More

    ರಾಜ್ಯದಲ್ಲಿ ಎರಡು ದಿನ ವ್ಯಾಪಕ ಮಳೆ, 13 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​

    ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೆ ಸುಳಿಗಾಳಿ ಹಾಗೂ ತೇವಾಂಶ ಭರಿತ ಮೋಡಗಳ ಪ್ರಭಾವದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮುಂದುವರಿದಿದೆ.

    ಶುಕ್ರವಾರ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸರಾಸರಿ 3-5 ಸೆಂ.ಮೀ. ಮಳೆಯಾಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಮುಂದಿನ 24 ಗಂಟೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗಲಿದೆ. ಬೆಂಗಳೂರು, ಬೆಂ. ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ ಮತ್ತು ಮೈಸೂರಿನಲ್ಲಿ ಮೇ 22ರಂದು ವ್ಯಾಪಕ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​​ ಘೋಷಿಸಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ 3 ದಿನ ಸಾಧಾರಣ ಮಳೆಯಾಗಲಿದೆ.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರು ಕರೊನಾಗೆ ಬಲಿ; 2- 3 ದಿನಗಳ ಅಂತರದಲ್ಲಿ ಇಬ್ಬಿಬ್ಬರ ಸಾವು!

    24ರ ಬಳಿಕ ಚಂಡಮಾರುತ: ಬಂಗಾಳಕೊಲ್ಲಿಯಲ್ಲಿ ಮುಂದಿನ ಎರಡು ದಿನಗಳಲ್ಲಿ ಉಂಟಾಗುವ ವಾಯುಭಾರ ಕುಸಿತ ಮೇ 24ರ ನಂತರ ಚಂಡಮಾರುತವಾಗಿ ಪರಿವರ್ತನೆ ಆಗಲಿದೆ. ಈ ಚಂಡಮಾರುತದಿಂದ ರಾಜ್ಯಕ್ಕೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಆದರೆ, ಇದರ ಪ್ರಭಾವದಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮೇ 25ರಿಂದ ಮೇ 29ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಮೇ 25ರ ನಂತರ ಪಶ್ಚಿಮ ಬಂಗಾಳ ಹಾಗೂ ಒರಿಸ್ಸಾದತ್ತ ಮಾರುತಗಳು ಚಲಿಸಲಿವೆ ಎಂದು ಇಲಾಖೆ ಮಾಹಿತಿ ನೀಡಿದೆ.

    ರಾಜ್ಯದಲ್ಲಿ ಮತ್ತೆ 14 ದಿನ ಲಾಕ್​ಡೌನ್; ಜೂ. 7ರ ಬೆಳಗ್ಗೆ 6ರವರೆಗೂ ಕಠಿಣ ರೂಲ್ಸ್

    ಕೋವಿಡ್​ನಿಂದ ಗುಣವಾದ ಮೇಲೆ ಕಾಡುತ್ತದೆಯಂತೆ ನಿತ್ರಾಣ!; ಆರು ತಿಂಗಳಾದರೂ ಸುಸ್ತೋ ಸುಸ್ತು!

    ಕರೊನಾ ಟೆಸ್ಟ್​ ನೀವೇ ಮಾಡಿಕೊಳ್ಳಬಹುದು: ಪರೀಕ್ಷೆಗೆ ಎರಡೇ ನಿಮಿಷ, 15 ನಿಮಿಷಗಳಲ್ಲಿ ಫಲಿತಾಂಶ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts