More

    ಪಶ್ಚಿಮ ಬಂಗಾಳದ ಈ ಏಳು ಜಿಲ್ಲೆಗಳಲ್ಲಿ ಇಂಟರ್​ನೆಟ್​ ನಿರ್ಬಂಧ; ಕಾರಣವಿದು…

    ಕೋಲ್ಕತ: ಇಂಟರ್​ನೆಟ್​ ಸೌಲಭ್ಯವೇ ಇರದಿದ್ದರೆ ಯಾವುದೂ ನೆಟ್ಟಗಿಲ್ಲ ಅಂತನಿಸುವುದು ಸಹಜ. ಸುಲಭದಲ್ಲಿ ಕೆಲವೇ ನಿಮಿಷಗಳಲ್ಲಿ ಆಗಬಹುದಾದ ಅದೆಷ್ಟೋ ಕೆಲಸಗಳಿಗೂ ಗಂಟೆಗಟ್ಟಲೆ ಸಮಯ ಬೇಕಾಗಬಹುದು. ಅಂಥದ್ದೊಂದು ಪರಿಸ್ಥಿತಿಯನ್ನು ಪಶ್ಚಿಮ ಬಂಗಾಳದ ಏಳು ಜಿಲ್ಲೆಗಳ ಜನರು ಮುಂದಿನ ಕೆಲವು ದಿನಗಳವರೆಗೆ ಎದುರಿಸಬೇಕಾಗಿದೆ.

    ಏಕೆಂದರೆ, ಇಂಟರ್​ನೆಟ್​ಗೆ ನಿರ್ಬಂಧ ಹೇರಿ ಪಶ್ಚಿಮ ಬಂಗಾಳದ ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಅದರ ಪ್ರಕಾರ ಪಶ್ಚಿಮ ಬಂಗಾಳದ ಜಿಲ್ಲೆಗಳಾದ ಮಲ್ದ, ಮುರ್ಷಿಬಾದ್, ಉತ್ತರ್ ದಿನಜ್​ಪುರ್, ಕೂಚ್​ಬೆಹರ್​, ಜಲ್ಪೈಗುರಿ, ಬಿರ್ಬುಹಂ ಮತ್ತು ದಾರ್ಜೀಲಿಂಗ್​ನ ಕೆಲವು ಬ್ಲಾಕ್​ಗಳಲ್ಲಿ ಮಾ. 7ರಿಂದ 9. ಮಾ. 11 ಮತ್ತು 12, ಮಾ. 15 ಮತ್ತು 16ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 3.15ರವರೆಗೂ ಇಂಟರ್​ನೆಟ್​ ಸೌಲಭ್ಯ ಸ್ಥಗಿತಗೊಂಡಿರಲಿದೆ. ಆದರೆ ವಾಯ್ಸ್​ ಕಾಲ್​, ಎಸ್​ಎಂಎಸ್​ ಹಾಗೂ ಪತ್ರಿಕೆಗಳಿಗೆ ನಿರ್ಬಂಧವಿಲ್ಲ.

    ಅಂತರ್ಜಾಲ ಸಂಪರ್ಕ ಬಳಸಿ ಕಾನೂನುಬಾಹಿರ ಚಟುವಟಿಕೆಗಳು ನಡೆಯಲಿವೆ ಎಂದು ಗುಪ್ತದಳ ಸರ್ಕಾರಕ್ಕೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಬಂಧ ಹೇರಲಾಗಿದೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

    52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ದೇಶವಿದು..

    ಒಂದು ಭೀಕರ ಸ್ಫೋಟ, ವಾರ ಕಳೆಯುವಷ್ಟರಲ್ಲಿ 14 ಸಾವು; ಸೀಮಂತದ ಬೆನ್ನಿಗೇ ಭಾರಿ ಸೂತಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts