ಮುಂಬೈ: ಬಾಲಿವುಡ್ ಲವ್ ಬರ್ಡ್ಸ್ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಹೆಚ್ಚು ಕಡಿಮೆ ವರ್ಷಗಳು ಕೈ ಕೈ ಹಿಡಿದು ಸುತ್ತಾಡಿದ್ದಾರೆ. ಈ ಬಾಲಿವುಡ್ನ ಮುದ್ದಾದ ಜೋಡಿ ಪ್ರೀತಿಸುತ್ತಿರುವ ವಿಷಯ ಅದ್ಯಾವಾಗ ಬೆಳಕಿಗೆ ಬಂತೋ ಆಗಲೇ ಇವರಿಬ್ಬರ ಮದುವೆಯ ಬಗ್ಗೆಯೂ ಚರ್ಚೆಯಾಗುತ್ತಿತ್ತು. ಇಲ್ಲಿಯವರೆಗೆ ಹೆಚ್ಚು ಕಡಿಮೆ 10 ಸಲ ಈ ಜೋಡಿಯ ಮದುವೆಯ ಬಗ್ಗೆ ಸುದ್ದಿಗಳು ಹರಿದಾಡಿದ್ದಾವೆ.
ಆದರೆ, ಈ ಜೋಡಿ ಈಗ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರಂತೆ. ಹೌದು, ಇದೇ ಏಪ್ರಿಲ್ 13 ರಿಂದಲೇ ನಟಿ ಆಲಿಯಾ ಭಟ್ ಹಾಗೂ ನಟ ರಣ್‌ಬೀರ್ ಕಪೂರ್ ಮದುವೆಯ ಸಂಭ್ರಮಗಳು ಆರಂಭ ಆಗಲಿದೆಯಂತೆ. ಏಪ್ರಿಲ್ 13 ರಂದು ಮೆಹೆಂದಿ ಕಾರ್ಯಕ್ರಮ ನಡೆಯಲಿದ್ದು, 14 ರಂದು ಸಂಗೀತ್ ಕಾರ್ಯಕ್ರಮ ನಡೆಯಲಿದೆಯಂತೆ. ಇನ್ನು, ಏಪ್ರಿಲ್ 15 ರಂದು ಈ ಜೋಡಿ ಹಸೆಮಣೆ ಏರಲಿದೆ ಎಂಬ ಮಾಹಿತಿಗಳು ಸದ್ಯ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.
ನಟಿ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಏಪ್ರಿಲ್ 15 ರಂದು ವಿವಾಹವಾಗಲಿದ್ದು, ಏಪ್ರಿಲ್ 13 ರಂದು ಆರಂಭವಾಗುವ ಇಬ್ಬರ ಮದುವೆಯ ಸಂಭ್ರಮ ಏಪ್ರಿಲ್ 17 ರ ವರೆಗೂ ನಡೆಯುತ್ತೆ ಎನ್ನಲಾಗಿದೆ. ಕೊನೆಗೂ, 5 ವರ್ಷಗಳು ಅಭಿಮಾನಿಗಳನ್ನು ಕಾಯಿಸಿ ಇದೀಗ ಮದುವೆಯಾಗುತ್ತಿರುವ ಈ ಮುದ್ದಾದ ಜೋಡಿ ಒಂದಾಗುವದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇನ್ನು ಈ ಜೋಡಿಯ ಮದುವೆಗೆ 80 ರಿಂದ 100 ಕೋಟಿ ಖರ್ಚು ಆಗಲಿದ್ದು, ಮುಂಬೈನ ಆರ್ಕೆ ಸ್ಟುಡಿಯೋದಲ್ಲಿ ಮದುವೆ ನಡೆಯಲಿದೆಯಂತೆ.
ಚಿತ್ರಮಂದಿರಗಳ ಮಾಲೀಕರಿಂದಲೂ ತಿರಸ್ಕರಿಸಲ್ಪಟ್ಟ RGV ಸಿನಿಮಾ! ‘ಡೇಂಜರಸ್’ಗೆ ನೋ ರಿಲೀಸ್; ಕಾರಣ?
Contents
ಮುಂಬೈ: ಬಾಲಿವುಡ್ ಲವ್ ಬರ್ಡ್ಸ್ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಹೆಚ್ಚು ಕಡಿಮೆ ವರ್ಷಗಳು ಕೈ ಕೈ ಹಿಡಿದು ಸುತ್ತಾಡಿದ್ದಾರೆ. ಈ ಬಾಲಿವುಡ್ನ ಮುದ್ದಾದ ಜೋಡಿ ಪ್ರೀತಿಸುತ್ತಿರುವ ವಿಷಯ ಅದ್ಯಾವಾಗ ಬೆಳಕಿಗೆ ಬಂತೋ ಆಗಲೇ ಇವರಿಬ್ಬರ ಮದುವೆಯ ಬಗ್ಗೆಯೂ ಚರ್ಚೆಯಾಗುತ್ತಿತ್ತು. ಇಲ್ಲಿಯವರೆಗೆ ಹೆಚ್ಚು ಕಡಿಮೆ 10 ಸಲ ಈ ಜೋಡಿಯ ಮದುವೆಯ ಬಗ್ಗೆ ಸುದ್ದಿಗಳು ಹರಿದಾಡಿದ್ದಾವೆ.ಆದರೆ, ಈ ಜೋಡಿ ಈಗ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರಂತೆ. ಹೌದು, ಇದೇ ಏಪ್ರಿಲ್ 13 ರಿಂದಲೇ ನಟಿ ಆಲಿಯಾ ಭಟ್ ಹಾಗೂ ನಟ ರಣ್‌ಬೀರ್ ಕಪೂರ್ ಮದುವೆಯ ಸಂಭ್ರಮಗಳು ಆರಂಭ ಆಗಲಿದೆಯಂತೆ. ಏಪ್ರಿಲ್ 13 ರಂದು ಮೆಹೆಂದಿ ಕಾರ್ಯಕ್ರಮ ನಡೆಯಲಿದ್ದು, 14 ರಂದು ಸಂಗೀತ್ ಕಾರ್ಯಕ್ರಮ ನಡೆಯಲಿದೆಯಂತೆ. ಇನ್ನು, ಏಪ್ರಿಲ್ 15 ರಂದು ಈ ಜೋಡಿ ಹಸೆಮಣೆ ಏರಲಿದೆ ಎಂಬ ಮಾಹಿತಿಗಳು ಸದ್ಯ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.ನಟಿ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಏಪ್ರಿಲ್ 15 ರಂದು ವಿವಾಹವಾಗಲಿದ್ದು, ಏಪ್ರಿಲ್ 13 ರಂದು ಆರಂಭವಾಗುವ ಇಬ್ಬರ ಮದುವೆಯ ಸಂಭ್ರಮ ಏಪ್ರಿಲ್ 17 ರ ವರೆಗೂ ನಡೆಯುತ್ತೆ ಎನ್ನಲಾಗಿದೆ. ಕೊನೆಗೂ, 5 ವರ್ಷಗಳು ಅಭಿಮಾನಿಗಳನ್ನು ಕಾಯಿಸಿ ಇದೀಗ ಮದುವೆಯಾಗುತ್ತಿರುವ ಈ ಮುದ್ದಾದ ಜೋಡಿ ಒಂದಾಗುವದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇನ್ನು ಈ ಜೋಡಿಯ ಮದುವೆಗೆ 80 ರಿಂದ 100 ಕೋಟಿ ಖರ್ಚು ಆಗಲಿದ್ದು, ಮುಂಬೈನ ಆರ್ಕೆ ಸ್ಟುಡಿಯೋದಲ್ಲಿ ಮದುವೆ ನಡೆಯಲಿದೆಯಂತೆ.
ಉತ್ತರ ಭಾರತದಲ್ಲಿ 12 ಗಂಟೆಗಳಲ್ಲಿ 3.35 ಕೋಟಿ ಪ್ರೀ-ಬಿಸ್ನೆಸ್! ಸೌತ್ನಲ್ಲಿ ಹೇಗಿದೆ ‘ಕೆಜಿಎಫ್: 2’ ಟಿಕೆಟ್ ಸೇಲ್?