More

    ವಾರಭವಿಷ್ಯ: ಈ ರಾಶಿಯವರು ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ಗುರಿಯನ್ನು ಮುಟ್ಟಲು ಅಸಾಧ್ಯ

    ಮೇಷ: ಈ ರಾಶಿಗೆ ಕುಜನ ಅಧಿಪತ್ಯವಿದ್ದು ನೀವು ಯಾರನ್ನೂ ಪೂರ್ತಿಯಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತೊಡಕುಗಳನ್ನು ಕಾಣುವಿರಿ. ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ಗುರಿಯನ್ನು ಮುಟ್ಟಲು ಅಸಾಧ್ಯ. ‘ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಮಹೇಶ್ವರ…’ ಅಂತಹ ಗುರುವನ್ನು ಪ್ರಾರ್ಥಿಸಿ. ವಾಹನ ಚಾಲನೆ ಮಾಡಲು ಅದರ ಕೀಲಿ ಅವಶ್ಯಕತೆ ಇದ್ದಂತೆ, ಗುರುವಿನ ನೆರವಿಲ್ಲದೆ ಮೇಷ ರಾಶಿಯವರು ಮುಂದೆ ಸಾಗಲು ಸಾಧ್ಯವೇ ಇಲ್ಲ. ಸುಬ್ರಹ್ಮಣ್ಯ ದೇವರನ್ನು ಪೂಜಿಸಿ, ಪ್ರಾರ್ಥಿಸಿ.

    ವೃಷಭ: ಈ ರಾಶಿಗೆ ಶುಕ್ರನ ಶಕ್ತಿಯುಳ್ಳ ದೇವಿ ಆರಾಧನೆಯೇ ಶ್ರೇಷ್ಠ. ಭಗವತಿ ಸ್ವರೂಪ ದೇವಿಯನ್ನು ಸಂತೋಷಪಡಿಸಿ. ಎಲ್ಲ ಸ್ತ್ರೀಯರನ್ನು ದೇವಿಯಂತೆ ಕಂಡರೆ ಕುಬೇರನ ಐಶ್ವರ್ಯವನ್ನೇ ಪಡೆಯಬಹುದು. ದ್ವಾದಶದಲ್ಲಿ ಗುರು ಇರುವುದರಿಂದ ಜೋಪಾನವಾಗಿ ಸಾಗಿರಿ. ತಾಳ್ಮೆ ಇರಲಿ. ಕೋಪತಾಪ ಪ್ರದರ್ಶಿಸದೆ ವಿನಯದಿಂದ ನಡೆದುಕೊಳ್ಳಿ.

    ಮಿಥುನ: ಕೇವಲ 45 ದಿನಗಳಷ್ಟೇ ಗುರುಕಟಾಕ್ಷವಿದ್ದು ಶನಿಯ ಬಲವು ಇರುತ್ತದೆ. ನೀವು ದೈವಬಲ, ಗ್ರಹಬಲ ಹಾಗೂ ಪೂರ್ವಪುಣ್ಯದ ಫಲವನ್ನು ಇರಿಸಿಕೊಂಡರೆ ಆಕಾಶವೇ ನಿಮ್ಮ ಗುರಿಯಾಗಿದ್ದರೂ ದೇವರು ಅದನ್ನು ನಡೆಸಿಕೊಡುತ್ತಾನೆ. ಶ್ರೀರಾಮಚಂದ್ರನ ಪ್ರಾರ್ಥನೆ ಇರಲಿ. ವಿವೇಚನೆ, ವಿವೇಕದಿಂದ ಕೆಲಸ ಮಾಡಿದರೆ ನಷ್ಟ ಇಲ್ಲದ ಲಾಭ ನಿಮ್ಮದಾಗುತ್ತದೆ.

    ಕಟಕ: ಕಲಿಯುಗದಲ್ಲಿ ಕೊಳ್ಳಲು ಸಿಗದೇ ಇರುವುದು ಅದೃಷ್ಟವೊಂದೇ. ಕಟಕ ರಾಶಿಯಲ್ಲಿ ಜನಿಸಿದವರು ಶಿವಕೃಪೆಯಿಂದ ಆರೋಗ್ಯದಲ್ಲಿ ಏರುಪೇರು ಇಲ್ಲದೆ ಸಾಗಿತ್ತೀರಿ. ಇದು ನಿಮ್ಮ ಪೂರ್ವಜನ್ಮದ ಪುಣ್ಯದ ಫಲವೇ ಸರಿ. ಏಕಾದಶಕ್ಕೆ ಗುರು ಬರಲಿ, ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ. ಶಿವಪೂಜೆಯನ್ನು ಎಂದೆಂದೂ ಬಿಡಬೇಡಿ.

    ಸಿಂಹ: ಗ್ರಹಚಾರ, ಗ್ರಹಗಳು ಯಾವಾಗಲೂ ಬದಲಾಗುತ್ತಿರುತ್ತವೆ. ಆದರೆ ಸಿಂಹ ರಾಶಿಯಲ್ಲಿ ಜನಿಸಿದ ನಿಮಗೆ ಇದ್ಯಾವುದರ ಭಯವೂ ಇಲ್ಲ. ಕೆಲಸಗಳು ಮುಂದೆ ಸಾಗದೆ ಇದ್ದರೂ ಬಂದದ್ದು ಬರಲಿ ಎಂದು ಧೈರ್ಯದಿಂದ ಮುನ್ನುಗ್ಗಿ, ಅದರಲ್ಲೇ ಸಂತೃಪ್ತಿ ಪಡೆಯುವ ಮನುಷ್ಯರು ನೀವು. ಶನಿಯು ಸಪ್ತಮದಲ್ಲಿದ್ದು ಶನಿದೇವರ ಪ್ರಾರ್ಥನೆ ಇರಲಿ.

    ಕನ್ಯಾ: ಪಾಪ, ಪುಣ್ಯಗಳ ಯೋಚನೆ ಮಾಡದೆ ಶಷ್ಟ ಶನಿ ನಿಮಗೆ ಬೇಕಾದ ಧನಸಂಪತ್ತು ಕೊಟ್ಟು ನಿಮ್ಮ ಋಣವನ್ನು ತೀರಿಸಿದ್ದಾನೆ. ಪ್ರಸನ್ನತೆ ಕೊಡುವ ದೇವರೆಂದರೆ ಶನಿ ದೇವರೇ. ಈಶ್ವರನ ಅಂಶವುಳ್ಳ ಗ್ರಹ. ನಿತ್ಯವೂ ಅವನ ಪ್ರಾರ್ಥನೆ ಇರಲಿ. ಗುರು ಅಷ್ಟಮದಲ್ಲಿದ್ದು, ನವಮಕ್ಕೆ ಬಂದಾಗ ಗುರು, ಶನಿ ಗ್ರಹಗಳ ಸ್ಥಾನಗಳಿಂದ ಲಾಭ, ಧೈರ್ಯ, ಕೀರ್ತಿ ಬಂದು ಸೇರುತ್ತದೆ.

    ತುಲಾ: ತಲೆನೋವು ಬಂದರೂ, ಕೈ, ಕಾಲಿಗೆ ಸುಸ್ತಾದರೂ, ಮನಸ್ಸಿಗೆ ಚಿಂತೆ ಆವರಿಸಿಕೊಂಡಿದ್ದರೂ, ಕೇವಲ ದೇವಿಯ ಪ್ರಾರ್ಥನೆಯಿಂದ ಎಲ್ಲವನ್ನೂ ಸರಿದೂಗಿಸಿಕೊಂಡು ಮುಂದೆ ಸಾಗುವ ಛಲ ಇರಲಿ. ಧೈರ್ಯ ಉಳ್ಳವರು ನೀವು. ಸರ್ವಸಂಕಟ ಪರಿಹಾರ ಮಾಡುವ ಗುರುಚರಿತ್ರೆಯ 14ನೇ ಅಧ್ಯಾಯವನ್ನು ಪಾರಾಯಣ ಮಾಡಿ. ಉದ್ಯೋಗದಲ್ಲಿ, ವ್ಯಾಪಾರದಲ್ಲಿ ಲಾಭವನ್ನು ಕಾಣುವಿರಿ.

    ವೈಶ್ಚಿಕ: ಬಿಸಿಲಿಗೆ ಭೂಮಿ ಒಳಗೆ ಬಿರುಕಾಗುತ್ತ, ನೀರಿಲ್ಲದೆ ಗಿಡಗಳು ಬಾಡಿ, ಒಣಗಿ ತನ್ನ ಸ್ವರೂಪವನ್ನೂ ಕಳೆದುಕೊಳ್ಳುತ್ತದೆ. ಮನುಷ್ಯನಿಗೆ ಅವಶ್ಯಕತೆ ಇರುವ ಧನವು ಬಾರದಿದ್ದಾಗ ಒಣಗಿದ ಗಿಡದಂತೆ ಆಗುತ್ತಾನೆ. ಎಲ್ಲ ಕಾಲದಲ್ಲೂ ನಿಮಗೆ ಧನವನ್ನು ಕೊಡುವ ದೇವರು ಸುಬ್ರಹ್ಮಣ್ಯ ನೊಬ್ಬನೇ. ಸುಬ್ರಹ್ಮಣ್ಯ ದೇವರನ್ನು ಮರೆಯದೆ ಶ್ರದ್ಧಾ, ಭಕ್ತಿಯಿಂದ ಪೂಜಿಸಿ.

    ಧನಸ್ಸು: ಮಕರ ಧನು ರಾಶಿಯವರಿಗೆ ಹನುಮಂತನ ವಿಶೇಷವಾದ ಕೃಪೆ ಇದ್ದು, ‘ಎತ್ತ ಓಡಾಡಿದರೂ ಅತ್ತಿತ್ತ ನೋಡದಿರು’ ಎಂಬಂತೆ ಪಂಚಮ ಗುರು ನಿಮಗೆ ದಾರಿಯನ್ನು ಮುಟ್ಟಿಸುತ್ತಾನೆ. ನಿಮಗೆ ಇಚ್ಛಿತ ಫಲಗಳನ್ನು ಕೊಡುತ್ತಾನೆ. ಎಲ್ಲ ದೇವರನ್ನು ಪೂಜಿಸಿದರೂ ಕೊನೆಗೆ ‘ಕೃಷ್ಣಾರ್ಪಣಮಸ್ತು’ ಎಂದೇ ಹೇಳುತ್ತೇವೆ. ಈ ವಾರ ಲಕ್ಷ್ಮೀನಾರಾಯಣನನ್ನು ಪೂಜಿಸಿ, ಬ್ರಾಹ್ಮಣರಿಗೆ ಭೋಜನವನ್ನು ಮಾಡಿಸಿ, ಅವರ ಆಶೀರ್ವಾದವನ್ನು ಪಡೆಯಿರಿ. ಒಳಿತಾಗುತ್ತದೆ.

    ಮಕರ: ರಾಶಿ ಚತುರ್ಥಕ ಮೇ 1ರಿಂದ ಮಕರ ರಾಶಿಗೆ ಪಂಚಮಕ್ಕೆ ಬಂದು ಪ್ರಗತಿಯನ್ನೂ, ಅತ್ಯಂತ ಸುಖವನ್ನೂ ನೀಡುತ್ತಾನೆ. ‘ಪಂಚಮಂ ಕಾರ್ಯ ಸಿದ್ಧಿಹಿ’ ಎಂಬಂತೆ ಎಲ್ಲವನ್ನೂ ಪಡೆಯುವ ಕಾಲ ಹತ್ತಿರದಲ್ಲಿದೆ, ಶನಿ ದ್ವಿತೀಯದಲ್ಲಿ ಸ್ವಕ್ಷೇತ್ರದಲ್ಲಿ ಇರುವುದರಿಂದ ಹಾಗೂ ಶನಿಯ ಸಂಚಾರದ ಕಡೆಯ ಭಾಗ ವಾದ್ದರಿಂದ ಅವನು ಯಾವುದೇ ಬಾಧೆಯನ್ನು ಕೊಡುವುದಿಲ್ಲ. ಆದರೂ ನೀವು ಶನಿಯ ಪ್ರಾರ್ಥನೆಯನ್ನು ಬಿಡದಿರಿ. ಈಶ್ವರನನ್ನು ಅರ್ಚಿಸಿ.

    ಕುಂಭ: ರಾಶಿ ಸ್ವಕ್ಷೇತ್ರದಲ್ಲಿ ಶನಿ ಇನ್ನು ಮುಂದಿನ ಸಂವತ್ಸರದಲ್ಲೂ ಪೂರ್ತಿಯಾಗಿ ಅಲ್ಲೇ ಇರುತ್ತಾನೆ. ಕುಂಭ ರಾಶಿ ಅವನ ಸ್ವಂತ ಮನೆಯಾಗಿರುವುದರಿಂದ ನಿಮ್ಮನ್ನು ನೀವು ಪರಿಶುದ್ಧವಾಗಿ, ಧರ್ಮದಿಂದ, ಪ್ರೀತಿಯಿಂದ ಎಲ್ಲವನ್ನೂ ಎಲ್ಲರನ್ನೂ ಕಂಡರೆ ನಿಮಗೆ ಶನಿಯೇ ರಕ್ಷಣೆಯನ್ನು ಕೊಡುತ್ತಾನೆ. ಅನ್ನ, ನೀರು ಒದಗಿಸಿಕೊಟ್ಟು ನಿಮ್ಮ ಕೈ ಹಿಡಿಯುತ್ತಾನೆ. ತೃತೀಯ ಗುರು ಚತುರ್ಥಕ್ಕೆ ಹೋಗುವುದರಿಂದ ದತ್ತಾತ್ರೇಯನ ಪ್ರಾರ್ಥನೆ ಸದಾ ಇರಲಿ.

    ಮೀನ: ಮನ್ಮಥನೆಂದರೆ ಬಹಳ ಸುಂದರಪುರುಷ. ಮೇನಕೆ ರೂಪವುಳ್ಳ ಸ್ತ್ರೀ. ತನ್ನ ಸೌಂದರ್ಯದಿಂದ ಎಲ್ಲರನ್ನೂ ಮೋಹಗೊಳ್ಳುವಂತೆ ಮಾಡುತ್ತಾಳೆ. ಮೀನುಗಳು ನೋಡಲು ಬಹಳ ಚಂದವಾಗಿರುತ್ತದೆ. ಹಾಗೆಯೇ ದೇವರು ಏನನ್ನು ಕೊಟ್ಟರೂ ನೀರಿನಲ್ಲಿರುವ ಮೀನು ತೃಪ್ತಿ ಪಡುವಂತೆ ನೀವು ತೃಪ್ತಿಪಟ್ಟು ಜೀವನದಲ್ಲಿ ಮುಂದೆ ಸಾಗಿದರೆ ಬದುಕು ಸಾರ್ಥಕವಾಗುತ್ತದೆ. ಶನಿಯು ದ್ವಾದಶದಲ್ಲಿದ್ದಾನೆ. ನಿಮ್ಮ ಜೀವನಕ್ಕೆ ಶಿವಕೃಪೆ ಅತ್ಯಗತ್ಯ.

    ಪತಿ ಸಾವಿಗೀಡಾಗಿ ಕೆಲವೇ ತಿಂಗಳುಗಳಲ್ಲಿ ಭಾರತೀಯ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದ ಜರ್ಮನ್ ನಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts