More

    ಕಾಂಗ್ರೆಸ್ ವಿರುದ್ಧ ದೀದಿ ತೀವ್ರ ಅಸಮಾಧಾನ; ಜ.13ರಂದು ಸೋನಿಯಾ ಗಾಂಧಿ ಕರೆದಿರುವ ಪ್ರತಿಪಕ್ಷಗಳ ಸಭೆ ಬಹಿಷ್ಕರಿಸಲು ನಿರ್ಧಾರ

    ಕೋಲ್ಕತ್ತ: ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಜ.13ರಂದು ಕರೆದಿರುವ ಪ್ರತಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳದೆ ಇರಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಹಾಗೂ ವಿವಿಧ ಯೂನಿವರ್ಸಿಟಿಗಳ ಕ್ಯಾಂಪಸ್​ಗಳಲ್ಲಿನ ಹಿಂಸಾಚಾರ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ನವದೆಹಲಿಯಲ್ಲಿ ಜ.13ರಂದು ಸೋನಿಯಾ ಗಾಂಧಿ ಸಭೆ ನಡೆಸಲು ನಿರ್ಧರಿಸಿದ್ದಾರೆ. ಈ ಸಭೆಗೆ ಲೆಫ್ಟ್ ಫ್ರಂಟ್​ ಸೇರಿ ಎಲ್ಲ ಪ್ರತಿಪಕ್ಷಗಳನ್ನೂ ಆಹ್ವಾನಿಸಿದ್ದಾರೆ. ಸಿಪಿಐ (ಎಂ) ಮುಖ್ಯಸ್ಥ ಸೀತಾರಾಮ್​ ಯೆಚೂರಿ ಸಭೆಯ ನೇತೃತ್ವ ವಹಿಸಲಿದ್ದಾರೆ.

    ಆದರೆ ಈ ಸಭೆಯನ್ನು ಬಹಿಷ್ಕರಿಸುವುದಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
    ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಬಂದ್​ ವೇಳೆ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯಲು ಕಾಂಗ್ರೆಸ್​ ಹಾಗೂ ಲೆಫ್ಟ್​ ಫ್ರಂಟ್​ಗಳೇ ಕಾರಣ. ನಾನೆಂದೂ ಹಿಂಸಾಚಾರವನ್ನು ಬೆಂಬಲಿಸುವುದಿಲ್ಲ. ಇದೇ ಕಾರಣಕ್ಕೆ ಸೋನಿಯಾ ಗಾಂಧಿಯವರು ಕರೆದಿರುವ ಸಭೆಯನ್ನೂ ಬಹಿಷ್ಕರಿಸುತ್ತಿದ್ದೇನೆ ಎಂದು ದೀದಿ ತಿಳಿಸಿದ್ದಾರೆ.

    24 ಗಂಟೆಗಳ ಭಾರತ್​ ಬಂದ್​ ವೇಳೆ ಪಶ್ಚಿಮಬಂಗಾಳದಲ್ಲಿ ಬಸ್​ಗಳು ಧ್ವಂಸವಾಗಿದ್ದವು. ಪೊಲೀಸ್​ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ರೈಲ್ವೆ ಹಳಿಗಳನ್ನೂ ಬ್ಲಾಕ್​ ಮಾಡಲಾಗಿತ್ತು. ಇದಕ್ಕೆಲ್ಲ ಕಾಂಗ್ರೆಸ್ ಕಾರಣ ಎಂದು ದೀದಿ ಆರೋಪಿಸಿದ್ದಾರೆ.

    ಕಾಂಗ್ರೆಸ್ ಹಾಗೂ ಲೆಫ್ಟ್​ ಫ್ರಂಟ್​ ಪಕ್ಷಗಳದ್ದು ದ್ವಂದ್ವ ನಿಲುವು. ಇದನ್ನು ನಾವು ಸಹಿಸುವುದಿಲ್ಲ ಎಂದು ಇಂದು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಜೆಎನ್​ಯು ಸೇರಿ ದೇಶದ ಇನ್ನೂ ಹಲವು ವಿಶ್ವವಿದ್ಯಾಲಯಗಳ ಕ್ಯಾಂಪಸ್​ನಲ್ಲಿ ಹಿಂಸಾಚಾರ ನಡೆದಿತ್ತು.ಇದಕ್ಕೆಲ್ಲ ಕೇಂದ್ರ ಸರ್ಕಾರವೇ ಕಾರಣ ಎಂದು ಪ್ರತಿಪಕ್ಷಗಳು ಆರೋಪ ಮಾಡಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts