ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ಹಂತದ ಮತದಾನ ಬಾಕಿ ಇದೆ. ಇನ್ನೊಂದೆಡೆ ದೇಶದಲ್ಲಿ ಕರೊನಾವೈರಸ್ ವ್ಯಾಪಕವಾಗಿ ಹಬ್ಬುತ್ತಿದೆ. ಈ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಉಳಿದ ಎರಡು ಹಂತದ ಮತದಾನಕ್ಕೆ ಸಂಬಂಧಿಸಿದಂತೆ ಯಾವುದೇ ಬೃಹತ್ ಸಮಾವೇಶ, ರೋಡ್ ಶೋ, ರಾಲಿಗಳನ್ನು ಆಯೋಜಿಸುವಂತಿಲ್ಲ ಎಂದು ಇಂದು ಭಾರತ್ ಚುನಾವಣಾ ಆಯೋಗ ಆದೇಶ ಮಾಡಿದೆ.
ಮತಯಾಚನೆಗಾಗಿ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷದ ಮುಖಂಡರು ಗರಿಷ್ಠ 500 ಜನರನ್ನು ಸೇರಿಸಿಕೊಂಡು ಸಭೆ ಮಾಡಲು ಚುನಾವಣಾ ಆಯೋಗ ಅನುಮತಿ ನೀಡಿದೆ. ಯಾವುದೇ ಕಾರಣಕ್ಕೂ 500ಕ್ಕಿಂತ ಹೆಚ್ಚು ಜನ ಸೇರಿಸಲು ಅವಕಾಶ ನೀಡುವುದಿಲ್ಲ ಎಂದು ಕಠಿಣ ಆದೇಶ ಮಾಡಲಾಗಿದೆ.
ಬೃಹತ್ ಚುನಾವಣಾ ಸಮಾವೇಶಗಳಲ್ಲಿ ಕರೊನಾ ವ್ಯಾಪಕವಾಗಿ ಹರಡುತ್ತಿದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದಿರಿ ಎಂದು ಕಲ್ಕತ್ತ ಹೈಕೋರ್ಟ್ ಇಂದು ಚುನಾವಣಾ ಆಯೋಗಕ್ಕೆ ಛಾಟಿ ಬೀಸಿತ್ತು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಈ ಮಹತ್ವದ ಆದೇಶ ಮಾಡಿದೆ. ಈ ಆದೇಶದ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರು ತಮ್ಮ ಎಲ್ಲ ಪೂರ್ವನಿರ್ಧರಿತ ಚುನಾವಣಾ ಕಾರ್ಯಕ್ರಮಗಳನ್ನು ರದ್ದು ಮಾಡಿ, ವರ್ಚುವಲ್ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸುವುದಾಗಿ ಘೋಷಣೆ ಮಾಡಿದ್ದಾರೆ.
In the wake of upsurge in #COVID19 cases across the country and the ECI Order dated 22nd April, 2021, I am cancelling all my prescheduled meetings and we will reach out to the people virtually.
— Mamata Banerjee (@MamataOfficial) April 22, 2021
We will be sharing the updated schedule of the virtual meetings shortly.
ಪಶ್ಚಿಮ ಬಂಗಳಾದಲ್ಲಿ ಗುರುವಾರ 10254 ಜನರಿಗೆ ಕರೊನಾ ಸೋಂಕು ತಗುಲಿತ್ತು. 58 ಜನ ಮೃತಪಟ್ಟಿದ್ದಾರೆ. ದೇಶದಲ್ಲಿ 3.5 ಲಕ್ಷ ಜನರಿಗೆ ಸೋಂಕು ತಗುಲಿದ್ದು 2253 ಜನ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ನಡೆಯಲಿದ್ದ ತಮ್ಮ ಪಶ್ಚಿಮ ಬಂಗಾಳ ಚುನಾವಣಾ ಸಮಾವೇಶಗಳಲ್ಲಿ ಭಾಗವಹಿಸುವುದನ್ನು ರದ್ದು ಮಾಡಿದ್ದಾರೆ. ಈ ಕುರಿತು ಇಂದು ಟ್ವೀಟ್ ಮಾಡಿರುವ ಅವರು, ನಾಳೆ ದೇಶದಲ್ಲಿ ಕೋವಿಡ್19 ಸ್ಥಿತಿಗತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆ ಆಯೋಜಿಸಿದ್ದೇನೆ. ಇದರಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಪಶ್ಚಿಮ ಬಂಗಾಳ ಪ್ರವಾಸವನ್ನು ರದ್ದು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣಾ ಪ್ರವಾಸವನ್ನು ರದ್ದು ಮಾಡಿದ ಪ್ರಧಾನಿ ಮೋದಿ
ಕರೊನಾ ಅಬ್ಬರ: ಭಾರತಕ್ಕೆ ವಿಮಾನಸೇವೆಯನ್ನು ರದ್ದು ಮಾಡಿದ ಎಮಿರೇಟ್ಸ್ ಏರ್ಲೈನ್ಸ್