More

    ಜಲವಿವಾದ ತೆರೆಗೆ ಕೇಂದ್ರ ಸರ್ಕಾರ ಸಂಕಷ್ಟ ಸೂತ್ರ ರೂಪಿಸಲಿ

    ಹಗರಿಬೊಮ್ಮನಹಳ್ಳಿ: ಕಾವೇರಿ ಜಲ ವಿವಾದ ಹಿನ್ನಲೆಯಲ್ಲಿ ಕರ್ನಾಟಕ ಬಂದ್‌ಗೆ ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಪಟ್ಟಣದ ಆಡಳಿತ ಸೌಧ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ ಚಂದ್ರಶೇಖರ್ ಶಂಬಣ್ಣ ಗಾಳಿರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

    ಇದನ್ನೂ ಓದಿ: ಹೆಚ್ಚು ಆರ್‌ಟಿಐ ಬಳಸುವವರ ಮಾಹಿತಿ ಸಂಗ್ರಹಕ್ಕಿಳಿದ ಸರ್ಕಾರ

    ಸಂಘದ ರಾಜ್ಯ ಕಾರ್ಯದರ್ಶಿ ಬಿ.ಗೋಣಿಬಸಪ್ಪ ಮಾತನಾಡಿ, ಇಡೀ ರಾಜ್ಯ ಬರಗಾಲಕ್ಕೆ ತುತ್ತಾಗಿದೆ. 195 ತಾಲೂಕುಗಳಲ್ಲಿ ಬರದ ಛಾಯೆ ಮೂಡಿದ್ದು, ಈ ಪೈಕಿ 161ನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ರಕ್ಷಿಸಬೇಕು. ಕೂಡಲೇ ಬರಗಾಲದ ಅನುದಾನವನ್ನು ಬಿಡುಗಡೆ ಮಾಡಿ. ನರೇಗಾ ಯೋಜನೆಯಲ್ಲಿ ಹೆಚ್ಚು ಹಣ ನೀಡಬೇಕು. ಎನ್.ಡಿ.ಆರ್.ಎಫ್ ನೀತಿಯನ್ನು ಅದನ್ನು ಮಾರ್ಪಾಡು ಮಾಡಿ, ವೈಜ್ಞಾನಿಕವಾಗಿ ರೂಪಿಸಿ.

    ಕಬ್ಬು ಬೆಲೆ ನಿಗಧಿ ಕೇಂದ್ರ ಸರ್ಕಾರ ಶೇ.10.25 ಇಳುವರಿಯನ್ನು ಅಧಾರವಾಗಿ ಇಟ್ಟುಕೊಂಡಿರುವ ರೈತರಿಗೆ ತೊಂದರೆಯಾಗಲಿದೆ. ಅದನ್ನು ಕಡಿತಗೊಳಿಸಿ ಶೇ.8.5 ಇಳುವರಿಗೆ ಮಾನದಂಡವನ್ನು ಅನುಸರಿಸಬೇಕು.

    ಕಾವೇರಿ ಜಲವಿವಾದ ತೀರ್ಪಿನಲ್ಲಿ ನ್ಯಾಯಮಂಡಳಿಯಾಗಲಿ ಅಥವಾ ಸರ್ವೊಚ್ಛ ನ್ಯಾಯಲಯವಾಗಲಿ ಸಂಕಷ್ಟ ಸೂತ್ರಕ್ಕೆ ಸ್ಪಷ್ಟವಾದ ಮಾನದಂಡವನ್ನು ರೂಪಿಸಿರುವುದಿಲ್ಲ.

    ಈ ಕಾರಣದಿಂದಾಗಿ ಮಳೆ ಕೊರತೆಯ ಸಂಧರ್ಭದಲ್ಲಿ ವಿವಾದವು ಬಿಗುಡಾಯಿಸಿ ಅವಲಂಬಿತರು ಅತ್ಯಂತ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೇಂದ್ರ ಸರ್ಕಾರ ಈ ಸಂಬಂಧ ಸೂಕ್ತ ಸಂಕಷ್ಟಸೂತ್ರವನ್ನು ರೂಪಿಸಲು ಮುಂದಾಗಬೇಕು ಎಂದರು.

    ಈ ವೇಳೆ ರೈತ ಮುಖಂಡರಾದ ಬಿ.ಸಿದ್ದನಗೌಡ, ಹರಟೆ ಕಾಳಪ್ಪ, ರವಿಕುಮಾರ ತಂಬ್ರಹಳ್ಳಿ, ಮೃತ್ಯುಂಜಯ ಗೌಡ, ಉಪ್ಪಾರ ಬಸಪ್ಪ, ಎನ್.ವೀರಣ್ಣ, ಯಮನೂರಪ್ಪ, ಹಲಗೇರಿ ಮಹೇಶ್, ಗುಡ್ಡಪ್ಪ, ವಿ.ನಾಗೇಂದ್ರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts