More

    ಉಪ ಕಾಲುವೆಗಳಲ್ಲಿ ಸರಾಗವಾಗಿ ಹರಿಯದ ನೀರು

    ಕುಶಾಲನಗರ: ಹಾರಂಗಿ ಎಡದಂಡೆ ನಾಲೆಯ 7ನೇ ತೂಬಿನ ಉಪ ಕಾಲುವೆಗಳ ದುರಸ್ತಿ ಕಾರ್ಯವನ್ನು ನೀರಾವರಿ ಇಲಾಖೆ ಕೈಗೊಳ್ಳದಿರುವ ಕಾರಣ ಕಾಡು ಬೆಳೆದು ಸರಾಗವಾಗಿ ನೀರು ಹರಿಯಲು ಸಾಧ್ಯವಾಗದಂತಿದೆ.

    ರೈತರ ಜಮೀನಿಗೆ ನೀರು ಸಮರ್ಪಕವಾಗಿ ಹರಿಯದ ಕಾರಣ ಸಮೀಪದ ಜಮೀನಿನಲ್ಲಿ ಬೇಸಾಯ ಮಾಡಲು ಆಗುತ್ತಿಲ್ಲ. ಇದರಿಂದ ನಿರ್ದಿಷ್ಟ ಪ್ರದೇಶ ಸಂಪೂರ್ಣ ಶೀತಮಯವಾಗಿದೆ. ಹಾಗಾಗಿ ತಕ್ಷಣ ಅದರ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸ್ಥಳೀಯ ರೈತ ಸೋಮಪ್ಪ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

    7ನೇ ತೂಬಿನ ಕಣಿವೆ ಗ್ರಾಮ ಸಮೀಪದಲ್ಲಿ ಎಡದಂಡೆ ನೀರು ಸರಾಗವಾಗಿ ಹರಿಯಲು ಸರಿಯಾದ ಕಾಲುವೆಗಳ ವ್ಯವಸ್ಥೆ ಇಲ್ಲ. ಪರಿಣಾಮ ಕಾಲುವೆಗಳ ಸಮೀಪದ ಮನೆಗಳಿಗೆ ನೀರು ನುಗ್ಗುವ ಪ್ರಸಂಗ ಎದುರಾಗಿದೆ. ಅಲ್ಲದೆ, ಕಾಲುವೆಗಳ ದುರಸ್ತಿಗೆ ನೀರಾವರಿ ಇಲಾಖೆ ಮೂಲಕ ಕ್ರಿಯಾಯೋಜನೆ ಕೈಗೊಂಡಿದ್ದರೂ ಕಾಮಗಾರಿ ನಡೆದಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ರೈತರ ಒತ್ತಾಯಿಸಿದ್ದಾರೆ.

    ಬೇಸಿಗೆ ಬೆಳೆಗೆ ತೊಂದರೆಯಾಗದಂತೆ ರೈತರಿಗೆ ಅವಶ್ಯವಿರುವ ರೀತಿಯಲ್ಲಿ ನೀರು ಹರಿಸಲು ಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟಿ ತೆರವು ಕೆಲಸವನ್ನು ತಕ್ಷಣವೇ ಮಾಡಿಸುತ್ತೇವೆ. ಅಲ್ಲದೆ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಕಾಲುವೆ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು.
    ಸೌಮ್ಯಾ ರಾಜ್
    ಎಇ, ಕಾವೇರಿ ನೀರಾವರಿ ನಿಗಮ, ಹಾರಂಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts