More

    ಬಂಗಾರದ ಮನುಷ್ಯ ಚಲನಚಿತ್ರ ಪ್ರೇರೇಪಣೆಯಿಂದ ಕಲ್ಲಂಗಡಿ ಬೆಳೆ ಬೆಳೆದ ಬಡ ರೈತ ದಂಪತಿ

    ಮುಳಬಾಗಿಲು: ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಕೆಲಸವು ಸಾಗದು ಮುಂದೆ ಎಂಬ ಬಂಗಾರದ ಮನುಷ್ಯ ಚಲನಚಿತ್ರ ಪ್ರೇರೇಪಣೆಯಿಂದ ತಾಲೂಕಿನ ಬಡ ರೈತ ದಂಪತಿ ಕಲ್ಲಂಗಡಿ ಬೆಳೆಯುವುದನ್ನು ರೂಢಿಸಿಕೊಂಡು ಲಾಭದಾಯಕ ಕೃಷಿಯತ್ತ ಮುಖ ವಾಡಿ ಆರ್ಥಿಕ ಸ್ವಾವಲಂಬನೆ ಸಾಧಿಸಿ ವಾದರಿಯಾಗಿದ್ದಾರೆ.

    ತಾಲೂಕಿನ ಅಂಗೊಂಡಹಳ್ಳಿ ಗ್ರಾಪಂ ವ್ಯಾಪ್ತಿಯ ಬೊಮ್ಮಸಂದ್ರ ಗ್ರಾಮದ ಬಡ ರೈತ ದಂಪತಿಯಾದ ಪಿ.ನಾರಾಯಣಪ್ಪ, ಭಾಗ್ಯಮ್ಮ ಜಮೀನಿನ 5 ಎಕರೆಯಲ್ಲಿ ಪ್ರತಿವರ್ಷ ಬೇಸಿಗೆ ವೇಳೆಗೆ ಕಲ್ಲಂಗಡಿ ಬೆಳೆದು ಲಾಭದಾಯಕ ಚಟುವಟಿಕೆ ವಾಡುತ್ತಾರೆ.

    ಉತ್ತಮ ಹಣ್ಣನ್ನು ಬೆಂಗಳೂರಿನ ಹಾಪ್‌ಕಾಮ್ಸ್‌ಗೆ ವಾರಾಟ ವಾಡುವ ಜತೆಗೆ ಮುಳಬಾಗಿಲಿನಲ್ಲೂ ನೇರವಾಗಿ ಗ್ರಾಹಕರಿಗೆ ವಾರಾಟ ವಾಡಿ ಲಾಭ ಇಮ್ಮಡಿ ವಾಡಿಕೊಳ್ಳುತ್ತಾರೆ. ಸಾವಾನ್ಯವಾಗಿ ರೈತರು ಬೆಳೆ ಬೆಳೆದು ಮಧ್ಯವರ್ತಿಗಳಿಗೆ ತೋಟದಲ್ಲೇ ವಾರಾಟ ವಾಡುತ್ತಾರೆ. ಆದರೆ ಈ ದಂಪತಿ ಬೆಂಗಳೂರಿನ ಹಾಪ್‌ಕಾಮ್ಸ್‌ನಲ್ಲಿ ಹೆಸರು ನೋಂದಾಯಿಸಿ ಇಂಡೆಂಟ್‌ನಂತೆ ಗುಣಮಟ್ಟದ ಹಣ್ಣನ್ನು ತೆಗೆದುಕೊಂಡು ಹೋಗಿ ಕೆಜಿಗೆ 16ರಿಂದ 20 ರೂ.ಗೆ ವಾರಾಟ ವಾಡುತ್ತಾರೆ. ತೋಟದಿಂದ ನೇರವಾಗಿ ತಂದು ಗ್ರಾಹಕರಿಗೆ ವಾರಾಟ ವಾಡುವ ಮೂಲಕ ಮಧ್ಯವರ್ತಿಗಳು, ವ್ಯಾಪಾರಿಗೆ ಹೋಗುವ ಲಾಭದ ಹಣವನ್ನು ಇವರೇ ಗಳಿಸುತ್ತಿದ್ದಾರೆ.

    5 ಎಕರೆ ಜಮೀನಿನಲ್ಲಿ ನಾಮದಾರಿ 295 ತಳಿಯ ಸಸಿ ನೆಟ್ಟು ಸರಾಸರಿ 5ರಿಂದ 15 ಕೆಜಿ ತೂಗುವ ಕಲ್ಲಂಗಡಿ ಹಣ್ಣು ಬೆಳೆದಿದ್ದಾರೆ. ಸುವಾರು 50ಕ್ಕೂ ಹೆಚ್ಚು ಟನ್ ಫಸಲು ಬಂದಿದೆ. ತೋಟದಲ್ಲೇ ವಾರಾಟ ವಾಡಿದರೆ 10 ರಿಂದ 13 ರೂ.ಗೆ ಗುಣಮಟ್ಟದ ಕಲ್ಲಂಗಡಿಯನ್ನು ಕೇಳುತ್ತಾರೆ. ಆದ್ದರಿಂದ ಹಾಪ್‌ಕಾಮ್ಸ್‌ಗೆ ಬೇಡಿಕೆಯಂತೆ ಪೂರೈಕೆ ವಾಡಿ ಉಳಿದ ಹಣ್ಣುಗಳನ್ನು ಮುಳಬಾಗಿಲು ನಗರದಲ್ಲೇ ವಾರಾಟ ವಾಡುವ ಮೂಲಕ ಗ್ರಾವಾಂತರ ಮತ್ತು ನಗರದ ಜನರಿಗೆ ಬೇಸಿಗೆಯಲ್ಲಿ ಉತ್ತಮ ಕಲ್ಲಂಗಡಿ ಹಣ್ಣು ನೀಡುವ ಕಾಯಕ ಮುಂದುವರಿಸಿದ್ದಾರೆ.

    ಬಿತ್ತನೆ ವಾಡುವುದಕ್ಕೂ 15 ದಿನಗಳ ಮುಂಚೆ ಎಕರೆಗೆ 10 ಟನ್ ಕೊಳೆತ ದನದ ಗೊಬ್ಬರ, ಕುರಿ ಗೊಬ್ಬರ ಹಾಗೂ 2 ಲೋಡ್ ಕೆರೆ ಗೋಡು ಮಣ್ಣನ್ನು ಹಾಕಿ 2.5ರಿಂದ 3 ಮೀಟರ್ ಅಂತರದಲ್ಲಿ ಸಾಲುಗಳಲ್ಲಿ 1 ಮೀಟರ್ ಅಂತರದಲ್ಲಿ ಬಿತ್ತನೆ ವಾಡಿ, ಎಕರೆಗೆ 2 ಚೀಲ ಕಾಂಪ್ಲೆಕ್ಸ್ ಗೊಬ್ಬರವನ್ನು ಪ್ರತಿ ಗುಣಿಗೆ ನೀಡಿ ಫಲವತ್ತತೆ ಹೆಚ್ಚಿಸುತ್ತಾರೆ. ಹದವಾಗಿ ನೀರು ಹಾಯಿಸಿ 12 ದಿನಗಳ ನಂತರ ಪ್ರತಿ ಗುಣಿಗೆ 2 ಉತ್ತಮ ಸಸಿ ಬಿಟ್ಟು ಉಳಿದ ಸಸಿ ಕಿತ್ತುಹಾಕಿ ಫಸಲು ಹೆಚ್ಚಾಗುವಂತೆ ನೋಡಿಕೊಳ್ಳುತ್ತಾರೆ.

    5 ಎಕರೆಗೆ 75 ಸಾವಿರ ರೂ. ಖರ್ಚು ಬಂದಿದ್ದು, 50 ಟನ್ ವಾರಾಟ ವಾಡಿದರೆ 7.50 ಲಕ್ಷ್ ರೂ. ಸಿಗುತ್ತದೆ. ಕೊಟ್ಟಿಗೆ ಗೊಬ್ಬರದೊಂದಿಗೆ ಕಾಲ ಕಾಲಕ್ಕೆ ಇಲಾಖೆ ಶಿಫಾರಸು ವಾಡುವ ರಸಗೊಬ್ಬರ, ಕೀಟ ನಾಶಕಗಳನ್ನು ಉಪಯೋಗಿಸುತ್ತೇವೆ.
    ಪಿ.ನಾರಾಯಣಪ್ಪ. ಕಲ್ಲಂಗಡಿ ಬೆಳೆಗಾರ

    ಹಾಪ್‌ಕಾಮ್ಸ್‌ನಲ್ಲಿ ಇಂಡೆಂಟ್ ಹಾಕಿ ಅವರು ಹೇಳಿದ ದಿನದಂದು ಉತ್ತಮ ಗುಣಮಟ್ಟದ ಹಣ್ಣನ್ನು ತೆಗೆದುಕೊಂಡು ಹೋಗಿ 22 ರೂ ಕೆ.ಜಿಯಂತೆ ನೇರವಾಗಿ ಗ್ರಾಹಕರಿಗೆ ವಾರಾಟ ವಾಡುತ್ತೇವೆ. ಸ್ಥಳೀಯವಾಗಿ 16 ರಿಂದ 20 ರೂ ಕೆಜಿ.ಗೆ ವಾರಾಟ ವಾಡುತ್ತೇವೆ. ಬೇರೆಯವರು 25 ರೂ ಕೆ.ಜಿ.ಗೆ ಸ್ಥಳೀಯವಾಗಿ ವಾರಾಟ ವಾಡುತ್ತಾರೆ.
    ಭಾಗ್ಯಮ್ಮ, ಬೊಮ್ಮಸಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts