More

    ಕೈ ಬೆರಳ ಬೆವರಿಂದಲೂ ತಯಾರಾಗತ್ತೆ ಕರೆಂಟ್! ಮೊಬೈಲ್ ಚಾರ್ಜ್ ಮಾಡೋಕೆ ಬೆರಳು ಸಾಕು!

    ವಾಷಿಂಗ್ಟನ್: ಬೆವರು ಏನಕ್ಕಾದರೂ ಉಪಯೋಗಕ್ಕೆ ಬರುತ್ತದೆಯೇ ಎಂದು ಪ್ರಶ್ನಿಸಿದರೆ ಮರು ಯೋಚಿಸದೆ ಇಲ್ಲ ಎಂದು ನೀವು ಉತ್ತರಿಸುತ್ತೀರಿ. ಆದರೆ ಇನ್ನು ಮುಂದೆ ಹಾಗೆ ಹೇಳುವಂತಿಲ್ಲ. ಏಕೆಂದರೆ ಬೆವರಿನಿಂದಲೂ ಕರೆಂಟ್ ಉತ್ಪಾದನೆ ಸಾಧ್ಯ ಎಂದು ತೋರಿಸಿದೆ ಆ ವಿಶ್ವವಿದ್ಯಾಲಯ.

    ಅಮೆರಿಕದ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯಲ್ಲಿ ಇಂತದ್ದೊಂದು ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ. ಬೆರಳ ತುದಿಗೆ ಕಂಡೆಕ್ಟರ್​ಗಳಿರುವ ಸಣ್ಣ ಡಿವೈಸ್ ಒಂದನ್ನು ಟೇಪ್ ಮಾಡಲಾಗುತ್ತದೆ. ಬೆರಳಿನಲ್ಲಿ ಬರುವ ಬೆವರಿನಿಂದ ಅಲ್ಲಿ ಕರೆಂಟ್ ಉತ್ಪಾದನೆ ಆಗುವುದನ್ನು ತಜ್ಞರು ಗುರುತಿಸಿದ್ದಾರೆ.

    ಮೊದಲಿಗೆ ಈ ರೀತಿ ಬೆರಳಿಗೆ ಡಿವೈಸ್ ಹಾಕಿ ಅದನ್ನು ಸಣ್ಣದೊಂದು ಸೆನ್ಸಾರ್​ಗೆ ಹಾಗೂ ಸಣ್ಣ ಪವರ್​ನ ಸ್ಕ್ರೀನ್​ಗೆ ಕನೆಕ್ಟ್ ಮಾಡಲಾಗಿದೆ. ಈ ರೀತಿ ಕನೆಕ್ಟ್ ಮಾಡಿ ಎರಡು ನಿಮಿಷಗಳ ನಂತರ ಸೆನ್ಸಾರ್ ಮತ್ತು ಸ್ಕ್ರೀನ್ ಕೆಲಸ ಮಾಡಲು ಆರಂಭಿಸಿವೆ. ಸದ್ಯದ ಮಟ್ಟಿಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈಗ ತಯಾರಾಗುತ್ತಿರುವ ವಿದ್ಯುತ್​ನ ಪ್ರಮಾಣ ಎಷ್ಟಿದೆಯೆಂದರೆ ಮೂರು ವಾರಗಳ ಕಾಲ ಡಿವೈಸ್ ಬಳಕೆ ಮಾಡಿದರೆ ಅದರಲ್ಲಿ ಉಂಟಾಗುವ ಪವರ್ ಒಂದು ಮೊಬೈಲ್ ಚಾರ್ಜ್ ಮಾಡುವಷ್ಟಾಗುತ್ತದೆಯಂತೆ. ಈಗ ಪವರ್ ಕಡಿಮೆಯಿದ್ದರೂ ಅದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ, ಮುಂಬರುವ ದಿನಗಳಲ್ಲಿ ಹೆಚ್ಚು ಪವರ್ ಉತ್ಪಾದನೆ ಆಗುವಂತೆ ಮಾಡಬಹುದು ಎಂದಿದ್ದಾರೆ ತಜ್ಞರು.

    ಇಲ್ಲ, ನಮ್ಮ ಕೈನಲ್ಲಿ ಬೆವರೇ ಬರುವುದಿಲ್ಲ ಎಂದು ಹೇಳುವವರು ಅನೇಕರಿರುತ್ತಾರೆ. ಆದರೆ ಈ ಡಿವೈಸ್​ಗೆ ನೀವೆಂದುಕೊಂಡಷ್ಟು ಬೆವರಿನ ಅವಶ್ಯಕತೆಯೂ ಇಲ್ಲವಂತೆ. ಏನೂ ಕೆಲಸ ಮಾಡದಿದ್ದರೂ ಬೆರಳಿನಲ್ಲಿ ಸಾಮಾನ್ಯವಾಗಿ ಬೆವರು ಬಂದೇ ಬರುತ್ತದೆ. ಅಷ್ಟೇ ಇದಕ್ಕೆ ಸಾಕು ಎಂದಿದ್ದಾರೆ ತಜ್ಞರು. (ಏಜೆನ್ಸೀಸ್)

    ಬಾಯಿಯಿಂದ ಬಾಯಿಗೆ ಉಸಿರು ನೀಡಿದಾಗ ಇಂಗಾಲದ ಡೈ ಆಕ್ಸೈಡ್ ಕೊಟ್ಟಂತಾಗತ್ತಾ? ನಿಜಾಂಶ ಇಲ್ಲಿದೆ ನೋಡಿ..

    ಆಹಾ ಒಟಿಟಿಯಲ್ಲಿ ಮಿಂಚಲು ಸಿದ್ಧವಾದ ಡೈರೆಕ್ಟರ್ ಪವನ್; ವೆಬ್ ಸರಣಿಯ ಟ್ರೇಲರ್ ಬಿಡುಗಡೆ

    ಕರಾವಳಿ, ಮಲೆನಾಡ ಜನರೇ ಎಚ್ಚರ! ಜುಲೈ 17ರಂದು ಸುರಿಯಲಿದೆ ಜಡಿ ಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts