More

    VIDEO | ‘ನೀವು ಒಬ್ಬಂಟಿ ಅಲ್ಲ’ ಎಂದು ಹಾಡಿದ ನರ್ಸ್​!

    ಕೆನಡಾ : ಕರೊನಾ ಮಹಾಮಾರಿ ಹಬ್ಬಿರುವ ಈ ಸಂದರ್ಭದಲ್ಲಿ ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರು ಬಿಡುವಿಲ್ಲದೆ ರೋಗಿಗಳ ಸೇವೆಯಲ್ಲಿ ತೊಡಗಿದ್ದಾರೆ. ಅಂಥದೇ ಒಬ್ಬ ಕಾಳಜಿವಂತ ನರ್ಸ್​ ಐಸಿಯುನಲ್ಲಿರುವ ರೋಗಿಗಳಿಗಾಗಿ ಯು ಆರ್​ ನಾಟ್​ ಅಲೋನ್​ ಎಂಬ ಗೀತೆಯನ್ನು ಹಾಡಿರುವ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ.

    ಕೆನಡಾದ ಒಟ್ಟಾವಾ ಆಸ್ಪತ್ರೆಯಲ್ಲಿ ನರ್ಸ್​ ಆಗಿರುವ ಆಮಿ-ಲಿನ್ ಹೌಸನ್, ಐಸಿಯುಗೆ ಅಡ್ಮಿಟ್ ಆಗಿರುವ ರೋಗಿಗಳಿಗೆ ಧೈರ್ಯ ತುಂಬಲು ಯು ಆರ್​ ನಾಟ್ ಅಲೋನ್​ ಆಂಗ್ಲಗೀತೆ ಹಾಡಿದ್ದಾರೆ. ‘ಈ ಕಷ್ಟದ ದಾರಿಯಲ್ಲಿ ನೀವು ಒಬ್ಬಂಟಿಗರಲ್ಲ… ನಾವೆಲ್ಲ ನಿಮ್ಮೊಂದಿಗಿದ್ದೇವೆ’ ಎಂಬ ಅರ್ಥ ಬರುವ ಸಾಲುಗಳನ್ನು ಗಿಟಾರ್​ ನುಡಿಸುತ್ತಾ ಹಾಡಿರುವ ವಿಡಿಯೋವನ್ನು ಆಸ್ಪತ್ರೆಯವರು ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ.

    ಈ ವಿಡಿಯೋದೊಂದಿಗೆ, “ಇದು ಆಮಿ-ಲಿನ್. ದ ಒಟ್ಟಾವಾ ಹಾಸ್ಪಿಟಲ್​ನಲ್ಲಿ ಎಂಡೋಸ್ಕೋಪಿ ನರ್ಸ್​. ಇವರನ್ನು ಇತ್ತೀಚೆಗೆ ಐಸಿಯುಗೆ ನೇಮಿಸಲಾಯಿತು. ನಮ್ಮ ರೋಗಿಗಳಿಗಾಗಿ ಸುಂದರವಾಗಿ ಹಾಡುತ್ತಿದ್ದಾರೆ” ಎಂದು ಆಸ್ಪತ್ರೆ ಆಡಳಿತ ಟಿಪ್ಪಣಿ ಬರೆದಿದೆ. ನಮ್ಮ ಉತ್ಸಾಹ ಮೂಡಿಸಿ ಧೈರ್ಯ ಹೆಚ್ಚಿಸಿದ್ದಕ್ಕೆ ಧನ್ಯವಾದ, ಆಮಿ-ಲಿನ್ ಎಂದಿದೆ. ಜೊತೆಗೆ ‘ಒಟ್ಟಾಗಿ ಹೆಚ್ಚು ಶಕ್ತಿಶಾಲಿ’ ಎಂಬ ಅರ್ಥ ನೀಡುವ ಸ್ಟ್ರಾಂಗರ್​ಟುಗೆದರ್​ ಹ್ಯಾಷ್​ ಟ್ಯಾಗನ್ನು ಹಾಕಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts