More

    ಈ ರಾಶಿಯವರು ಮಿತ್ರರೊಂದಿಗೆ ಸಮಾಧಾನವಾಗಿ ವ್ಯವಹರಿಸಿದರೆ ಪರಿಹಾರ: ವಾರಭವಿಷ್ಯ

    ಈ ರಾಶಿಯವರು ಮಿತ್ರರೊಂದಿಗೆ ಸಮಾಧಾನವಾಗಿ ವ್ಯವಹರಿಸಿದರೆ ಪರಿಹಾರ: ವಾರಭವಿಷ್ಯ

    ಮೇಷ

    ದ್ವಾದಶ ರಾಶಿಗಳು ಫಾಲ್ಗುಣ ಮಾಸದ ಅಂತ್ಯಕ್ಕೆ ಬಂದು ಎಲ್ಲ ರಾಶಿಗಳಲ್ಲೂ ಗುರು, ಶನಿ, ರಾಹು, ಕೇತುಗಳು ಪ್ರಭಾವವನ್ನು ಬೀರುತ್ತಾರೆ. ಯುಗಾದಿಯ ನಂತರದಲ್ಲಿ ಗುರುವಿನ ಸ್ಥಾನವು ಬದಲಾಗಿ ಕೆಲವು ರಾಶಿಗಳಿಗೆ ಶುಭ ಉಂಟಾಗಲಿದೆ. ತಂದೆ-ತಾಯಿ, ಪಾರ್ವತಿ- ಸಾಂಬಸದಾಶಿವನನ್ನು ಪ್ರಾರ್ಥಿಸಿದರೆ 12ರ ಗುರುವಿನ ಪ್ರಭಾವ ಕಡಿಮೆಯಾಗುತ್ತದೆ. ಇನ್ನು 7 ವಾರಗಳ ಕಾಲ ಗುರುವನ್ನು ಮರೆತರೆ ಗುರುಶಾಪ ಉಗ್ರವಾಗಿ ತೋರುತ್ತದೆ.

    ಕನ್ಯಾ 

    ಸತ್ಯವನ್ನೇ ಹೇಳಬೇಕು. ಯಾರಿಗಾದರೂ ಉಪಕಾರವಾಗಬೇಕಾದರೆ ಹಾನಿಯಿರದ ರೀತಿಯಲ್ಲಿ ಅದನ್ನು ಮಾಡಬೇಕು. ಕೊಟ್ಟ ಮಾತಿನಂತೆ ನಡೆಯಬೇಕು. 1ರಲ್ಲಿ ಗುರುವಿರುವುದರಿಂದ ಕಷ್ಟದ ಕೋಟೆ ದಾಟಿದ್ದೀರಿ. ನಿಮ್ಮ ಉಡುಪು ಶುಭ್ರವಾಗಿರಬೇಕು, ಮನಸ್ಸು ಸ್ವಚ್ಛವಾಗಿರಬೇಕು. ಆತ್ಮದಲ್ಲಿ ಪ್ರೇಮ ಜ್ಯೋತಿ ಬೆಳಗಿಸಿ ಮಹಾವಿಷ್ಣುವನ್ನು ಪೂಜಿಸಿ. ಶುಭವಾಗುವುದು.

    ಮೀನ

    ಶನಿ ಇದ್ದರೂ ಗುರು ನರಸಿಂಹನನ್ನು ಪ್ರಾರ್ಥಿಸಿದರೆ ಮನಸಂಕಲ್ಪವು ಈಡೇರುತ್ತದೆ. ಮಾರ್ಚ್ 11ರಂದು ಬರುವ ಶನಿಪ್ರದೋಷ ಪೂಜೆ ಮಾಡಿ, ವ್ರತ ಕಥೆ ಓದಿದರೆ ಕ್ಷಣಾರ್ಧದಲ್ಲಿ ಮನಸ್ಸಿಗೆ ಶಾಂತಿ ಸಿಕ್ಕು ಮನಸಂಕಲ್ಪ ಈಡೇರುವುದರಲ್ಲಿ ಸಂದೇಹವೇ ಇಲ್ಲ. ಮನೆ ದೇವರಲ್ಲಿ ಆರೋಗ್ಯ, ಆಯಸ್ಸು, ಕೀರ್ತಿ, ಲಾಭ ಬೇಡಿದರೆ ಯಾಕೆ ಕೊಡುವುದಿಲ್ಲ. ನಂಜನಗೂಡಿನ ನಂಜುಂಡೇಶ್ವರನನ್ನು ದರ್ಶಿಸಿ.

    ಮಿಥುನ

    ಮಿಥುನಾಧಿಪತಿಯಾದ ಬುಧನು ಕುಂಭದಲ್ಲಿ ರವಿ, ಶನಿಯರೊಂದಿಗೆ ಇದ್ದು, ನಿಮಗೆ ಶುಭ ಉಂಟಾಗುತ್ತದೆ. ದ್ವಾದಶದಲ್ಲಿ ಅಂಗಾರಕನು ಇರುವುದರಿಂದ ನಿಮ್ಮ ರಕ್ತ ಸಂಬಂಧಿಗಳಲ್ಲಿ ಏರುಪೇರು ಮಾಡಿಕೊಳ್ಳದೆ ನಡೆದುಕೊಳ್ಳುವುದು ಒಳ್ಳೆಯದು. ಗುರು ಏಕಾದಶಕ್ಕೆ ಬಂದಾಗ, ವಿಷಯಗಳು ಬಹಳ ಮುಂದೆ ಸಾಗಿ ಶುಭವಾಗುತ್ತದೆ.

    ವೃಷಭ

    ವೃಷಭಕ್ಕೆ ಉಚ್ಚನಾದ ರಾಹುವು ಮೇಷದಲ್ಲಿದ್ದಾನೆ. ಶತ್ರುಗಳೊಂದಿಗೆ, ಮಿತ್ರರೊಂದಿಗೆ ಸಮಾಧಾನವಾಗಿ ವ್ಯವಹರಿಸಿದರೆ ಪರಿಹಾರವಿದೆ. ಇಲ್ಲವಾದರೆ ವ್ಯಾಜ್ಯ, ಮನಸ್ಥಾಪಕ್ಕೆ ಕಾರಣವಾಗಬಹುದು. ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಏಕಾದಶದಲ್ಲಿ ಗುರು- ಶುಕ್ರರು ಇರುವುದರಿಂದ ನಿಮ್ಮನ್ನು ಅನೇಕ ಸಂಕಟಗಳಿಂದ ಪಾರು ಮಾಡಬೇಕಾದರೆ ಗುರು ರಾಘವೇಂದ್ರನನ್ನು ಪೂಜಿಸಿ.

    ತುಲಾ

    ತುಲಾ ರಾಶಿಯಲ್ಲಿ ಜನಿಸಿದವರು ತೀಕ್ಷ ್ಣಾಗಿ ಮಾತನಾಡುವವರು, ವಿಶೇಷ ಹೃದಯವಂತಿಕೆ ಇರುವವರು. ಲಗ್ನದಲ್ಲಿ ಕೇತು, ಪಂಚಮದಲ್ಲಿ ಶನಿ, ರವಿ ಇರುವುದರಿಂದ ಕೆಲಸಕಾರ್ಯಗಳಲ್ಲಿ ಅಡಚಣೆ ಬರುವುದಿಲ್ಲ. ನಿಮ್ಮಂತೆ ಕೆಲಸ ಸಾಗಲು ಸಿಂಹವಾಹಿನಿ ರೂಪದಲ್ಲಿ ಬದಾಮಿಯಲ್ಲಿ ನೆಲೆಸಿರುವ ಬನಶಂಕರಿಯನ್ನು ಪೂಜಿಸಿ. ಸಮಸ್ಯೆಗಳು ನಿವಾರಣೆಯಾಗಿ ಸರ್ವವಿಧದಲ್ಲೂ ಕೀರ್ತಿವಂತರಾಗುವಿರಿ.

    ವೃಶ್ಚಿಕ

    ಗುರು ಪಂಚಮದಲ್ಲಿ ಇರುವುದರಿಂದ ಏನೂ ಕೇಳದೆ ಸರ್ವವನ್ನೂ ಕೊಡುವವನು ಗುರುವೊಬ್ಬನೆ. ಕೊಡುವ ಕೈ ಇರುವ ದತ್ತ ದೇವರು ನಿರ್ಗಣ ಪಾದುಕೆಗಳಲ್ಲಿ ಜೀವಂತವಾಗಿರುವ ಜಾಗ ಗಾಣಗಾಪುರ. ಮನುಷ್ಯನ ಕರ್ಮ ಸವೆಯಲು ತೀರ್ಥಕ್ಷೇತ್ರ ಸಂದರ್ಶನ ಮಾಡಿ ತೀರ್ಥಸ್ನಾನ ಮಾಡಿದರೆ ಅಭಿಷ್ಟಗಳು ಈಡೇರುವುದು. ವಿನಾಯಕನ ಸಹಿತ ಗುರು ದತ್ತಾತ್ರೇಯನನ್ನು ಪೂಜಿಸಿ.

    ಧನುರ್

    ಕಾರ್ಯ-ಕಾರಣಗಳಿಲ್ಲದೆ ಯಾವ ಕೆಲಸ ನಿಲ್ಲುವುದಿಲ್ಲ. ಮುಂದೆ ಸಾಗುವುದೂ ಇಲ್ಲ. ಭಗವದ್ ಪ್ರೇರಣೆ ಇದ್ದಲ್ಲಿ ಮಾತ್ರವೇ ಒಳ್ಳೆಯ ಗಾಳಿ ಕೂಡ ಬೀಸುತ್ತದೆ. ಸಕಲ ಸೌಭಾಗ್ಯ ಕೊಡುವ ಧನುರ್​ಧಾರಿಯಾದ ಭದ್ರಾಚಲದಲ್ಲಿ ನೆಲೆಸಿರುವ ಶ್ರೀರಾಮನನ್ನು ದರ್ಶಿಸಿ. ರಾಮನಸಹಿತ ಜಾನಕಿ ಸ್ತುತಿಯನ್ನು ಮಾಡಿದರೆ ನಿಮ್ಮ ಕೆಲಸಗಳು ಅಡಚಣೆ ಇಲ್ಲದೆ ನೆರವೇರುವುದು. ಗುರುಚರಿತ್ರೆ ಪಾರಾಯಣ ನಿತ್ಯವೂ ಮಾಡಿ.

    ಮಕರ

    ಮಕರ ರಾಶಿಯವರು ಜಾಣ್ಮೆಯಿಂದ ಕೆಲಸ – ಕಾರ್ಯಗಳನ್ನು ಮುಗಿಸಬೇಕು. ಶನಿ ದ್ವಿತೀಯದಲ್ಲಿದ್ದು, ಗುರು ಸ್ವಕ್ಷೇತ್ರದಲ್ಲಿ ಇರುವುದರಿಂದ ಶ್ರಮ ವಹಿಸಿ ಕೆಲಸ ಮಾಡಿದಾಗ ಸಂತೃಪ್ತಿ, ಲಾಭ ದೊರಕಿ ಸಂಸಾರವನ್ನು ದಾಟಬಹುದು. ಅನಂತ ಪದ್ಮನಾಭನ ವ್ರತ ಕಥೆಯನ್ನು ಓದಿರಿ. ಸಂಕಷ್ಟಗಳು ದೂರವಾಗಿ ಸುಖವೂ ಧನವೂ ದೊರೆಯುತ್ತದೆ.

    ಕಟಕ

    ಹರಿವ ನೀರನ್ನು ಕಾಲಿಂದ ಕದಡಿದರೂ, ಕೈಯಿಂದ ಕದಡಿದರೂ ಮಲಿನಾಂಶ ಸೇರಿ ಕಲುಷಿತವಾದರೂ ಕೆಲವೇ ನಿಮಿಷಗಳಲ್ಲಿ ಹಿಂದಿನಿಂದ ಬಂದ ನೀರು ಅದರೊಂದಿಗೆ ಸೇರಿ ಮತ್ತೆ ಶುದ್ಧ ಮಾಡುತ್ತದೆ. ನಿಮ್ಮ ಮನಸ್ಸು ನೀರಿನಂತೆ ಶುದ್ಧವಾಗಿರಲಿ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ಕುಟುಂಬದ ಮೇಲೆ ಪ್ರೀತಿಯಿರಲಿ. ಶನಿ ಅಷ್ಟಮದಲ್ಲಿದ್ದರೂ ಪರವಾಗಿಲ್ಲ. ಗುರು 9ರಲ್ಲಿ ಇದ್ದು, ನವಮ ಗುರು ಶುಭ ತರುತ್ತಾನೆ. ಕಾರ್ಯಸಾಧನೆ ಮಾಡಿಕೊಳ್ಳಿ.

    ಸಿಂಹ

    ರಾಕ್ಷಸರು ಅಮೃತ ಕುಡಿದರೂ ರಾಕ್ಷಸತ್ವ ಹೋಗುವುದಿಲ್ಲ. ಸಿಂಹವು ಹುಲ್ಲನ್ನು ತಿಂದರೂ ಅದರ ದರ್ಪ ಮಾಯವಾಗುವುದಿಲ್ಲ. ಗ್ರಹಗಳ ಚಲನವಲನಗಳಿಂದ ಸಪ್ತಮ ಶನಿ, ಅಷ್ಟಮ ಗುರು ಬಾಧಿಸಿದರೂ ನಿತ್ಯ ಪೂಜೆಯು ಕಾಪಾಡಿ ದೇವ ಕೃಪೆಯಿಂದ, ಕಷ್ಟಗಳಿಂದ ಪಾರಾಗುತ್ತೀರಿ. ನೀವು ಬೇಕಾದ್ದನ್ನು ಪಡೆಯಲು ಪ್ರತಿನಿತ್ಯ ಆದಿತ್ಯ ಹೃದಯ ಪಾರಾಯಣ ಮಾಡಿರಿ.

    ಕುಂಭ

    ಒಂದೆಡೆ ದ್ವಾದಶ ಶನಿಯು ಅಡಚಣೆ ತಂದರೆ ಅದನ್ನು ಸರಿಪಡಿಸಲು ದ್ವಿತೀಯದಲ್ಲಿ ಸಾಕ್ಷಾತ್ ಪರಮೇಶ್ವರ ಸ್ವರೂಪಿ ಗುರುವು ಇರುವಾಗ ಭಯ ಎಂಬ ಶಬ್ದಕ್ಕೆ ಆರ್ಥವಿರುವುದಿಲ್ಲ. ಕೆಲಸಗಳು ನಿಲ್ಲುವುದಿಲ್ಲ. ಅನಂತವಾಗಿ ಗುರುವನ್ನು ಭಜಿಸಿ, ಪ್ರಾರ್ಥಿಸಿ. ಸಾಂಬಸದಾಶಿವ ಸಹಿತವಾಗಿ ಸುಬ್ರಹ್ಮಣ್ಯ ದೇವರನ್ನು ಪೂಜಿಸಿ. ನಾನಾ ವಿಧವಾದ ಶ್ರೇಯಸ್ಸು, ಯಶಸ್ಸನ್ನು ಪಡೆದು ಸಂತೋಷದಿಂದ ಇರಬಹುದು.

    18 ವರ್ಷ ತುಂಬಿದವರಿಗೆಂದೇ ಬಿಬಿಎಂಪಿಯಿಂದ ಜಾಗೃತಿ ಅಭಿಯಾನ: ಇಲ್ಲಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts