More

    Web Exclusive | ಹಟ್ಟಿಯಲ್ಲೊಂದು ಕಲ್ಲಿನ ಗ್ರಂಥಾಲಯ: ರಾಜ್ಯದ ಏಕೈಕ ಕೋರ್ ಲೈಬ್ರರಿ, ಅಧ್ಯಯನ-ಸಂಶೋಧನೆಗೆ ಸಹಕಾರಿ..

    | ಬಲಭೀಮರಾವ್ ಕುಲಕರ್ಣಿ ಹಟ್ಟಿಚಿನ್ನದಗಣಿ (ರಾಯಚೂರು)

    ಸಾಮಾನ್ಯವಾಗಿ ಪುಸ್ತಕಗಳಿರುವ ಅಥವಾ ಇ-ಲೈಬ್ರರಿಯನ್ನು ನೀವು ನೋಡಿರಬಹುದು. ಆದರೆ, ಹಟ್ಟಿಚಿನ್ನದಗಣಿಯಲ್ಲೊಂದು ಕಲ್ಲುಗಳೇ ಇರುವ ವಿಶೇಷ ಗ್ರಂಥಾಲಯವೊಂದಿದೆ. ಕಲ್ಲಿನಲ್ಲಿ ಅಡಕವಾದ ಖನಿಜಾಂಶ ಅಧ್ಯಯನ ಮತ್ತು ಸಂಶೋಧನೆಗೆ ಇದು ಉಪಯುಕ್ತವಾಗಿದೆ. ಇದು ರಾಜ್ಯದ ಏಕೈಕ ಕಲ್ಲಿನ ಗ್ರಂಥಾಲಯ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಹಟ್ಟಿಗೋಲ್ಡ್​ಮೈನ್ಸ್ ಕೋರ್ ಲೈಬ್ರರಿ ಎಂತಲೂ ಕರೆಯುತ್ತಾರೆ.

    ಚಿನ್ನದಗಣಿ ಕಂಪನಿಯಲ್ಲಿ 2011ರಲ್ಲಿ ಅನ್ವೇಷಣಾ ವಿಭಾಗದಿಂದ ಇದು ಸ್ಥಾಪಿತವಾಗಿದೆ. ಕಂಪನಿ ಆಡಳಿತ ಕಚೇರಿ ಹಿಂಭಾಗದ ಅರ್ಧ ಎಕರೆ ಪ್ರದೇಶದಲ್ಲಿ ನಿರ್ವಣಗೊಂಡ ಈ ಲೈಬ್ರರಿಯಲ್ಲಿ ಹಟ್ಟಿಚಿನ್ನದಗಣಿ ಕಂಪನಿಯ ಮಲ್ಲಪ್ಪ, ಸೆಂಟ್ರಲ್ ಹಾಗೂ ವಿಲ್ಹೇಜ್ ಶಾಫ್ಟ್ , ದೇವದುರ್ಗ ತಾಲೂಕಿನ ಊಟಿ, ಸಿರವಾರ ತಾಲೂಕಿನ ಹೀರಾ-ಬುದ್ಧಿನ್ನಿ, ಲಿಂಗಸುಗೂರು ತಾಲೂಕಿನ ವಂದಲಿ ಹೊಸುರು, ಚಿತ್ರದುರ್ಗ ಜಿಲ್ಲೆಯ ಇಂಗಳದಾಳ, ಅಜ್ಜನಹಳ್ಳಿ, ಕೋಲಾರದ ಕೆಜಿಎಫ್ ಸೇರಿದಂತೆ ಎಲ್ಲೆಲ್ಲಿ ಅದಿರು ಸಂಶೋಧನೆ ನಡೆದಿದೆಯೋ ಅಲ್ಲಲ್ಲಿ ಡ್ರಿಲ್ಲಿಂಗ್ ಮಾಡಿದ ಕಲ್ಲಿನ ಮಾದರಿಗಳನ್ನು ಆಯಾ ಸ್ಥಳಗಳು ಮತ್ತು ಸಂಶೋಧನೆ ನಡೆದ ವರ್ಷಗಳ ಅನುಸಾರವಾಗಿ ಸಂಗ್ರಹಿಸಿಡಲಾಗಿದೆ.

    Web Exclusive | ಹಟ್ಟಿಯಲ್ಲೊಂದು ಕಲ್ಲಿನ ಗ್ರಂಥಾಲಯ: ರಾಜ್ಯದ ಏಕೈಕ ಕೋರ್ ಲೈಬ್ರರಿ, ಅಧ್ಯಯನ-ಸಂಶೋಧನೆಗೆ ಸಹಕಾರಿ..
    ಗಣಿ ಕಂಪನಿಯ ಕಲ್ಲಿನ ಗ್ರಂಥಾಲಯದ ಕೊಠಡಿ.

    ಗಣಿಗಾರಿಕೆ ಕುರಿತು ಸಂಶೋಧನೆ ಹಾಗೂ ಡ್ರಿಲ್ಲಿಂಗ್ ನಡೆಸುವ ಕೇಂದ್ರ ಸರ್ಕಾರದ ಎಂಇಸಿಎಲ್, ಜಿಎಸ್​ಐ ಸೇರಿ ಹಲವು ಇಲಾಖೆಗಳಿಗೆ ಗಣಿಗಾರಿಕೆ ವಿಸ್ತರಣೆ, ಚಿನ್ನ ಸೇರಿ ಹಲವು ಅದಿರುಗಳ ಪತ್ತೆ ಮಾಡಲು ನಡೆಸುವ ಅಧ್ಯಯನಕ್ಕೆ ಈ ಲೈಬ್ರರಿ ಸಹಕಾರಿ. ಯಾವ ವರ್ಷ ಯಾವ ಸ್ಥಳದಲ್ಲಿ ಎಷ್ಟು ಆಳದಲ್ಲಿ ಸಂಶೋಧನೆ ನಡೆಸಲಾಗಿದೆ, ಯಾವ ಅದಿರು ಉತ್ಪಾದನೆ ನಡೆಸಲಾಗಿದೆ, ಆಯಾ ವರ್ಷಾನುಸಾರ ಅದಿರು ಉತ್ಪಾದನೆ, ಉತ್ಪಾದನೆ ವೆಚ್ಚ, ಅದಿರಿನ ಬೆಲೆ ಕುರಿತು ಸವಿಸ್ತಾರ ಮಾಹಿತಿ ಇಲ್ಲಿ ದೊರೆಯುತ್ತದೆ.

    Web Exclusive | ಹಟ್ಟಿಯಲ್ಲೊಂದು ಕಲ್ಲಿನ ಗ್ರಂಥಾಲಯ: ರಾಜ್ಯದ ಏಕೈಕ ಕೋರ್ ಲೈಬ್ರರಿ, ಅಧ್ಯಯನ-ಸಂಶೋಧನೆಗೆ ಸಹಕಾರಿ..
    ಡ್ರಿಲ್ಲಿಂಗ್ ಮಾಡಿದ ಕಲ್ಲನ್ನು ಸಂಗ್ರಹಿಸಿಟ್ಟಿರುವುದು.

    ಉಪಯೋಗವೇನು?

    1900ಕ್ಕೂ ಮುಂಚೆ ಸಮೀಪದ ವಂದಲಿ ಹೊಸುರು ಗಣಿಗಾರಿಕೆ ಅದಿರು ಸೇರಿ ತೆರೆದ ಗಣಿಗಾರಿಕೆಯಿಂದ ಮೂರು ಸಾವಿರ ಅಡಿ ಆಳದವರೆಗೆ ನಡೆಸುತ್ತಿರುವ ಕಂಪನಿ ಗಣಿಗಾರಿಕೆಯ ಕಲ್ಲಿನ ಮಾದರಿಯ ದಾಸ್ತಾನು ಮಾಡಲಾಗಿದೆ. ಇದರಿಂದ ಖನಿಜ ನಿಕ್ಷೇಪಗಳ ವ್ಯವಸ್ಥಿತ ಪರಿಶೋಧನೆ, ಖನಿಜಗಳ ಅಭಿವೃದ್ಧಿ ಮತ್ತು ಸಂರಕ್ಷಣೆ, ಕಲ್ಲು ಆಧಾರಿತ ಯುರೇನಿಯಂ, ಟಂಗಸ್ಟನ್, ಚಿನ್ನ, ತಾಮ್ರ ಮತ್ತಿತರ ಖನಿಜ ಆಧಾರಿತ ಚಟುವಟಿಕೆಗಳ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಇದು ಉತ್ತೇಜನ ನೀಡಲಿದೆ. ಸಂಶೋಧನೆಗಷ್ಟೇ ಅಲ್ಲದೆ, ಪ್ರವಾಸಿಗರಿಗೆ, ಗಣಿಗಾರಿಕೆ ಕುರಿತು ಗ್ರಂಥ ರಚನಾಕಾರರಿಗೆ ಉಪಯುಕ್ತವಾಗಿದೆ.

    Web Exclusive | ಹಟ್ಟಿಯಲ್ಲೊಂದು ಕಲ್ಲಿನ ಗ್ರಂಥಾಲಯ: ರಾಜ್ಯದ ಏಕೈಕ ಕೋರ್ ಲೈಬ್ರರಿ, ಅಧ್ಯಯನ-ಸಂಶೋಧನೆಗೆ ಸಹಕಾರಿ..
    ಡ್ರಿಲ್ಲಿಂಗ್ ಮಾಡಿದ ಕಲ್ಲಿನ ಮಾದರಿ

    Web Exclusive | ಹಟ್ಟಿಯಲ್ಲೊಂದು ಕಲ್ಲಿನ ಗ್ರಂಥಾಲಯ: ರಾಜ್ಯದ ಏಕೈಕ ಕೋರ್ ಲೈಬ್ರರಿ, ಅಧ್ಯಯನ-ಸಂಶೋಧನೆಗೆ ಸಹಕಾರಿ..

    ಗಣಿ ಪ್ರಾರಂಭದಿಂದಲೂ ಡ್ರಿಲ್ಲಿಂಗ್ ಮಾಡಿದ ಕಲ್ಲುಗಳನ್ನು 2011ರಲ್ಲಿ ಹಟ್ಟಿಗೋಲ್ಡ್​ಮೈನ್ಸ್ ಕೋರ್ ಲೈಬ್ರರಿಯಲ್ಲಿ ಸಂಗ್ರಹಿಸಿಡಲಾಗಿದೆ. ವಿವಿಧ ಪ್ರದೇಶಗಳಲ್ಲಿ ನಡೆದ ಕಲ್ಲು ಗಣಿಗಾರಿಕೆ ಮಾದರಿ ಅಧ್ಯಯನ ಮಾಡಿ, ಗಣಿಗಾರಿಕೆ ವಿಸ್ತರಣೆ, ಸ್ಥಾಪನೆ, ಮರು ಉತ್ಪಾದನೆ ಮತ್ತಿತರ ಸಂಶೋಧನೆ ಮಾಡಲು ಮುಂದಿನ ಪೀಳಿಗೆಗೆ ಸಹಕಾರಿಯಾಗಲಿದೆ.

    | ಪ್ರಕಾಶ್ ರಾಯಮಾಜಿ ಹ.ಚಿ.ಗ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts