More

    ನಷ್ಟದ ಸುಳಿಯಲ್ಲಿ ಹಲಸು ಬೆಳೆಗಾರರು

    ದೊಡ್ಡಬಳ್ಳಾಪುರ: ಮೇ, ಜೂನ್, ಜುಲೈ ಬಂತೆಂದರೆ ದೊಡ್ಡಬಳ್ಳಾಪುರದ ಹಲಸು ಬೆಳೆಗಾರರಿಗೆ ಸುಗ್ಗಿ ಎಂಬ ಮಾತಿದೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಆಂಧ್ರದ ತಿರುಪತಿ, ಮದನಪಲ್ಲಿ ಸೇರಿ ರಾಜ್ಯದ ನಾನಾ ಕಡೆ ತಾಲೂಕಿನ ತೂಬಗೆರೆ ಹಲಸಿಗೆ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿತ್ತು. 160 ರೈತರು 3 ಸಾವಿರ ಮರಗಳಲ್ಲಿ 150 ರಿಂದ 200 ಟನ್ ಹಲಸು ಬೆಳೆಯುತ್ತಾರೆ.

    ಸೀಸನ್‌ಗೆ ತಕ್ಕಂತೆ ರಾಜ್ಯದ ನಾನಾ ಕಡೆ ಆಯೋಜನೆಗೊಳ್ಳುತ್ತಿದ್ದ ಹಲಸು ಮೇಳಗಳಲ್ಲಿ ದೊಡ್ಡಬಳ್ಳಾಪುರ, ತೂಬಗೆರೆ ಹಲಸು ಘಮಲು ಹರಡುತ್ತಿತ್ತು. ಬೆಂಗಳೂರಿನ ಲಾಲ್‌ಬಾಗ್, ಮೈಸೂರು, ಮಂಗಳೂರು, ಶಿವಮೊಗ್ಗ, ಹೆಬ್ಬಾಳ, ಜಿಕೆವಿಕೆ ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ನಡೆಯುತ್ತಿದ್ದ ವಾರ, ತಿಂಗಳ ಮೇಳದಲ್ಲಿ ವಹಿವಾಟು ನಡೆಯುತ್ತಿತ್ತು. ಸದ್ಯ ರಾಜ್ಯದಲ್ಲಿ ಮೇಳಗಳು ರದ್ದಾಗಿರುವ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ದೊಡ್ಡ ಆಘಾತವಾಗಿದೆ.

    ನಿಯಮಿತ ಬೇಡಿಕೆ: ತೂಬಗೆರೆ ಹೋಬಳಿಯಲ್ಲಿ ಬೆಳೆಯುವ ಶಿವರಾತ್ರಿ ಹಲಸು, ಚಂದ್ರ ಹಲಸು, ಕೆಂಪು ರುದ್ರಾಕ್ಷಿ ಹಲಸು, ಹಳದಿ ರುದ್ರಾಕ್ಷಿ ಹಲಸು, ಬಿತ್ತನೆ ಏಕಾದಶಿ ಹಲಸಿಗೆ ರಾಜ್ಯದಲ್ಲಿ ಉತ್ತಮ ಬೇಡಿಕೆಯಿದೆ. ಆಂಧ್ರದ ವ್ಯಾಪಾರಿಗಳು ಹಣ್ಣಿನ ಗಾತ್ರದ ಆಧಾರದಲ್ಲಿ 6ರಿಂದ 10ಟನ್ ಖರೀದಿಸುತ್ತಿದ್ದರು. 50ರಿಂದ 500ರೂ. ವರೆಗೆ ಒಂದು ಹಣ್ಣಿನ ಬೆಲೆ ನಿಗದಿಪಡಿಸಿ ವ್ಯಾಪಾರ ನಡೆಸಲಾಗುತ್ತಿತ್ತು. ಸದ್ಯ ಕರೊನಾ ಭೀತಿಯಿಂದಾಗಿ ವ್ಯಾಪಾರಿಗಳು ಬರುತ್ತಿಲ್ಲ. ಕೇವಲ ಮಂಗಳೂರಿನಿಂದ ನಿಯಮಿತ ಬೇಡಿಕೆ ಬಂದಿದೆ ಎಂದು ಬೆಳೆಗಾರರು ತಿಳಿಸಿದ್ದಾರೆ.

    ಪ್ರತಿವರ್ಷ 150ರಿಂದ 200ಟನ್ ಹಲಸು ಬೆಳೆಯಲಾಗುತ್ತದೆ. ಕರೊನಾದಿಂದಾಗಿ ಈ ಬಾರಿ ಶೇ.80 ಹಲಸಿಗೆ ಮಾರುಕಟ್ಟೆಯಿಲ್ಲದಂತಾಗಿದ್ದು, ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.
    ರವಿಕುಮಾರ್, ಅಧ್ಯಕ್ಷ, ಹಲಸು ಬೆಳೆಗಾರರ ಸಂಘ

    ಹಲಸು ಬೆಳೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಪರಿಹಾರ ಜಾರಿಯಾಗಿಲ್ಲ. ಬೆಳೆಗಾರರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.
    ಶ್ರೀನಿವಾಸ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts