More

    ವಾರಭವಿಷ್ಯ: ಈ ರಾಶಿಯವರಿಗೆ ತಕ್ಕಡಿಯು ಏರು ತಗ್ಗಿಲ್ಲದೆ ತನ್ನ ಕೆಲಸವನ್ನು ತಾನು ಮಾಡುತ್ತದೆ.

    ಮೇಷ: ಚಂದ್ರಮ ಮನಸೋ ಜಾತಹ ಎಂಬ ಚಂದ್ರನ ಮಂತ್ರವನ್ನು ಪಾರಾಯಣ ಮಾಡಿ ಮನಸಂಕಲ್ಪವನ್ನು ಗೆಲ್ಲಬಹುದು. ಲಗ್ನದಲ್ಲಿ ಗುರುವು ಏಕಾದಶದಲ್ಲಿ ಶನಿಯು ಶುಭ ಸೂಚಕರು. ಮೇ 1ರಿಂದ ಗುರುವು ದ್ವಿತೀಯಕ್ಕೆ ಬಂದ ಮೇಲೆ ನಿಮ್ಮ ಇಷ್ಟಾರ್ಥಗಳೆಲ್ಲ ಈಡೇರುತ್ತವೆ. ವಿಶೇಷವಾಗಿ ಸುಬ್ರಮಣ್ಯನನ್ನು ಪ್ರಾರ್ಥಿಸಿ, ಸೋಮವಾರದಂದು ಉಮಾಮಹೇಶ್ವರನನ್ನು ಪೂಜಿಸಿ.

    ವೃಷಭ: 12ನೇ ಮನೆಯಿಂದ ಗುರು ಆಚೆ ಬಂದು ಜನ್ಮಕ್ಕೆ ಸೇರುತ್ತಾನೆ. ಲಗ್ನಕ್ಕೆ ಗುರು ಬಂದು ಗುರುಕಟಾಕ್ಷ ತುಂಬಿ ಮುನ್ನಡೆಸುತ್ತಾನೆ. ಶನಿಯು ದಶಮದಲ್ಲಿ ಸಮತೋಲನವನ್ನು ಕಾಪಾಡುತ್ತಾನೆ. ಒತ್ತಡ ಮತ್ತು ಆತಂಕಗಳು ನಿಮ್ಮನ್ನು ಹಿಂಬಾಲಿಸುತ್ತವೆ. ಜಗದಂಬೆ ಮಹಾಕಾಳಿ ಮಹಾಲಕ್ಷ್ಮಿ, ಸರಸ್ವತಿ ಐಕ್ಯ ರೂಪ ಮೂಕಾಂಬಿಕೆ ಯನ್ನು ಪ್ರಾರ್ಥಿಸಿ. ಚಂಡಿಕಾ ಪಾರಾಯಣ ಮಾಡಿಸಿ.

    ಮಿಥುನ: ಏಕಾದಶದಲ್ಲಿ ಗುರುವಿನೊಂದಿಗೆ ಮಿಥುನಾಧಿಪತಿಯಾದ ಬುಧನು ಸೇರಿ ರವಿ, ರಾಹುವಿನ ಒಟ್ಟಿಗೆ ಇದ್ದಾನೆ. ಶುಭ ಫಲಗಳು ನಡೆದು ಮನಸ್ಸಿಗೆ ಎದುರಾಳಿಯನ್ನು ಮಟ್ಟ ಹಾಕುವ ಧೈರ್ಯ, ಸ್ಥಿರತೆ ಹಾಗೂ ಶಕ್ತಿಯನ್ನು ಈ ನಾಲ್ಕು ಗ್ರಹಗಳು ಕೊಡುತ್ತವೆ. ಶ್ರೀರಾಮನಂತೆ ಶತ್ರುಗಳನ್ನು ತಡೆಯಲು ರಾಮನಾಮ ತಾರಕ ಜಪ ಒಂದೇ ಸಾಕು. ಸ್ಥಿರವಾದ ಆರೋಗ್ಯವಿರುತ್ತದೆ. ಶುಭಫಲವು ದೊರಕುತ್ತದೆ.

    ಕಟಕ: ಚಂದ್ರ ಬಲ ನಕ್ಷತ್ರ ಬಲ ಇಲ್ಲದಿದ್ದರೆ ಯಾವ ಶುಭಕಾರ್ಯಗಳನ್ನೂ ನಡೆಸಲಾಗುವುದಿಲ್ಲ. 2, 3, 7, 9, 11 ಇದರಲಿ ಬಂದಾಗ ಮನುಷ್ಯನ ಇಚ್ಛೆಗಳನ್ನು ಪೂರೈಸುತ್ತಾನೆ. ಮುತ್ತಿನಿಂದ ಪೋಣಿಸಲ್ಪಟ್ಟ ಒಡವೆಯನ್ನು ಧರಿಸಿ ಮನಸ್ಸು ಸಮತೋಲನದಲ್ಲಿ ಇಟ್ಟುಕೊಂಡು ಅಡೆತಡೆ ಬಾರದಂತೆ ಕಾರ್ಯ ನಿರ್ವಹಿಸಬಹುದು. ಅಷ್ಟಮ ದಲ್ಲಿ ಶನಿ ಇದ್ದು, ಗುರು ಮೇ 1ರಿಂದ ಶುಭ ಫಲವನ್ನು ತಂದುಕೊಡುತ್ತಾನೆ.

    ಸಿಂಹ: ಯಾವ ರಾಶಿ ನಕ್ಷತ್ರ ಯೋಗ ಏನೂ ಮಾಡದಿದ್ದಾಗಲೂ ಸಿಂಹ ರಾಶಿ ಅಧಿಪತಿ ಸೂರ್ಯನೇ ಆಗಿರುವುದರಿಂದ ಸೂರ್ಯನು 9ನೇ ಮನೆಯಲ್ಲಿ ಗುರು ಬುಧರ ಸಮೇತನಾಗಿದ್ದು ಗುರುವು ಸದ್ಯಕ್ಕೆ 9ರಲ್ಲಿ ಇರುವುದು ಇನ್ನೂ ಶುಭಕಾಲವು ನಡೆದಿದೆ. ಸಣ್ಣಪುಟ್ಟ ಅವಾಂತರ ಕೆಲವೊಂದು ದೃಷ್ಟಿ ದೋಷಗಳಿಂದ ಆಗುವ ಶರೀರ ಬಾಧೆಯನ್ನು ತಡೆದುಕೊಳ್ಳಲು ಆದಿತ್ಯ ಹೃದಯ ಪಾರಾಯಣ ಮಾಡಿ. ಅರ್ಕಪುಷ್ಪದಿಂದ ಸೂರ್ಯ ಮಂಡಲವನ್ನು ಪೂಜಿಸಿ. ಗೆಲುವು ನಿಧಾನವಾದರೂ ದೈವ ಕೃಪೆ ನಿಮ್ಮ ಮೇಲೆ ನಿರಂತರವಾಗಿದೆ.

    ಕನ್ಯಾ: ಆರನೇ ಮನೆ ಶನಿಯು ಮನುಷ್ಯನಿಗೆ ಆನೆ ಕಟ್ಟಿ ಆಳುವಂತೆ ಮಾಡುತ್ತದೆ ಎಂಬುದು ಹಿರಿಯರ ಮಾತು. ಗುರು ಎಂಟರಲ್ಲಿ ಇದ್ದು ಅಡ್ಡಿ ಆತಂಕ ಬಂದರೂ ಶನಿಯ ಪ್ರಾಬಲ್ಯ ಇರುವುದರಿಂದ ನಿಮಗೆ ಶುಭಂಶವು ಗುರು ಕಟಾಕ್ಷವು ಪಡೆಯಬಹುದು. ವಿಷ್ಣು ಸಹಸ್ರನಾಮ, ವಿಷ್ಣು ಅಷ್ಟೋತ್ತರವನ್ನು ನಿತ್ಯವೂ ಪಠಿಸಿ.

    ತುಲಾ: ಈ ರಾಶಿಯವರಿಗೆ ತಕ್ಕಡಿಯು ತೂಗಲು ಹಾಕಿದ ವಸ್ತುವಿನ ಅಗತ್ಯ ತೂಕ ನಮೂದಾಗಿರುವ ಗುರುತು ಬೇಕೇ ಬೇಕು. ತಕ್ಕಡಿಯು ಏರು ತಗ್ಗಿಲ್ಲದೆ ತನ್ನ ಕೆಲಸವನ್ನು ತಾನು ಮಾಡುತ್ತದೆ. ಮನುಷ್ಯನಿಗೆ ಧೈರ್ಯ ಛಲ ಎರಡೂ ಇರಬೇಕು. ನ್ಯಾಯವನ್ನು ಧರ್ಮವನ್ನು ಸರಿದೂಗಿಸುವ ಅನ್ನಪೂರ್ಣೆಶ್ವರಿಯನ್ನು ಪ್ರಾರ್ಥಿಸಿ ಸುಬ್ರಮಣ್ಯನ ಪ್ರಾರ್ಥನೆ ಸದಾ ಇರಲಿ.

    ವೃಶ್ಚಿಕ: ಈ ಜಗತ್ತಿನಲ್ಲಿ ಯಾರು ಎಷ್ಟು ದುಡ್ಡು ಬಂದರೂ ಸಾಕು ಎಂದು ಹೇಳುವುದನ್ನು ಕೇಳಿಲ್ಲ. ಮನುಷ್ಯನು ಆಸೆಯ ಚೌಕಟ್ಟಿನಲ್ಲಿ ಸೇರಿ ವಿಲವಿಲ ಒದ್ದಾಡುತ್ತಾನೆ. ಋಣ ಭಾರವನ್ನು ಜಯಿಸಲು ನಿಮ್ಮ ಜೇಬು ತುಂಬಿ, ಸಾಲವು ಹರಿದು, ಕೆಲಸದಲ್ಲಿ ಉತ್ಸಾಹವನ್ನು ಕೊಡಲು ನಿಮ್ಮ ಶ್ರಮಕ್ಕೆ ತಕ್ಕ ಕೀರ್ತಿಯನ್ನು ಸಂಪಾದಿಸಲು ಪಳನಿ ಸುಬ್ರಹ್ಮಣ್ಯನನ್ನು ಪೂಜಿಸಿ, ಪ್ರಾರ್ಥಿಸಿ.

    ಧನಸ್ಸು: ಧನುರ್ ಮೀನ ರಾಶಿ ಅಧಿಪತಿ ಗುರು ಪಂಚಮದಲ್ಲಿದ್ದು ಕಳೆದ ಎರಡು ವಾರಗಳಲ್ಲಿ ನಿಮ್ಮ ಮಿಂಚಿನ ಓಟ, ಗಾಳಿಪಟದಂತೆ ಹಾರಾಟ ಯಾರೂ ತಡೆಯಲು ಸಾಧ್ಯವೇ ಆಗಿಲ್ಲ. ಚಾಣಾಕ್ಷತೆಯಿಂದ ಕೆಲಸ ಮಾಡಿ ಎಲ್ಲರನ್ನೂ ಆಕರ್ಷಿಸುವ ಕಾಲ. ವಿಶೇಷ ಜವಾಬ್ದಾರಿ ಬಂದು ಸೇರುತ್ತದೆ. ಕುಲ ಗುರುಗಳನ್ನು ಪ್ರಾರ್ಥಿಸಿ. ತಂದೆ ತಾಯಿಯನ್ನು ಪೂಜಿಸಿ, ಶ್ರೇಯಸ್ಸನ್ನು ಪಡೆಯಿರಿ

    ಮಕರ: ನೀವು ಪಟ್ಟ ಕಷ್ಟಗಳಿಗೆ ಮೇ 1ರಿಂದ ಗುರುವೇ ತೆರೆ ಎಳೆದು ನಿಮ್ಮನ್ನು ಚಂದ್ರನ ತಾರಾಲೋಕ, ಭೂಮಿಯ ಸಕಲ ದೇವತೆಗಳನ್ನು ತೋರಿಸುವ ಕಾಲ ಹತ್ತಿರದಲ್ಲಿದೆ. ಗುರುಬಲ ದೈವಬಲ ಬಂದು ಶಾರೀರಿಕವಾಗಿ ಮಾನಸಿಕವಾಗಿ ಉತ್ತರೋತ್ತರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತೀರಿ. ನೀವು ಮಾಡಿದ ಪೂರ್ವ ಪುಣ್ಯ ನಿಮ್ಮನ್ನು ಕಾಪಾಡುತ್ತದೆ. ಮತ್ತೊಬ್ಬರಿಗೆ ಒಳ್ಳೆಯದನ್ನೇ ಬಯಸಿ ಪುಣ್ಯವನ್ನು ಸಂಗ್ರಹ ಮಾಡಿಕೊಳ್ಳಿ. ಶನಿಯ ಪ್ರಾರ್ಥನೆ ಇರಲಿ. ಉಮಾಮಹೇಶ್ವರನನ್ನು ಪೂಜಿಸಿ.

    ಕುಂಭ: ಶನಿಯು ಲಗ್ನದಲ್ಲಿ ಇದ್ದು ಮೇ 1ರಿಂದ ಗುರು ಚತುರ್ಥಕ್ಕೆ ಸಾಗುತ್ತಾನೆ. ಕೆಲವೊಂದು ಕೆಲಸಗಳಲ್ಲಿ ಅಡ್ಡಿಗಳು ಉಂಟಾಗಿ ನಿಧಾನವಾಗಿ ಸಾಗುತ್ತವೆ. ಎಲ್ಲಾ ದಾನಗಳಲ್ಲಿಯೂ ಶ್ರೇಷ್ಠದಾನ ನಿಧಾನ ಹಾಗೂ ಅನ್ನದಾನ. ನಿಮ್ಮ ಒಳ್ಳೆಯ ಸಮಯಕ್ಕಾಗಿ ಕಾದಿರಿ. ಕೆಲಸಗಳು ನಿಧಾನವಾದರೂ ನಿಮ್ಮ ವಿಷಯ ವಿಚಾರಗಳಲ್ಲಿ ತೊಡಗಿಸಿಕೊಂಡು ನಿಮ್ಮನ್ನು ನೀವು ಸಂರಕ್ಷಿಸಿಕೊಂಡು ಮುಂದೆ ಸಾಗಿದಲ್ಲಿ ಕಷ್ಟಗಳನ್ನು ನೋಡಲೇಬೇಕಾಗಿಲ್ಲ. ದಶರಥ ವಿರಚಿತ ಶನಿ ಸ್ತೋತ್ರವನ್ನು ಪಾರಾಯಣ ಮಾಡಿ.

    ಮೀನ: ದ್ವಾದಶ ರಾಶಿ ಶನಿ ಸಂಚಾರ ಇದ್ದರೂ ಸಹ ಎರಡನೇ ಮನೆಯಲ್ಲಿ ಗುರು ಇರುವುದರಿಂದ ನೀವು ಇದುವರೆಗೂ ಯಾವ ಕಷ್ಟಗಳ ಸಂಕೋಲೆಯಲ್ಲಿ ಸಿಕ್ಕಿಬಿದ್ದಿಲ್ಲ. ರೋಗಗಳು ಮನುಷ್ಯನಿಗೆ ಬರುವುದು ಮನಸ್ಸಿನಲ್ಲಿ ಅತಿಯಾದ ಚಿಂತೆ, ಅತೃಪ್ತಿ, ದ್ವೇಷಗಳು ಇದ್ದಾಗ. ಜೊತೆಗೆ ಶನಿಯು ದ್ವಾದಶದಲ್ಲಿ ಇದ್ದು ಪಾಪ ಪುಣ್ಯಗಳನ್ನು ತುಲನೆ ಮಾಡಿ ಫಲವನ್ನು ಕೊಡುತ್ತಾನೆ. ಶಾರದಾ ಚಂದ್ರಮೌಳೇಶ್ವರನನ್ನು ಪೂಜಿಸಿ. ಶೃಂಗೇರಿಯ ಮಲಹನಿಕೇಶ್ವರನನ್ನು ಪೂಜಿಸಿ ಬನ್ನಿ. ಶುಭವೂ, ಮನಸ್ಸಿಗೆ ಹಿತವೂ ಉಂಟಾಗುತ್ತದೆ.

    ಉತ್ತರಪ್ರದೇಶ: ಎಕ್ಸಾಂ ಬರೆದ 188 ಕೈದಿಗಳು, ಶೇಕಡಾ 89 ರಷ್ಟು ಫಲಿತಾಂಶ ದಾಖಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts