More

    ವಿಷ್ಣುಸಮುದ್ರ ಕೆರೆಗೆ ನ್ಯಾಯ ಕೊಡಿಸಿ

    ಕಡೂರು: ಗೋಂದಿ ಯೋಜನೆಯಡಿ ತಾಲೂಕಿನ ವಿಷ್ಣುಸಮುದ್ರ ಕೆರೆಗೆ ನೀರಿನ ಪ್ರಮಾಣ ಕಡಿತಗೊಳಿಸಿರುವುದನ್ನು ವಿರೋಧಿಸಿ ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ಎಪಿಎಂಸಿ ಆವರಣದಿಂದ ವಿಶ್ವೇಶ್ವರಯ್ಯ ಜಲನಿಗಮದ ಕಚೇರಿವರೆಗೆ ಮೆರವಣಿಗೆ ನಡೆಸಿ ಕಾರ್ಯಪಾಲಕ ಅಭಿಯಂತ ಹರ್ಷ ಹಾಗೂ ತಹಸೀಲ್ದಾರ್ ಜೆ.ಉಮೇಶ್ ಅವರಿಗೆ ಮನವಿ ಸಲ್ಲಿಸಿದರು.

    ಸಮಿತಿ ಅಧ್ಯಕ್ಷ ಶರತ್ ಯಾದವ್ ಮಾತನಾಡಿ, ತರೀಕೆರೆ ಮತ್ತು ಚಿಕ್ಕಮಗಳೂರು ತಾಲೂಕಿಗೆ ನೀರು ನೀಡುವ ಉದ್ದೇಶದಿಂದ ವಿಷ್ಣು ಸಮುದ್ರಕ್ಕೆ ನೀರು ಹರಿಸಲಾಗುತ್ತಿಲ್ಲ. ಈ ಕೆರೆ ತುಂಬಿದರೆ ಸುಮಾರು 70 ಕೆರೆಗಳಿಗೆ ಆಸರೆಯಾಗಲಿದೆ. ಈ ಹಿಂದೆ ನಿಗದಿಪಡಿಸಿದ್ದ ನೀರಿನ ಪ್ರಮಾಣವನ್ನೇ ಮೀಸಲಿಡಬೇಕು ಎಂದು ಆಗ್ರಹಿಸಿದರು.

    15 ವರ್ಷಗಳಿಂದ ಕೆರೆ ಸಂಪೂರ್ಣ ಬತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಗೋಂದಿ ಯೋಜನೆ ಆರಂಭವಾದಾಗ ವಿಷ್ಣುಸಮುದ್ರ ಕೆರೆಗೆ 425 ಎಂಸಿಎಫ್​ಡಿ (ಮೀಟ್ರಿಕ್ ಕ್ಯೂಬಿಕ್ ಫೀಟ್) ನೀರು ಕೊಡುವ ಉದ್ದೇಶವಿತ್ತು. ಈಗ ಕಡಿತಗೊಳಿಸಿ ಕೇವಲ 80 ಎಂಸಿಎಫ್​ಡಿ ನೀರು ನೀಡಲು ಮುಂದಾಗಲಾಗಿದೆ. ಈ ಕೆರೆಗೆ ಬೇರೆ ಯಾವುದೇ ನೀರಿನ ಮೂಲ ಇಲ್ಲದ್ದರಿಂದ ಯೋಜನೆಯಡಿ ಹೆಚ್ಚಿನ ನೀರು ನೀಡಬೇಕು ಎಂದು ಒತ್ತಾಯಿಸಿದರು.

    ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಮಾತನಾಡಿ, ವಿಷ್ಣುಸಮುದ್ರಕ್ಕೆ ಅನ್ಯಾಯವಾಗುತ್ತಿರುವ ಬಗ್ಗೆ ಸರ್ಕಾರದ ಗಮನ ಸೆಳೆಯಲು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು. ಈ ಕೆರೆ ತುಂಬಿದರೆ ದೂರದ ಪಂಚನಹಳ್ಳಿವರೆಗಿನ ಸರಣಿ ಕೆರೆಗಳಿಗೆ ಆಸರೆಯಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts