More

    ನೀರಿನ ಬಿಕ್ಕಟ್ಟು​: ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಕುಡಿಯಲು ನೀರು ಕೊಡಿ!

    ಬೆಂಗಳೂರು: ಕಳೆದ ಕೆಲ ವಾರಗಳಿಂದ ರಾಜಧಾನಿ ಬೆಂಗಳೂರಿನ ಜನರು ಭಾರೀ ಪ್ರಮಾಣದಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ನಗರದ ಬಹುತೇಕ ಕಡೆ ಟ್ಯಾಂಕರ್‌ಗಳಿಂದ ನೀರನ್ನು ಪೂರೈಸಲಾಗುತ್ತಿದೆ. ದಿನಕಳೆದಂತೆ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ.

    ಇದನ್ನೂ ಓದಿ: ವಿದೇಶದಲ್ಲಿ ಮದುವೆಯಾಗಲಿರುವ ಭಾರತೀಯರಿಗೆ ಪ್ರಧಾನಿ ಮೋದಿ ವಿಶೇಷ ಸಂದೇಶ!; ಏನಿದು ಮಿಷನ್ ʻವೆಡ್ ಇನ್ ಇಂಡಿಯಾ?

    ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ಉದ್ಭವವಾಗಬಹುದು ಎಂಬ ಮುನ್ಸೂಚನೆ ಇದ್ದರೂ ಕೂಡ ರಾಜ್ಯ ಸರ್ಕಾರ ಬೇಜವಾಬ್ದಾರಿತನದಿಂದ ವರ್ತಿಸಿರುವ ಪರಿಣಾಮ ಬೆಂಗಳೂರಿನ ಜನತೆ ಈಗ ಸಂಕಟಪಡುತ್ತಿದ್ದಾರೆ. ಬೆಂಗಳೂರು ನಗರದ ಬಹುತೇಕ ಭಾಗಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಇದರಿಂದ ಶಾಲಾ ಕಾಲೇಜುಗಳು ಹೊರತಾಗಿಲ್ಲ.

    ನಗರದಲ್ಲಿ ಹೆಚ್ಚುತ್ತಿರುವ ನೀರಿನ ಸಮಸ್ಯೆಯಿಂದ ಬೆಂಗಳೂರಿನ ಕೆಲವು ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಒತ್ತಾಯಿಸಲಾಗುತ್ತದೆ. ನೀರಿನ ಕೊರತೆ ಜೊತೆಗೆ ಬಿಸಿಲಿನ ತಾಪಮಾನ ಕೂಡ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ತಾಪಮಾನವು 31 ಡಿಗ್ರಿ ಸೆಲ್ಸಿಯಸ್ ದಾಟಿದೆ, ಗುರುವಾರ ಗರಿಷ್ಠ 33 ಮತ್ತು ವಾರಾಂತ್ಯದ ವೇಳೆಗೆ 35 ಕ್ಕೆ ತಲುಪಬಹದು ಎನ್ನಲಾಗಿದೆ.

    ನೀರಿನ ಬಿಕ್ಕಟ್ಟು​: ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಕುಡಿಯಲು ನೀರು ಕೊಡಿ!
    tank

    ರಾಜ್ಯ ಸರ್ಕಾರದ ವರದಿಯಂತೆ, ನಗರದಲ್ಲಿ 3,000 ಕ್ಕೂ ಹೆಚ್ಚು ಕೊಳವೆ ಬಾವಿಗಳು ಬತ್ತಿ ಹೋಗಿವೆ ಮತ್ತು ರಾಜ್ಯದ 236 ತಾಲೂಕುಗಳಲ್ಲಿ 223 ಬರ ಪೀಡಿತವಾಗಿವೆ ಎನ್ನಲಾಗಿದೆ.

    ನಗರದ ಸರ್ಕಾರಿ ಶಾಲೆಯೊಂದರ 7ನೇ ತರಗತಿಯ ವಿದ್ಯಾರ್ಥಿಯೋರ್ವ ಮಾತನಾಡಿ, ಶಾಲೆಯಲ್ಲಿ ಕುಡಿಯಲು ನೀರಿಲ್ಲ ಇದರಿಂದ ಸಾಕಷ್ಟ ತೊಂದರೆಯಾಗುತ್ತಿದೆ. ನೀರಿನ ಸಮಸ್ಯೆ ತುಂಬಾ ಇದೆ, ಕುಡಿಯಲು ನೀರು ಸಿಗುತ್ತಿಲ್ಲ, ಊಟ ಮಾಡಿ ಕೈ, ತಟ್ಟೆತೊಳೆಯಲು ಕೂಡ ನೀರಿಲ್ಲ ಎಂದು ವಿದ್ಯಾರ್ಥಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

    ಶಾಲೆಯಲ್ಲಿ ಫಿಲ್ಟರ್ ನೀರಿನ ಸೌಲಭ್ಯವಿಲ್ಲ, ಮಕ್ಕಳು ನನ್ನ ಅಂಗಡಿಗೆ ನೀರಿಗಾಗಿ ಬರುತ್ತಾರೆ ಮತ್ತು ನಾವು ಕುಡಿಯಲು ನೀರು ಕೊಡುತ್ತೇವೆ. ಶಾಲೆಯಲ್ಲಿ ನೀರು ವ್ಯವಸ್ಥೆ ಮಾಡಬೇಕು. ಬೇಸಿಗೆ, ಮಳೆಗಾಲದಲ್ಲೂ ಈ ಶಾಲೆಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ ಎಂದು ಸಣ್ಣ ಪೆಟ್ಟಿಗೆಯೊಂದರ ಮಾಲೀಕರು ಖಾಸಗಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ತನ್ನನ್ನು ತಾನೇ ಮದುವೆ ಆದ ಮಾಡೆಲ್!: ಜನಿನಾ ಪ್ರಜೆರೆಸ್ ಕೊಟ್ಟ ಕಾರಣ ಕೇಳಿದ್ರೆ ದಂಗಾಗ್ತೀರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts