More

    ನಾವಿಬ್ಬರೂ ಈಗಾಗಲೇ ಅಪ್ಪ-ಅಮ್ಮ: ಐಂದ್ರಿತಾ-ದಿಗಂತ್ ಅಚ್ಚರಿಯ ಹೇಳಿಕೆ

    ಬೆಂಗಳೂರು: ‘ಸ್ಯಾಂಡಲ್​ವುಡ್​ನ ತಾರಾ ಜೋಡಿ ದಿಗಂತ್ ಮತ್ತು ಐಂದ್ರಿತಾ ಅಪ್ಪ- ಅಮ್ಮನಾಗಲಿದ್ದಾರೆ’ – ಹೀಗೊಂದು ಸುದ್ದಿ ‘ಯುವರತ್ನ’ ಚಿತ್ರದ ಪ್ರಮೋಷನಲ್ ಕಾರ್ಯಕ್ರಮದ ವೇಳೆ ಕೇಳಿಬಂದಿತ್ತು. ಸೋಷಿಯಲ್ ಮೀಡಿಯಾದಲ್ಲಿಯೂ ಈ ಜೋಡಿಗೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸಲಾಗಿತ್ತು. ಇಷ್ಟೆಲ್ಲ ಸುದ್ದಿ ಹರಿದಾಡುತ್ತಿದ್ದಂತೆ, ‘ಹಾಗೇನು ಇಲ್ಲ’ ಎಂದು ಆ ಸುದ್ದಿಯನ್ನು ತಳ್ಳಿ ಹಾಕಿದ್ದರು ಐಂದ್ರಿತಾ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟೀಕರಣ ಕೊಟ್ಟಿರುವ ಐಂದ್ರಿತಾ, ‘ನಾವಿಬ್ಬರು ಈಗಾಗಲೇ ಅಪ್ಪ-ಅಮ್ಮ ಆಗಿದ್ದೇವೆ. ಅದೂ ಮುದ್ದು ಶ್ವಾನಗಳಿಗೆ …’ ಎಂದು ಹೇಳುವ ಮೂಲಕ ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ. ಐಂದ್ರಿತಾ ಮತ್ತು ದಿಗಂತ್ ಮೊದಲಿಂದಲೂ ಶ್ವಾನ ಪ್ರಿಯರು.

    ಈ ಇಬ್ಬರ ಸೋಷಿಯಲ್ ಮೀಡಿಯಾ ಪುಟ ತೆರೆದರೆ, ಅಲ್ಲಿ ಶ್ವಾನಗಳೊಂದಿಗಿನ ಫೋಟೋಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತವೆ. ಹಾಗಾಗಿ ಆ ಶ್ವಾನಗಳೇ ನಮ್ಮ ಮಕ್ಕಳು, ಅವುಗಳಿಗೆ ನಾವೇ ಪಾಲಕರು ಮತ್ತು ಪೋಷಕರು ಎಂದು ಹೇಳಿಕೊಂಡಿದ್ದಾರೆ ಐಂದ್ರಿತಾ. ಸಿನಿಮಾ ವಿಚಾರಕ್ಕೆ ಬಂದರೆ, ‘ಗಾಳಿಪಟ 2’ ಚಿತ್ರದ ಶೂಟಿಂಗ್ ಕಜಕಿಸ್ತಾನದಲ್ಲಿ ನಡೆಯುತ್ತಿದ್ದು, ದಿಗಂತ್ ಅತ್ತ ಪ್ರಯಾಣ ಬೆಳೆಸಿದರೆ, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಕೆಲಸಗಳನ್ನು ಐಂದ್ರಿತಾ ಮುಗಿಸಿದ್ದಾರೆ. ಇತ್ತೀಚೆಗಷ್ಟೇ, ಹಿಂದಿ ವೆಬ್​ಸಿರೀಸ್ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಅದರ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts