More

    ಮಾಂಡೌಸ್​ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ; ಜಿಲ್ಲೆಯಾದ್ಯಂತ ಅಘೋಷಿತ ಬಂದ್​

    ಕೋಲಾರ: ಜಿಲ್ಲೆಯಲ್ಲಿ ಮಾಂಡೌಸ್​ ಚಂಡಮಾರುತ ಅಬ್ಬರ ಹೆಚ್ಚಾಗಿ ಶನಿವಾರ ಇಡೀ ದಿನ ಎಡೆಬಿಡದೆ ಮಳೆ ಸುರಿಯಿತು. ಇದರಿಂದಾಗಿ ಜಿಲ್ಲೆಯಲ್ಲಿ ಅೂಷಿತ ಬಂದ್​ ನಿರ್ಮಾಣವಾದಂತಾಗಿತ್ತು. ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿತು.

    ಬಸ್​ ಸಂಚಾರ ವಿರಳವಾಗಿದ್ದು, ದ್ವಿಚಕ್ರ ವಾಹನಗಳನ್ನು ರಸ್ತೆಗೆ ಇಳಿಸುವ ಸಾಹಸವನ್ನು ಸವಾರರು ಮಾಡಲಿಲ್ಲ. ಮಳೆ ಜತೆ ಬಿರುಗಾಳಿ ರಭಸವಾಗಿ ಬೀಸುತ್ತಿದ್ದರಿಂದ ತರಕಾರಿ, ತೆನೆ ಕಟಾವು ಮಾಡಬೇಕಿದ್ದ ರಾಗಿ ಮತ್ತು ಜೋಳದ ಬೆಳೆಗಳು ನೆಲಕಚ್ಚಿದ್ದು ರೈತರು ತೊಂದರೆಗೀಡಾಗಿದ್ದಾರೆ. ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಸಾಧ್ಯವಾಗದೆ ರೈತರು ಪರದಾಡಿದರು.

    ಬೆಳೆಗೆ ಹಾನಿ: ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟರ್​ ಪ್ರದೇಶದಲ್ಲಿ ಬೆಳೆದಿದ್ದ ಚೆಂಡು, ಸೇವಂತಿ ಹೂವಿನ ಕಾಂಡಗಳು ಕಸಿದು ಬೆಳೆಗೆ ಹಾನಿಯಾಗಿದೆ. ಡಿಸೆಂಬರ್​ ಮತ್ತು ಜನವರಿಯಲ್ಲಿ ಮೇಲ್ಮರವತ್ತೂರು, ಶಬರಿಮಲೆ ಮಾಲೆ ಧರಿಸುವ ಭಕ್ತರು ಹೆಚ್ಚಾಗಿದ್ದು ಈ ಸಂದರ್ಭ ಹೂವಿನ ವ್ಯಾಪಾರ ಕುದುರುತಿತ್ತು. ಟೊಮ್ಯಾಟೊ ಮತ್ತು ಆಲೂಗಡ್ಡೆ ಹೆಚ್ಚಾಗಿ ಹಾಕಿದ್ದು ಮಳೆ ಮತ್ತು ಶೀತಗಾಳಿಗೆ ಈ ಬೆಳೆಗಳು ಸೇರಿದಂತೆ ಇತರ ತರಕಾರಿ ಬೆಳೆಗೆ ಸಂಪೂರ್ಣ ಹಾನಿಯಾಗಿದೆ.

    ಮಾಂಡೌಸ್​ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ; ಜಿಲ್ಲೆಯಾದ್ಯಂತ ಅಘೋಷಿತ ಬಂದ್​
    ಅಂಗಮಾರಿ ರೋಗಕ್ಕೊಳಗಾದ ಯಲುವಹಳ್ಳಿಯ ರೈತ ಪ್ರಭಾಕರ್​ ಅವರ ಟೊಮ್ಯಾಟೊ ತೋಟ

    ಹವಾಮಾನ ಇಲಾಖೆಯು ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8ರಿಂದ ಶನಿವಾರ ಬೆಳಗ್ಗೆ 8ರ ವರೆಗೆ 15ಮಿ.ಮೀ. ಮಳೆಯ ಮುನ್ಸೂಚನೆ ನೀಡಿತ್ತು. ಆದರೆ ಈ ಅವಧಿಯಲ್ಲಿ 18ಮಿ.ಮೀ . ಮಳೆ ಸುರಿದಿದೆ. ಇನ್ನು ಭಾನುವಾರ 45ಮಿ.ಮೀ. ನಷ್ಟು ಅಧಿಕ ಮಳೆ ಬರುತ್ತದೆ ಎಂದು ತಿಳಿಸಿದ್ದು, ಶನಿವಾರ ಇಡೀ ದಿನ ಣ ಮಾತ್ರವೂ ಬಿಡುವಿಲ್ಲದಂತೆ ಮಳೆ ಸುರಿದಿದ್ದು, ಭಾನುವಾರ ದಾಖಲೆ ಮಳೆಯಾಗುವ ಸಾಧ್ಯತೆಯಿದೆ.

    ಈ ವರ್ಷ ಜನವರಿಯಿಂದ ಇಲ್ಲಿಯ ತನಕ 726 ಮಿ.ಮೀ .ಸಾಧಾರಣ ಮಳೆಯಾಗಬೇಕಿದ್ದು, 1149 ಮಿ.ಮೀ. ಮಳೆಯಾಗಿದೆ. ಇದು ಸಾಮಾನ್ಯ ಮಳೆಗಿಂತ ಶೇ.58ರಷ್ಟು ಅಧಿಕವಾಗಿತ್ತು. ಕಳೆದ ವರ್ಷ ಅಧಿಕ ಮಳೆಯಾಗಿ ರೈತರು ಲಾಂತರ ರೂ.ನಷ್ಟ ಅನುಭವಿಸಿದ್ದರು.

    ಮಳೆ ಮುನ್ಸೂಚನೆಯಿದ್ದರೂ ಶಾಲೆಗಳಿಗೆ ರಜೆ ನೀಡ ಕಾರಣ ಶನಿವಾರ ಬೆಳಗಿನ ಶಾಲೆಗೆ ಮಕ್ಕಳು ಮಳೆಯಲ್ಲೆ ನೆಂದುಕೊಂಡು ಹೋಗುತ್ತಿರುವುದು ಕಂಡುಬಂತು. ಸಾರ್ವಜನಿಕರು ಶಿಣ ಇಲಾಖೆ ವಿರುದ್ಧ ಛೀಮಾರಿ ಹಾಕಿದ ಬಳಿಕ ಡಿಡಿಪಿಐ ಕೃಷ್ಣಮೂರ್ತಿ ಮಧ್ಯಾಹ್ನ ಶಾಲೆಗಳ ಸ್ಥಿತಿಗತಿಗಳನ್ನು ಅವಲೋಕಿಸಿ ರಜೆ ನೀಡುವ ಅಧಿಕಾರ ಮುಖ್ಯಶಿಕರಿಗೆ ನೀಡಿ ಕೈತೊಳೆದು ಕೊಂಡರು. ಅಷ್ಟರ ಹೊತ್ತಿಗೆ ಶನಿವಾರವಾದ ಕಾರಣ ಶಾಲೆಗಳಿಂದ ಮಕ್ಕಳನ್ನು ಬಿಡಲಾಗಿತ್ತು.

    ಭಾನುವಾರ ಮಳೆಯನ್ನು ನೋಡಿಕೊಂಡು ಸೋಮವಾರ ಶಾಲಾ&ಕಾಲೇಜುಗಳಿಗೆ ರಜೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಮಳೆಯಿಂದ ಶಿಥಿಲಗೊಂಡಿರುವ ಶಾಲೆಗಳಿಗೆ ರಜೆ ನೀಡುವ ಅಧಿಕಾರವೂ ಮುಖ್ಯಶಿಕರಿಗೆ ನೀಡಲಾಗಿದೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.

    ಮಣ್ಣಿನ ಹಳೇ ಮನೆಗಳು ಕುಸಿಯುವ ಆತಂಕ

    ಮುಳಬಾಗಿಲು: ಮಾಂಡೌಸ್​ ಚಂಡಮಾರುತ ಅಬ್ಬರ ಮುಳಬಾಗಿಲಿನಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಆರಂಭಗೊಂಡಿದ್ದು, ರಾತ್ರಿಯಿಂದ ಎಡೆಬಿಡದೆ ಗಾಳಿ ಸಹಿತ ಮಳೆಯಾಗುತ್ತಿದೆ. ಶನಿವಾರವೂ ಮುಂದುವರಿದ ಮಳೆಯಿಂದ ರೈತರ ಬೆಳೆ ನೆಲಕಚ್ಚಿವೆ. ಮಣ್ಣಿನ ಹಳೇ ಮನೆಗಳು ಕುಸಿಯುವ ಹಂತಕ್ಕೆ ತಲುಪಿದ್ದು ಆತಂಕ ಸೃಷ್ಟಿಸಿದೆ.

    ಶುಕ್ರವಾರ 20.2ಮಿ.ಮೀ ಮಳೆಯಾಗಿದೆ. ವಾತಾವರಣದಲ್ಲಿ ಉಷ್ಣಾಂಶ ಕಡಿಮೆಯಾಗಿ 19ಕ್ಕೆ ಕುಸಿದಿದೆ. ಶನಿವಾರವೂ ಮುಂದುವರಿದ ಮಳೆಯಿಂದ ತೇವಾಂಶ ಹೆಚ್ಚಾಗಿದೆ. ತೋಟಗಾರಿಕೆ ಬೆಳೆಗಳಾದ ಟೊಮ್ಯಾಟೊ, ಅಲೂಗಡ್ಡೆ ಸೇರಿ, ಹಣ್ಣು, ತರಕಾರಿ ಬೆಳೆಗಳು ಮೋಡ ಕವಿದ ವಾತಾವರಣ ಹಾಗೂ ತೇವಾಂಶ ಹೆಚ್ಚಾಗಿದ್ದರಿಂದ ಅಂಗಮಾರಿ ರೋಗಕ್ಕೆ ತುತ್ತಾಗಿವೆ.

    ರಾಗಿ, ತೊಗರಿ ಬೆಳೆಗಳು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿವೆ. ಸಾಲ ಮಾಡಿ ಬೆಳೆ ಮಾಡಿದ ರೈತನ ಸ್ಥಿತಿ ಅತಂತ್ರವಾಗಿದೆ. ಒಂದೆರಡು ದಿನದಲ್ಲಿ ಮಳೆ ನಿಲ್ಲದಿದ್ದರೆ, ಸಂಪೂರ್ಣ ಬೆಳೆ ನಷ್ಟವಾಗುವ ಸಾಧ್ಯತೆಗಳಿವೆ.

    ಮೋಡ ಕವಿದ ವಾತಾವರಣ, ಜಡಿಮಳೆಯಿಂದ ರೈತರ ಅಂಗಮಾರಿ ರೋಗಕ್ಕೆ ತುತ್ತಾಗಿ ನೆಲಕಚ್ಚುತ್ತಿವೆ. ತೇವಾಂಶದಿಂದ ಸಂಪೂರ್ಣ ಬೆಳೆ ನಷ್ಟವಾಗುವ ಸಂಭವವಿದ್ದು, ಸರ್ಕಾರ ಮತ್ತು ಜಿಲ್ಲಾಡಳಿತ ರೈತರ ನೆರವಿಗೆ ಧಾವಿಸಬೇಕು ಎಂದು ಯಲುವಹಳ್ಳಿ ರೈತ ಪ್ರಭಾಕರ್​ ಆಗ್ರಹಿಸಿದ್ದಾರೆ.

    ಈಗಾಗಲೇ ನೆಲಗಡಲೆ ಬೆಳೆ ಬಂದಿದ್ದು, ಈಗ ಹೊಲದಲ್ಲಿ ರಾಗಿ, ತೊಗರಿ ಬೆಳೆಯಿದ್ದು, ಹೀಗೆಯೇ ಮಳೆ ಮುಂದುವರಿದರೆ ಫಸಲು ನಷ್ಟಕ್ಕೆವಾಗುವ ಸಾಧ್ಯತೆ ಇದೆ. ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು.
    ಎಸ್​.ರವಿಕುಮಾರ್​, ಹಿರಿಯ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಮುಳಬಾಗಿಲು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts