More

    ಸಂದರ್ಭ ಬಂದರೆ ಲಾಠಿನೂ ಎತ್ತುತ್ತೀವಿ… ಸರ್ಕಾರ ಕೊಟ್ಟಿರೋ ಸ್ವಾತಂತ್ರ್ಯನೂ ಬಳಸಿಕೊಳ್ತೀವಿ…; ಪೊಲೀಸ್ ಆಯುಕ್ತ ಭಾಸ್ಕರ್​ ರಾವ್​ ವಾರ್ನ್​..

    ಬೆಂಗಳೂರು: ಪಾದರಾಯನಪುರ ಗಲಭೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು ಆರೋಪಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಸರ್ಕಾರವೇ ಪೊಲೀಸರಿಗೆ ಸ್ವಾತಂತ್ರ್ಯ ಕೊಟ್ಟಿದೆ.

    ಅದರ ಬೆನ್ನಲ್ಲೇ ಮಾಧ್ಯಮದವರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್​ ಅವರು, ಪಾದರಾಯನಪುರದಲ್ಲಿ ಗಲಭೆ ನಡೆಸಿದವರನ್ನು ಯಾವ ಕಾರಣಕ್ಕೂ ಬಿಡುವುದಿಲ್ಲ. ಪರಾರಿಯಾದವರನ್ನೂ ಹುಡುಕಿ ಎಲ್ಲರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

    ಪಾದರಾಯನಪುರ ಗಲಾಟೆಗೆ ಸಂಬಂಧಪಟ್ಟು ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಸೌಮೆಂದು ಮುಖರ್ಜಿ ಅವರ ನೇತೃತ್ವದಲ್ಲಿ ಎಂಟು ತಂಡಗಳನ್ನು ರಚಿಸಲಾಗಿದೆ. ಗಲಭೆಕೋರರನ್ನು ಪತ್ತೆ ಹಚ್ಚುವ, ಬಂಧಿಸುವ, ತನಿಖೆ ನಡೆಸುವ ಮತ್ತು ಕೋರ್ಟ್​ ಕೆಲಸಗಳನ್ನು ಈ ಪೊಲೀಸ್​ ತಂಡ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

    ಇವರೆಲ್ಲರ ಭದ್ರತೆಗಾಗಿ ನಾವೆಲ್ಲ ರಿಸ್ಕ್​ ತಗೋಳ್ತಾ ಇರೋವಾಗ ಹೀಗೆ ಹಲ್ಲೆ ಮಾಡಿದ್ದು ಖಂಡನೀಯ. ಇಲ್ಲಿನ ಜನರಿಗೆ ಏನಾದರೂ ಬೇಕಿದ್ದರೆ ಬಿಬಿಎಂಪಿ ಅಧಿಕಾರಿಗಳನ್ನು ಅಥವಾ ನಮ್ಮನ್ನು ಕೇಳಬಹುದಿತ್ತು. ಆದರೆ ಅಮಾಯಕ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಬಹಳ ದೊಡ್ಡ ತಪ್ಪನ್ನೇ ಮಾಡಿದ್ದಾರೆ. ಸರ್ಕಾರವೇ ನಮಗೀಗ ಮುಕ್ತ ಸ್ವಾತಂತ್ರ್ಯ ಕೊಟ್ಟಿದೆ. ಕಠಿಣ ಕ್ರಮ ಕೈಗೊಳ್ಳದೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

    ಲಾಠಿ ತ್ಯಾಗ ಮಾಡಿಲ್ಲ..

    ನಾವು ಯಾರೂ ಲಾಠಿ ತ್ಯಾಗ ಮಾಡಿಲ್ಲ. ಅದನ್ನು ಜತೆ ಇಟ್ಕೊಂಡೇ ಕೆಲಸ ಮಾಡುತ್ತಿದ್ದೇವೆ. ಎತ್ತೋದು..ಬಿಡೋದು ನಮಗೆ ಬಿಟ್ಟಿದ್ದು. ಆಗ ಲಾಠಿ ಬಳಕೆ ಮಾಡಿಲ್ಲ. ಯಾಕೆಂದರೆ ಸೂಕ್ಷ್ಮ ಸನ್ನಿವೇಶ ಇತ್ತು. ಆದರೆ ಈಗ ಎತ್ತುವ ಸಂದರ್ಭ ಬಂದರೆ ಖಂಡಿತ ಬಳಸುತ್ತೇವೆ. ಅಷ್ಟೇ ಅಲ್ಲ ಸರ್ಕಾರ ನೀಡಿರುವ ಎಲ್ಲ ಸ್ವಾತಂತ್ರ್ಯವನ್ನೂ ಬಳಸಿಕೊಳ್ಳುತ್ತೇವೆ. ಯಾವಾಗ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಭಾಸ್ಕರ್​ ರಾವ್​ ಹೇಳಿದ್ದಾರೆ. ಈ ಮೂಲಕ ಪರಿಸ್ಥಿತಿ ಕೈಮೀರಿದರೆ ಪೊಲೀಸರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದ್ದಾರೆ.

    ಲಾಕ್​ಡೌನ್​ ಯಥಾಸ್ಥಿತಿ

    ಹಾಗೇ ಲಾಕ್​ಡೌನ್​ನಲ್ಲಿ ಸದ್ಯ ಯಾವುದೇ ವಿನಾಯಿತಿ ಇಲ್ಲ. ಇಲ್ಲಿಯವರೆಗೆ ಹೇಗಿತ್ತೋ ಹಾಗೇ ಮುಂದುವರಿಯುತ್ತದೆ. ಎಲ್ಲರೂ ಅವರವರ ಮನೆಯೊಳಗೇ ಇರಬೇಕು. ಸುಮ್ಮನೆ ಓಡಾಡಿದರೆ ಕ್ರಮ ಕೈಗೊಳ್ಳುತ್ತೇವೆ. ಇನ್ನು ಪಾಸ್​ ಇಟ್ಟುಕೊಂಡವರು ಕೂಡ ಅದನ್ನು ಯಾವ ಉದ್ದೇಶಕ್ಕೆ ಪಡೆದಿದ್ದಾರೋ ಅಷ್ಟಕ್ಕೇ ಬಳಸಬೇಕು. ಇಲ್ಲದಿದ್ದರೆ ಅವರ ವಾಹನಗಳನ್ನೂ ಜಪ್ತಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಕಲಬುರಗಿಯಲ್ಲಿ 5 ಹೊಸ ಪ್ರಕರಣ- ಉಳಿದೆಡೆ ಇಳಿಮುಖವಾಗಿದೆ ವೈರಸ್‌ ಪ್ರಭಾವ: 395ಕ್ಕೇರಿದ ಸೋಂಕಿತರ ಸಂಖ್ಯೆ – 111 ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts