More

    ವೆಸ್ಟ್ ಇಂಡೀಸ್ ಹೋರಾಟ ಜೀವಂತ ; ಬಾಂಗ್ಲಾದೇಶ ಎದುರು ರೋಚಕ ಜಯ

    ಶಾರ್ಜಾ: ಬಾಂಗ್ಲಾದೇಶ ತಂಡಕ್ಕೆ ಕಡಿವಾಣ ಹೇರಲು ಯಶಸ್ವಿಯಾದ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ 3 ರನ್‌ಗಳಿಂದ ರೋಚಕ ಜಯ ದಾಖಲಿಸುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಹೋರಾಟವನ್ನು ಜೀವಂತವಾಗಿರಿಸಿಕೊಂಡಿತು. ಹ್ಯಾಟ್ರಿಕ್ ಸೋಲಿನಿಂದ ಪಾರಾದ ವಿಂಡೀಸ್ ತಂಡ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಮತ್ತೊಂದೆಡೆ, ಹ್ಯಾಟ್ರಿಕ್ ಸೋಲು ಕಂಡ ಬಾಂಗ್ಲಾ ತಂಡದ ಮುಂದಿನ ಹಾದಿ ಬಂದ್ ಆಯಿತು.

    ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ, ಬಾಂಗ್ಲಾ ತಂಡದ ಸಂಘಟಿತ ಬೌಲಿಂಗ್ ನಡುವೆಯೂ 7 ವಿಕೆಟ್‌ಗೆ 142 ರನ್ ಕಲೆಹಾಕಿತು. ಬಳಿಕ ಸಾಧಾರಣ ಮೊತ್ತ ಬೆನ್ನಟ್ಟಿದ ಬಾಂಗ್ಲಾದೇಶ ಲಿಟನ್ ದಾಸ್ (44ರನ್, 43 ಎಸೆತ, 4 ಬೌಂಡರಿ) ಹಾಗೂ ಮೊಹಮದುಲ್ಲ (31*ರನ್, 24 ಎಸೆತ, 2 ಬೌಂಡರಿ, 1 ಸಿಕ್ಸರ್) ಪ್ರತಿಹೋರಾಟದ ನಡುವೆಯೂ 5 ವಿಕೆಟ್‌ಗೆ 139 ರನ್ ಗಳಿಸಲಷ್ಟೇ ಶಕ್ತವಾಯಿತು.

    ವೆಸ್ಟ್ ಇಂಡೀಸ್: 7 ವಿಕೆಟ್‌ಗೆ 142 (ಕ್ರಿಸ್ ಗೇಲ್ 4, ರೋಸ್ಟನ್ ಚೇಸ್ 39, ನಿಕೋಲಸ್ ಪೂರನ್ 40, ಜೇಸನ್ ಹೋಲ್ಡರ್ 15*, ಮೆಹದಿ ಹಸನ್ 27ಕ್ಕೆ 2, ಮುಸ್ತಾಫಿಜುರ್ ರೆಹಮಾನ್ 43ಕ್ಕೆ 2, ಶೋರಿುಲ್ ಇಸ್ಲಾಂ 20ಕ್ಕೆ 2), ಬಾಂಗ್ಲಾದೇಶ: 5 ವಿಕೆಟ್‌ಗೆ 139 (ಲಿಟನ್ ದಾಸ್ 44, ಸೌಮ್ಯ ಸರ್ಕಾರ್ 17, ಮೊಹಮದುಲ್ಲ 31*, ರವಿ ರಾಂಪಾಲ್ 25ಕ್ಕೆ 1, ಜೇಸನ್ ಹೋಲ್ಡರ್ 22ಕ್ಕೆ 1, ಆಂಡ್ರೆ ರಸೆಲ್ 29ಕ್ಕೆ 1, ಅಕೀಲ್ ಹುಸೇನ್ 24ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts