More

    VIDEO | “ಎಲ್ಲಿಗೆ ಹೋಗುತ್ತಿದ್ದೀರಿ ?” ಕೇಳುತ್ತಿದ್ದಾರೆ ಗರ್ಭಿಣಿ ಪೊಲೀಸ್ ಅಧಿಕಾರಿ !

    ಛತ್ತೀಸ್​​ಗಢ : ಗರ್ಭಿಣಿ ಪೊಲೀಸ್ ಅಧಿಕಾರಿಯೊಬ್ಬರು ರಸ್ತೆಯಲ್ಲಿ ನಿಂತು ಜನರು ಲಾಕ್‌ಡೌನ್ ನಿಯಮಗಳನ್ನು ಅನುಸರಿಸುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುತ್ತಿರುವ ವಿಡಿಯೋ ಒಂದು ಇಂದು ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಕರೊನಾ ವಿರುದ್ಧದ ಸೆಣೆಸಾಟದಲ್ಲಿ ಮುಂಚೂಣಿ ಕಾರ್ಯಕರ್ತರಾಗಿರುವ ಪೊಲೀಸರ ಶ್ರಮಕ್ಕೆ ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಗೌರವ ನೀಡೋಣ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

    “ಕರೊನಾ ವಿರುದ್ಧದ ಸೆಣೆಸಾಟದಲ್ಲಿ ಮುಂಚೂಣಿ ಕಾರ್ಯಕರ್ತೆ ಡಿಎಸ್ಪಿ ಶಿಲ್ಪ ಸಾಹು, ಸುಡುವ ಸೂರ್ಯನ ತಾಪದಲ್ಲಿ ಲಾಕ್​ಡೌನ್ ಮಾರ್ಗಸೂಚಿಗಳನ್ನು ಜನರು ಅನುಸರಿಸುವಂತೆ ಮನವಿ ಮಾಡುತ್ತಿದ್ದಾರೆ. ಅವರಿಗೆ ನಮಿಸೋಣ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವ ಕೋವಿಡ್ 19 ಪ್ರೋಟೋಕಾಲ್​ಗಳನ್ನು ಪಾಲಿಸೋಣ” ಎಂಬ ಟಿಪ್ಪಣಿ ಬರೆದು, ಆಶಿಶ್ ಎಂಬುವರು ಈ ವಿಡಿಯೋವನ್ನು ಟ್ವಿಟರ್​​ನಲ್ಲಿ ಶೇರ್ ಮಾಡಿದ್ದಾರೆ.

    ವಿಡಿಯೋದಲ್ಲಿರುವುದು ನಕ್ಸಲೀಯರ ಸಮಸ್ಯೆ ಎದುರಿಸುತ್ತಿರುವ ಛತ್ತೀಸ್​ಗಡದ ದಾಂತೆವಾಡ ಪಟ್ಟಣದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್ಪಿ) ಆಗಿರುವ ಶಿಲ್ಪಾ ಸಾಹು ಅವರು. ತಮ್ಮ ಸಹೋದ್ಯೋಗಿ ಪೊಲೀಸರೊಂದಿಗೆ ಲಾಠಿ ಹಿಡಿದು, ರಸ್ತೆಯಲ್ಲಿ ಹಾದುಹೋಗುತ್ತಿರುವ ಜನರನ್ನು “ಎಲ್ಲಿಗೆ ಹೋಗುತ್ತಿದ್ದೀರಿ ?” ಎಂದು ಅವರು ಪ್ರಶ್ನಿಸುತ್ತಿರುವುದನ್ನು ಕಾಣಬಹುದು. ಕರೊನಾ ಅಪಾಯ ಇರುವ ಸಮಯದಲ್ಲಿ ಅನಗತ್ಯ ಸಂಚಾರ ತಡೆಯಲು ಜನರು ಯಾವ ಉದ್ದೇಶಕ್ಕೆ ಹೊರಗೆ ಬಂದಿದ್ದಾರೆಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts