More

    VIDEO | ಕಂಭ ಏರುವ ಮಗುವಿನ ವಿಡಿಯೋ ನೋಡಿದ್ದೀರಾ ?!

    ನವದೆಹಲಿ : ಮರಳಿ ಯತ್ನವ ಮಾಡು ಅನ್ನುವ ಮಾತಿದೆ. ಕ್ರೀಡಾ ಕ್ಷೇತ್ರದಲ್ಲಿರುವವರಿಗಂತೂ ಈ ಮಾತು ಅಕ್ಷರಶಃ ಅನ್ವಯವಾಗುತ್ತದೆ. ದಿನನಿತ್ಯ ಅಭ್ಯಾಸ ಮಾಡುತ್ತಾ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವುದು ಅವರ ಎಂದಿನ ಪರಿಪಾಠ. ಇಂಥದೇ ಒಂದು ಪ್ರಯತ್ನದಲ್ಲಿ 7 ವರ್ಷದ ಪುಟಾಣಿ ಫುಟ್​ಬಾಲ್​ ಆಟಗಾರ ಕಂಭ ಏರುವ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ.

    ಕೃತಕ ಕಂಭವೊಂದನ್ನು ಹತ್ತುವ ಯತ್ನದಲ್ಲಿರುವ ಮಗುವಿನ ಪ್ರಯತ್ನಗಳ ವಿಡಿಯೋ ತುಣಕುಗಳನ್ನು ಪೇರಿಸಿ ಒಂದು ದೀರ್ಘ ವಿಡಿಯೋ ಮಾಡಲಾಗಿದೆ. ಒಟ್ಟು 59 ಸೆಕೆಂಡುಗಳಿರುವ ಈ ವಿಡಿಯೋದಲ್ಲಿ ಒಂದು ಹೆಜ್ಜೆ ಹತ್ತಲೂ ಮೊದಲು ಕಷ್ಟ ಪಡುವ ಮಗು, ಕೊನೆಗೆ ಮೇಲಿನವರೆಗೆ ಹೋಗಿ ಸಲೀಸಾಗಿ ಕೆಳಗಿಳಿಯುತ್ತದೆ. ಎಂ.ವಿ.ರಾವ್ ಎಂಬ ಐಎಎಸ್​ ಅಧಿಕಾರಿ ಇದನ್ನು ಟ್ವಿಟರ್​ನಲ್ಲಿ ಶೇರ್ ಮಾಡಿ, ‘ಈ ಮಗು ನನ್ನ ಗುರು’ ಎಂದು ಟಿಪ್ಪಣಿ ಬರೆದಿದ್ದಾರೆ!

    ವಿಡಿಯೋದಲ್ಲಿರುವ ಮಗುವಿನ ಹೆಸರು ಅರತ್​ ಹೊಸ್ಸೈನಿ ಎನ್ನಲಾಗಿದೆ. ಲಿವರ್​ಪೂಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಈ ಫುಟ್​ಬಾಲ್ ಆಟಗಾರ ತನ್ನ ತಂದೆಯೊಂದಿಗೆ ಸ್ಟಂಟ್​ಗಳನ್ನು ಮಾಡುವ ಹಲವು ವಿಡಿಯೋಗಳು ಆಗಾಗ ನೆಟ್ಟಿಗರ ಗಮನ ಸೆಳೆಯುತ್ತಾ ಇರುತ್ತವೆ ಎನ್ನಲಾಗಿದೆ. (ಏಜೆನ್ಸೀಸ್)

    ‘ಫ್ರೆಂಡ್ಸ್​’ ಪುನರ್ಮಿಲನ ! 17 ವರ್ಷಗಳ ನಂತರ ಅದೇ ಸೆಟ್​ನಲ್ಲಿ ತಾರೆಗಳು !

    ನಾರದ ಲಂಚ ಪ್ರಕರಣ : ಟಿಎಂಸಿ ನಾಯಕರಿಗೆ ಮಧ್ಯಂತರ ಜಾಮೀನು

    ಕೋವಿಡ್​ ಹೆಚ್ಚಿರುವ ಜಿಲ್ಲೆಗಳಿಗೆ ಸಿಎಂ ಭೇಟಿ; ಇಂದು ತುಮಕೂರಿಗೆ ಬಿಎಸ್​​ವೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts