More

    Web Exclusive | ಕಳ್ಳರಿಗೆ ಸಂತಸ ತಂದ ಪೆಟ್ರೋಲ್ ದರ ಏರಿಕೆ, ಬೈಕ್ ಮಾಲೀಕರು ಹೈರಾಣ

    ಪೆಟ್ರೋಲ್ ಬೆಲೆ ಏರಿಕೆ ಈಗ ಹೊಸ ಸಮಸ್ಯೆ ತಂದೊಡ್ಡಿದೆ. ಇಷ್ಟು ದಿನ ಮನೆ ಬೀಗ ಮುರಿದು ಒಳ ನುಗ್ಗಿ ಆಭರಣ ಕದಿಯುತ್ತಿದ್ದ ಕಳ್ಳರೀಗ, ಮನೆಯಂಗಳದಲ್ಲಿ ನಿಲ್ಲಿಸಿರುವ ವಾಹನಗಳಿಂದ ಪೆಟ್ರೋಲ್ ಎಗರಿಸಿ ಪರಾರಿಯಾಗುತ್ತಿದ್ದಾರೆ. ಹೀಗಾಗಿ ಕುಂದಾನಗರಿ ಖ್ಯಾತಿಯ ಬೆಳಗಾವಿ ಜನ, ಅಪಾರ್ಟ್​ಮೆಂಟ್​ನ ಪಾರ್ಕಿಂಗ್​ನಲ್ಲಿ ಹಾಗೂ ತಮ್ಮದೇ ಮನೆಯ ಅಂಗಳದಲ್ಲಿ ವಾಹನ ನಿಲ್ಲಿಸಲೂ ಹಿಂಜರಿಯುವಂತಾಗಿದೆ. ಪೆಟ್ರೋಲ್ ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.

    ದಿನೇದಿನೆ ಇಂಧನ ದರ ಗಗನಕ್ಕೆ | ಕಳ್ಳತನಕ್ಕೆ ಸುಲಭ ಮಾರ್ಗ ಕಂಡುಕೊಂಡ ಖದೀಮರು | ಬೈಕ್​ನ ಪೈಪ್ ಕಿತ್ತು ಪೆಟ್ರೋಲ್ ಕಳ್ಳತನ | ಸಿಸಿ ಕ್ಯಾಮರಾಗಳಲ್ಲಿ ಸೆರೆಯಾದ ದೃಶ್ಯಾವಳಿ | ವಾಹನ ಹೊಂದಿದವರಿಗೆ ಶುರುವಾಯ್ತು ಹೊಸ ಕಿರಿಕಿರಿ

    | ಜಿತೇಂದ್ರ ಕಾಂಬಳೆ ಬೆಳಗಾವಿ

    ದಿನೇದಿನೆ ಪೆಟ್ರೋಲ್ ದರ ಗಗನಕ್ಕೇರಿರುತ್ತಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ನಷ್ಟ ಅನುಭವಿಸುತ್ತಿದ್ದರೆ, ಇತ್ತ ವಾಹನಗಳಿಗೆ ಭರಿಸಿದ ಪೆಟ್ರೋಲ್​ಅನ್ನು ಕಳ್ಳರು ಕದ್ದೊಯ್ಯುತ್ತಿರುವುದು ಮತ್ತಷ್ಟು ಆತಂಕ ತಂದೊಡ್ಡಿದೆ. ‘ದುಬಾರಿ ದುನಿಯಾ’ದಿಂದ ತತ್ತರಿಸುತ್ತಿರುವ ಜನಸಾಮಾನ್ಯರು, ಚಿನ್ನಾಭರಣ ಜೋಪಾನವಾಗಿಡುವಂತೆಯೇ ಬೈಕ್​ಗೆ ಹಾಕಿಸಿದ ಪೆಟ್ರೋಲ್ ರಕ್ಷಣೆಗೂ ಕಾವಲು ನಿಲ್ಲುವ ಸ್ಥಿತಿ ಬಂದಿದೆ.

    ಇಂಧನ ಬೆಲೆಯೇರಿಕೆ ಜನರಿಗೆ ಹೊರೆಯಾಗುತ್ತಿದ್ದರೆ, ಕಳ್ಳರಿಗೆ ಅದು ಆಸರೆಯಾಗತೊಡಗಿದೆ. ಬೈಕ್ ಹಾಗೂ ಇನ್ನಿತರ ವಾಹನ ಕದಿಯುತ್ತಿದ್ದ ಕಳ್ಳರೀಗ, ವಾಹನಗಳ ಟ್ಯಾಂಕ್​ಗಳಲ್ಲಿರುವ ಪೆಟ್ರೋಲ್ ಕದಿಯತೊಡಗಿದ್ದಾರೆ. ಪ್ರತಿದಿನವೂ ನೂರಾರು ಲೀಟರ್ ಪೆಟ್ರೋಲ್ ಕದ್ದು ಸಂಗ್ರಹಿಸಿ ಅದನ್ನು ಲೀಟರ್ ದರಕ್ಕಿಂತ ನಾಲ್ಕೈದು ರೂಪಾಯಿ ಕಡಿಮೆ ದರಕ್ಕೆ ಮಾರಾಟ ಮಾಡಿ ದಿನವೂ ಸಾವಿರಾರು ರೂಪಾಯಿ ಆದಾಯ ಮಾಡಿಕೊಳ್ಳತೊಡಗಿದ್ದಾರೆ.

    ಕಳ್ಳತನ ಹೇಗೆ?: ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ ಪೆಟ್ರೋಲ್ ಕಳ್ಳತನ ಪ್ರಕರಣ ಹೆಚ್ಚುತ್ತಿವೆ. ಇಬ್ಬರು ಅಥವಾ ಮೂವರು ಕಳ್ಳರಿರುವ ತಂಡ ರಾತ್ರೋರಾತ್ರಿ ಆಗಮಿಸಿ, ಗೇಟ್​ಗೆ ಬೀಗ ಹಾಕಿದ್ದರೂ ಅದನ್ನು ಹಾರಿ ಒಳ ಬರುತ್ತಾರೆ. ಅಂಗಳದಲ್ಲಿ ನಿಲ್ಲಿಸಿರುವ ಬೈಕ್​ನಿಂದ ಸುಲಭವಾಗಿ ಪೆಟ್ರೋಲ್ ಕದಿಯತೊಡಗಿದ್ದಾರೆ. ಬೈಕ್​ನ ಇಂಜಿನ್​ಗೆ ಪೆಟ್ರೊಲ್ ಪೂರೈಸುವ ಪೈಪ್ ತೆಗೆದು ಬಾಟಲ್​ಗಳಲ್ಲಿ ಪೆಟ್ರೋಲ್ ಸಂಗ್ರಹಿಸಿ ಕದ್ದೊಯ್ಯುತ್ತಿದ್ದಾರೆ. ನಗರದ ಕಪಿಲೇಶ್ವರ ಕಾಲನಿಯಲ್ಲಿ ಶನಿವಾರ ರಾತ್ರಿ ಒಟ್ಟು 10 ಬೈಕ್​ಗಳ ಪೆಟ್ರೋಲ್ ಕದ್ದಿದ್ದಾರೆ. ಈ ದೃಶ್ಯ ಮನೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    Web Exclusive | ಕಳ್ಳರಿಗೆ ಸಂತಸ ತಂದ ಪೆಟ್ರೋಲ್ ದರ ಏರಿಕೆ, ಬೈಕ್ ಮಾಲೀಕರು ಹೈರಾಣ
    ಬೆಳಗಾವಿಯ ಕಪಿಲೇಶ್ವರ ಕಾಲನಿಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್​ನಿಂದ ಕಳ್ಳನೋರ್ವ ಪೆಟ್ರೋಲ್ ಕದಿಯುತ್ತಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು.

    ಕೆಂಪು ನೀರಿನ ಬಾಟಲಿಯನ್ನೂ ಹೊತ್ತೊಯ್ದರು!

    ನಿಲ್ಲಿಸಿಟ್ಟ ವಾಹನಗಳಿಗೆ ನಾಯಿಗಳು ಮೂತ್ರ ಮಾಡುವುದರಿಂದ ಹಾಗೂ ಮನೆಯ ಗೇಟ್ ಮುಂಭಾಗದಲ್ಲಿಯೇ ಮಲ ವಿಸರ್ಜನೆ ಮಾಡುತ್ತದೆ ಎಂಬ ಕಾರಣದಿಂದ ಬೆಳಗಾವಿಯಲ್ಲಿ ಕೆಂಪು ನೀರನ್ನು ಬಾಟಲಿಯೊಂದರಲ್ಲಿ ಹಾಕಿ ಇಡುವ ಪದ್ಧತಿ ಇದೆ. ಈ ಬಾಟಲಿ ಕಂಡರೆ ನಾಯಿಗಳು ಹತ್ತಿರ ಬರುವುದಿಲ್ಲ ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಆದರೆ, ಪೆಟ್ರೊಲ್ ಕದಿಯಲು ಬಂದಿದ್ದ ಕಳ್ಳರು, ಬಾಟಲಿಯೊಳಗೆ ಕೆಂಪು ಬಣ್ಣದ ದ್ರವ ಇರುವುದರಿಂದ ಅದು ಪೆಟ್ರೋಲ್ ಎಂದು ಭಾವಿಸಿ ಅದನ್ನೂ ಕದ್ದೊಯ್ದಿದ್ದಾರೆ. ಈ ದೃಶ್ಯವೂ ಸಹ ಬೆಳಗಾವಿಯ ಕಪಿಲೇಶ್ವರ ಕಾಲನಿಯ ಇನ್ನೋರ್ವರ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಯಿಂದ ತಿಳಿದು ಬಂದಿದೆ.

    ಅಕ್ಕಪಕ್ಕದ ಅಪಾರ್ಟ್​ವೆುಂಟ್​ಗಳಲ್ಲಿ ಬೈಕ್​ಗಳ ಪೆಟ್ರೋಲ್ ಕಳ್ಳತನ ನಡೆಯುತ್ತಿದೆ ಎಂಬ ಮಾಹಿತಿ ಇತ್ತು. ಹೀಗಾಗಿ ರ್ಪಾಂಗ್ ಸ್ಥಳದಲ್ಲೂ ಒಂದು ಸಿಸಿ ಕ್ಯಾಮೆರಾ ಅಳವಡಿಸಿದ್ದೆ. ಶನಿವಾರ ರಾತ್ರಿ ಇಬ್ಬರು ಕಳ್ಳರು ಬಂದು ಪೆಟ್ರೋಲ್ ಕದ್ದೊಯ್ದಿರುವುದು ಸೆರೆಯಾಗಿದೆ. ಶನಿವಾರ ಮನೆಗೆ ಬರುವಾಗ ಬೈಕ್​ಗೆ 5 ಲೀಟರ್ ಪೆಟ್ರೋಲ್ ಹಾಕಿಸಿದ್ದೆ. ಆದರೆ, ಶನಿವಾರ ರಾತ್ರಿ ನನ್ನ ಬೈಕ್​ನಿಂದಲೂ ಕಳ್ಳರು ಪೆಟ್ರೋಲ್ ಕದ್ದಿದ್ದಾರೆ. ಇದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸ್​ಗೆ ದೂರು ನೀಡಲಿದ್ದೇನೆ.

    | ಶಿವಾನಂದ ಹೊರಟ್ಟಿ ಬೆಳಗಾವಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts