More

    ವಿಮಾನಗಳಲ್ಲಿ ಇನ್ನು ಮಾಸ್ಕ್ ಕಡ್ಡಾಯವಲ್ಲ; ಉಭಯ ಸಚಿವಾಲಯಗಳ ಸಭೆ ಬಳಿಕ ನಿರ್ಣಯ..

    ನವದೆಹಲಿ: ಕೋವಿಡ್​ 19 ಹಿನ್ನೆಲೆಯಲ್ಲಿ ಕಡ್ಡಾಯಗೊಳಿಸಲಾಗಿದ್ದ ಮಾಸ್ಕ್​ ಧರಿಸುವಿಕೆಯನ್ನು ಸದ್ಯ ಭಾರತದಲ್ಲಿ ಹಿಂಪಡೆಯಲಾಗಿದೆ. ಆದರೆ ಇದು ದೇಶದ ಎಲ್ಲೆಡೆಯೂ ಅಲ್ಲ, ಕೇವಲ ವಿಮಾನದಲ್ಲಿ ಮಾತ್ರ. ಈ ಕುರಿತಂತೆ ಇಂದು ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ.

    ಕೋವಿಡ್​ 19 ಪ್ರಕರಣಗಳಲ್ಲಿ ಗಣನೀಯ ಇಳಿಕೆ ಆಗಿರುವುದರಿಂದ ವಿಮಾನಗಳಲ್ಲಿ ಮಾಸ್ಕ್ ಕಡ್ಡಾಯ ಎಂಬ ನಿಯಮ ತೆಗೆದುಹಾಕಲಾಗಿದೆ. ಆರೋಗ್ಯ ಸಚಿವಾಲಯದೊಂದಿದೆ ಇಂದು ನಾಗರಿಕ ವಿಮಾನಯಾನ ಸಚಿವಾಲಯ ನಡೆಸಿದ ಸಭೆ ಬಳಿಕ ಈ ನಿರ್ಣಯ ತಳೆಯಲಾಗಿದೆ.

    ಹೀಗಾಗಿ ಇನ್ನುಮುಂದೆ ವಿಮಾನಗಳಲ್ಲಿ ಘೋಷಣೆ ಮಾಡುವ ವೇಳೆ ಎಲ್ಲ ಪ್ರಯಾಣಿಕರು ಮಾಸ್ಕ್​ ಬಳಸಬೇಕು ಎಂದು ಸೂಚಿಸಲಾಗುತ್ತದೆಯೇ ವಿನಃ ಧರಿಸದಿದ್ದರೆ ಯಾವುದೇ ದಂಡ ವಿಧಿಸುವುದಿಲ್ಲ ಇಲ್ಲವೇ ಕ್ರಮ ಜರುಗಿಸುವುದಿಲ್ಲ ಎಂಬುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

    ವಿಮಾನಗಳಲ್ಲಿ ಇನ್ನು ಮಾಸ್ಕ್ ಕಡ್ಡಾಯವಲ್ಲ; ಉಭಯ ಸಚಿವಾಲಯಗಳ ಸಭೆ ಬಳಿಕ ನಿರ್ಣಯ..

    ಒಂದೂವರೆ ವರ್ಷದ ಮಗನನ್ನೇ ಮಾರಿದ ತಾಯಿ; ನಾಲ್ಕೂವರೆ ವರ್ಷ ಹುಡುಕಾಡಿ ಪುತ್ರನನ್ನು ಪತ್ತೆ ಮಾಡಿ ಪಡೆದ ತಂದೆ!

    ಶಾಲಾ ಆವರಣದಲ್ಲಿ ಊಟದ ವೇಳೆ ವಿದ್ಯಾರ್ಥಿಗಳ ಮೇಲೇ ಬಿದ್ದ ವಿದ್ಯುತ್ ಕಂಬ!; ಮೂವರಿಗೆ ಗಂಭೀರ ಗಾಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts