More

    ‘ಹೈದರಾಬಾದ್​​ ಅನ್ನು ಭಾಗ್ಯನಗರ ಮಾಡುತ್ತೇವೆ’: ತೆಲಂಗಾಣ ಬಿಜೆಪಿ ಮುಖ್ಯಸ್ಥ ಕಿಶನ್ ರೆಡ್ಡಿ

    ಕರೀಂನಗರ(ತೆಲಂಗಾಣ): ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವುದಾಗಿ ತೆಲಂಗಾಣ ಬಿಜೆಪಿ ಘಟಕದ ಮುಖ್ಯಸ್ಥ ಜಿ. ಕಿಶನ್ ರೆಡ್ಡಿ ಸೋಮವಾರ ಹೇಳಿದ್ದಾರೆ.

    ಇದನ್ನೂ ಓದಿ: ಮತದಾನ ದಿನ ಕೆಸಿಆರ್​ಗೆ ಜನ ಸಿನಿಮಾ ತೋರಿಸ್ತಾರೆ: ತೆಲಂಗಾಣದಲ್ಲಿ ಪ್ರಧಾನಿ ಮೋದಿ ಅಭಿಮತ

    ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದ ನಂತರ ನಾವು ಹೈದರಾಬಾದ್ ಅನ್ನು ಮರುನಾಮಕರಣ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಮತ್ತು ಹಿಮಂತ ಬಿಸ್ವಾ ಶರ್ಮಾ ಈಗಾಗಲೇ ಹೇಳಿದ್ದಾರೆ. ಮದ್ರಾಸ್ ಅನ್ನು ಚೆನ್ನೈ ಎಂದು, ಕಲ್ಕತ್ತಾವನ್ನು ಕೋಲ್ಕತ್ತಾ ಎಂದು, ಬಾಂಬೆಯನ್ನು ಮುಂಬೈ ಎಂದು ಮರುನಾಮಕರಣ ಮಾಡಲಾಯಿತು. ನಾವು ರಾಜಪಥವನ್ನು ಕರ್ತವ್ಯ ಪಥ್ ಎಂದು ಮರುನಾಮಕರಣ ಮಾಡಿದ್ದೇವೆ. ಹಾಗಾದರೆ, ಹೈದರಾಬಾದ್ ಅನ್ನು ಏಕೆ ಮರುನಾಮಕರಣ ಮಾಡಬಾರದು ಎಂದು ಪ್ರಶ್ನಿಸಿದರು.

    ಹೈದರ್ ಯಾರು?: ಭಾಗ್ಯನಗರ ಎಂಬುದು ಇದರ ಹಳೆಯ ಹೆಸರು, ನಿಜಾಮರ ಆಳ್ವಿಕೆಯಲ್ಲಿ ಇದನ್ನು ಮರುನಾಮಕರಣ ಮಾಡಲಾಯಿತು. ಈ ಹೈದರ್​ ಯಾರು? ಅವನ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು ನಾವು ಅಧಿಕಾರಕ್ಕೆ ಬಂದ ನಂತರ ಅದನ್ನು ಭಾಗ್ಯನಗರ ಎಂದು ನಾಮಕರಣ ಮಾಡುತ್ತೇವೆ ಎಂದು ರೆಡ್ಡಿ ಹೇಳಿದರು.

    ಕಾಂಗ್ರೆಸ್ ಹೈದರಾಬಾದನ್ನು ಸೃಷ್ಟಿಸಿತು. ಆದರೆ ನಾವು ಭಾಗ್ಯನಗರವನ್ನು ರಚಿಸಲು ಬಂದಿದ್ದೇವೆ ಎಂದು ಘೋಷ್ಮಹಲ್ ಕ್ಷೇತ್ರದಲ್ಲಿ ನಡೆದ ರ‍್ಯಾಲಿಯಲ್ಲಿ ಆದಿತ್ಯನಾಥ್ ಹೇಳಿದ್ದರು. 2020 ರಲ್ಲಿ ಹೈದರಾಬಾದ್ ನಾಗರಿಕರಿಂದ ‘ಭಾಗ್ಯನಗರ’ ಮರುನಾಮಕರಣದ ಕೂಗು ಕೇಳಿ ಬಂದಿತ್ತು.

    ಉತ್ತರ ಪ್ರದೇಶದಲ್ಲಿ, ಯೋಗಿ ಸರ್ಕಾರವು ಅಲಹಾಬಾದ್‌ ಅನ್ನು ಪ್ರಯಾಗ್‌ರಾಜ್, ಫೈಜಾಬಾದ್ ಅನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದೆ. ಅಲ್ಲದೆ, ಅಲಿಗಢವನ್ನು ಹರಿಘರ್, ಮೈನ್‌ಪುರಿಯನ್ನು ಮಾಯನ್ ನಗರ, ಫಿರೋಜಾಬಾದ್ ಅನ್ನು ಚಂದ್ರ ನಗರ ಮತ್ತು ಮಿರ್ಜಾಪುರವನ್ನು ವಿದ್ಯಾಧಾಮ್ ಎಂದು ಮರುನಾಮಕರಣ ಮಾಡುವ ಪ್ರಸ್ತಾಪಗಳಿವೆ. ಹೀಗಾಗಿ ಈ ವಿಷಯ ಚುನಾವಣೆ ಸಂದರ್ಭ ಮಹತ್ವ ಪಡೆದುಕೊಂಡಿದೆ.

    ಸನಾತನ ಧರ್ಮ ಉದಯನಿಧಿಯಿಂದ ನಿರ್ಮೂಲನೆಯಾಗುತ್ತದೆ ಎನ್ನುವುದು ತಮಾಷೆ; ಜಾರ್ಖಂಡ್​ ರಾಜ್ಯಪಾಲರ ವಾಗ್ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts