More

    ಮುಳಬಾಗಿಲು ಎಂದೇ ಕರೆಯೋಣ!

    ಮುಳಬಾಗಿಲು : ಸರ್ಕಾರಿ ದಾಖಲೆ, ಸಾರ್ವಜನಿಕ ಕ್ಷೇತ್ರದ ವಾಣಿಜ್ಯ ಮಳಿಗೆಗಳು ಸೇರಿದಂತೆ ಸಾಮಾಜಿಕ ಜಾಲತಾಣ ಹಾಗೂ ಕೆಲ ಮಾಧ್ಯಮಗಳಲ್ಲಿ ಮುಳಬಾಗಿಲು ಎಂಬ ಹೆಸರಿನ ಬದಲು ಮುಳಬಾಗಲು, ಮುಳಬಾಗಲ್​, ಮುಲಬಾಗಲ್​ ಎಂದು ಬಳಸುತ್ತಿದ್ದು, ನ.1ರ ರಾಜ್ಯೋತ್ಸವದೊಳಗೆ ಕನ್ನಡ ಭಾಷೆಯ ಉಚ್ಛಾರಣೆ ಹೊಂದಿರುವ ಮುಳಬಾಗಿಲು ಎಂಬ ಪದ ಬಳಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಕನ್ನಡ ಪರ ಹೋರಾಟಗಾರ ಚಿತ್ರಕಲಾವಿದ
    ಜೆಮಿನಿ ವೇಣು ಆಗ್ರಹಿಸಿದರು.
    ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ರಿಟಿಷರು, ಮೊಘಲ ಆಡಳಿತ ಕೊನೆಗೊಂಡು 3&4 ಶತಮಾನಗಳು ಕಳೆದರೂ ಅವರ ಕಾಲದಲ್ಲಿ ಬಳಸುತ್ತಿದ್ದ ಶಬ್ದ, ಉಚ್ಛಾರಣೆಗಳನ್ನು ಇಂದಿಗೂ ಬಳಸುತ್ತಿರುವುದು ವಿಪರ್ಯಾಸ. ಮುಳಬಾಗಿಲು ಹೆಸರಿನ ಬದಲಾಗಿ ತೆಹರೆವಾರಿ ಹೆಸರುಗಳನ್ನು ಬಳಸುತ್ತಿರುವುದು ಆಕ್ಷೇಪಣಿಯ. ಅದಕ್ಕಾಗಿ ಮುಳಬಾಗಿಲು ಎಂದು ಕನ್ನಡದಲ್ಲೇ ಕರೆಯೋಣ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದು, ಕನ್ನಡರಾಜ್ಯೋತ್ಸವದ ಒಳಗಾಗಿ ಮುಳಬಾಗಿಲು ಎಂದು ಬಳಸುವುದನ್ನು ಅಧಿಕೃತಗೊಳಿಸಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು.
    ಕನ್ನಡ ಸೇನೆ ಜಿಲ್ಲಾ ಮುಖಂಡ ಕನ್ನಡಮಿತ್ರ ವೆಂಕಟಪ್ಪ ಮಾತನಾಡಿ, ಸ್ವಾಭಿಮಾನಿ ಕನ್ನಡಿಗರು ಕನ್ನಡದ ಹೆಸರನ್ನೇ ಹೆಚ್ಚಾಗಿ ಬಳಸಬೇಕು. ನಮ್ಮ ಊರಿಗೆ ಬೇರೆಯವರು ಕರೆದಿರುವ ಹೆಸರು ಬೇಡ. ನೆಲದ ಸಂಸತಿ ಪರಂಪರೆಯಿಂದ ಬಳುವಳಿಯಾಗಿ ಬಂದಿರುವ ಹೆಸರುಗಳನ್ನು ಹೆಚ್ಚಾಗಿ ಬಳಸೋಣ. ಸರ್ಕಾರದ ಪಹಣಿ, ದಾಖಲೆಗಳಲ್ಲಿ ಮುಳಬಾಗಿಲು ಎಂದು ಕಡ್ಡಾಯವಾಗಿ ನಮೂದಾಗಬೇಕು. ವಿವಿಧ ಕಚೇರಿ, ಪೊಲೀಸ್​ ಠಾಣೆಗಳ ನಾಮಫಲಕಗಳಲ್ಲಿ ಮುಳಬಾಗಿಲು ಎಂದು ಬದಲಾಗಬೇಕು.ನಾಡಿನ ನೆಲ, ಜಲ, ಭಾಷೆ ಸಂಸತಿಗೆ ಪ್ರಾಧ್ಯಾನ್ಯತೆ ನೀಡುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ ಕ್ರಮವಹಿಸಬೇಕು ಎಂದರು. ದುಗ್ಗಸಂದ್ರ ಹೋಬಳಿ ಮಾಜಿ ಅಧ್ಯಕ್ಷ ಬೇವಹಳ್ಳಿ ನಾಗರಾಜ್​, ವಕೀಲ ರಂಜಿತ್​ ಕುಮಾರ್​, ಮಾರಾಂಡಹಳ್ಳಿ ಕೃಷ್ಣಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts