More

  ರೈಲುಗಳ ಮೇಲೆ ಕಲ್ಲು ತೂರಾಟ ಕ್ರಿಮಿನಲ್ ಅಪರಾಧ

  ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಇತಿ್ತೕಚೆಗೆ ಕೆಲವು ಕಡೆ ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದ ಕೆಲ ಘಟನೆಗಳು ಸಂಭವಿಸಿದ್ದು, ಇಂತಹ ಘಟನೆಗಳನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುವುದು ಎಂದು ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಎಚ್ಚರಿಕೆ ನೀಡಿದ್ದಾರೆ.

  ಚಳಗೇರಿ, ಕುಮಾರಪಟ್ಟಣಂ, ಚಿಕ್ಕಬಾಣಾವರ, ಕುಪ್ಪಂ ಮತ್ತು ಧಮಾವರಂ ರೈಲು ನಿಲ್ದಾಣಗಳ ಬಳಿ ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದ ವರದಿಯಾಗಿವೆ. ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ರೈಲ್ವೆ ರಕ್ಷಣಾ ಪಡೆ ಮತ್ತು ರೈಲ್ವೆ ಪೊಲೀಸ್ ಸಿಬ್ಬಂದಿ ಅಂತಹ ಪ್ರದೇಶಗಳಲ್ಲಿ ಜಾಗರೂಕರಾಗಿದ್ದಾರೆ ಎಂದು ಶ್ರೀವಾಸ್ತವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಯಾವುದೇ ವ್ಯಕ್ತಿ, ಕಾನೂನುಬಾಹಿರ ಕೃತ್ಯ ಅಥವಾ ಉದ್ದೇಶಪೂರ್ವಕ ಲೋಪ ಅಥವಾ ನಿರ್ಲಕ್ಷ್ಯಂದ ರೈಲಿನಲ್ಲಿ ಪ್ರಯಾಣಿಸುವ ಅಥವಾ ಇರುವ ವ್ಯಕ್ತಿಯ ಸುರಕ್ಷತೆಗೆ ಅಪಾಯವನ್ನುಂಟುಮಾಡಿದರೆ ಅಥವಾ ರೈಲಿನ ರೋಲಿಂಗ್ ಸ್ಟಾಕ್ ಗೆ ಅಡ್ಡಿಪಡಿಸುವುದು ಮತ್ತು ಅಡ್ಡಿಪಡಿಸಲು ಪ್ರಯತ್ನಿಸುವುದನ್ನು ಮಾಡಿದಲ್ಲಿ ಅಂತಹ ವ್ಯಕ್ತಿಗೆ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ತಿಳಿಸಿದ್ದಾರೆ.

  ದುಡುಕಿನ ಮತ್ತು ನಿರ್ಲಕ್ಷ್ಯ ರೀತಿಯಲ್ಲಿ ಯಾವುದೇ ಕಾರ್ಯವನ್ನು ಮಾಡುವ ಅಥವಾ ಯಾವುದೇ ರೈಲಿನಲ್ಲಿ ಪ್ರಯಾಣಿಸುವ ವ್ಯಕ್ತಿಯ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಸಾಧ್ಯತೆ ಇರುವ ವ್ಯಕ್ತಿಗೆ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ, ಎರಡನ್ನೂ ವಿಧಿಸಬಹುದು ಎಂದು ತಿಳಿಸಿದ್ದಾರೆ.

  ಅತಿಕ್ರಮಣ ಮತ್ತು ಕಲ್ಲು ತೂರಾಟದಂತಹ ಘಟನೆಗಳು ಕಂಡುಬಂದರೆ ಸಹಾಯವಾಣಿ ಸಂಖ್ಯೆ (139) ಗೆ ಮಾಹಿತಿ ನೀಡುವಂತೆ ಅರವಿಂದ ಶ್ರೀವಾಸ್ತವ ಅವರು ಸಾರ್ವಜನಿಕರು ಮತ್ತು ಪ್ರಯಾಣಿಕರನ್ನು ಕೋರಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts