಭವಿಷ್ಯದಲ್ಲಿ ಖರೀದಿಸಬೇಕು ಎಂಬ ವಿಚಾರದಲ್ಲಿ ಇವರಿಗೆ ಹೆಚ್ಚೇನೂ ಒಲವು ಇದ್ದಂತಿಲ್ಲ. ಅಷ್ಟೇ ಅಲ್ಲ ಇವರಿಗೆ ಚಿನ್ನದ ಮೇಲೆ ಭಾವನಾತ್ಮಕ ನಂಟು ಕೂಡ ಇಲ್ಲ ಎಂದು ವರದಿ ಹೇಳಿದೆ.
    ಡಬ್ಲ್ಯುಜಿಸಿಯ ಭಾರತದ ಎಂಡಿ ಸೋಮಸುಂದರಂ ಪಿ.ಆರ್. ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಅಧ್ಯಯನ ವರದಿಯು ಬದಲಾಗುತ್ತಿರುವ ಗ್ರಾಹಕರ ಅಭಿರುಚಿಯನ್ನು ಬಿಂಬಿಸುತ್ತದೆ. ಇದು ಗೋಲ್ಡ್ ಜುವೆಲ್ಲರಿ ಇಂಡಸ್ಟ್ರಿಗೂ ತಾನು ಸಾಗಬೇಕಾದ ಹಾದಿಯ ಸ್ಪಷ್ಟ ಚಿತ್ರಣವನ್ನು ಒದಗಿಸುತ್ತದೆ ಎಂದಿದ್ದಾರೆ. (ಏಜೆನ್ಸೀಸ್)

    ಒಂದು ಲಕ್ಷ ದಾಟಿತು ಅಮೆರಿಕದಲ್ಲಿ ಕರೊನಾ ಸೋಂಕಿತರ ಸಾವಿನ ಸಂಖ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts