More

    VIDEO| ಪಿಟ್ಟ ಕಥಲು ಟ್ರೈಲರ್ ಬಿಡುಗಡೆ: ಮತ್ತೆ ವೈರಲ್​ ಆಯ್ತು ಶ್ರುತಿ ಹಾಸನ್​-ಸಂಜಿತ್ ಹೆಗ್ಡೆ ಬೋಲ್ಡ್​ ದೃಶ್ಯ!

    ಬೆಂಗಳೂರು: ಸಂಜಿತ್ ಹೆಗ್ಡೆ ಎಂದ ತಕ್ಷಣ ಮೊದಲಿಗೆ ನೆನಪಿಗೆ ಬರುವುದು ಅವರ ಮಧುರವಾದ ಕಂಠಸಿರಿ. ಸರೆಗಮಪ ರಿಯಾಲಿಟಿ ಶೋ ಮೂಲಕ ಹೊರಬಂದ ಈ ಕನ್ನಡದ ಪ್ರತಿಭೆ ಸ್ಯಾಂಡಲ್‌ವುಡ್ ಸೇರಿ ಸೌತ್ ಸಿನಿಮಾರಂಗದಲ್ಲಿನ ಹಲವು ಸಂಗೀತ ನಿರ್ದೇಶಕರ ಜತೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಇದೇ ಸಂಜಿತ್ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅದೇನೆಂದರೆ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಜತೆ ಲಿಪ್ ಲಾಕ್ ಮಾಡಿದ್ದಾರೆ!

    ಹೌದು, ಕೆಲ ದಿನಗಳ ಹಿಂದೆ ಲಿಪ್‌ಲಾಕ್ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಜಾಲತಾಣದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿತ್ತು. ನಿಜಕ್ಕೂ ಇದು ಸಂಜಿತ್​ ಹೆಗ್ಡೆನಾ ಎಂಬ ಪ್ರಶ್ನೆ ಹುಟ್ಟುಹಾಕಿತ್ತು. ಆ ಬಳಿಕ ‘ಪಿಟ್ಟ ಕಥಲು’ ಎಂಬ ಆ್ಯಂಥಾಲಜಿ ಚಿತ್ರದಲ್ಲಿ ಸಂಜಿತ್​ ನಟಿಸಿದ್ದಾರೆಂಬ ಸುದ್ದಿ ಹೊರಬಿದ್ದಿತು. ನಾಲ್ಕು ಕಥೆಗಳಿರುವ ತೆಲುಗಿನ ಆ್ಯಂಥಾಲಜಿ ಸಿನಿಮಾದಲ್ಲಿ ಶ್ರುತಿ ಹಾಸನ್ ಅವರ ಸಂಚಿಕೆಯಲ್ಲಿ ಸಂಜಿತ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಗಾಯನದ ಜತೆಗೆ ನಟನೆಯತ್ತಲೂ ಮುಖ ಮಾಡಿದ್ದಾರೆ.

    ಇದನ್ನೂ ಓದಿರಿ: ವೇಶ್ಯೆ ಸೋಗಲ್ಲಿ ಯುವಕರ ಕೋಣೆಗೆ ಆಂಟಿ ಎಂಟ್ರಿ! ಸಲ್ಲಾಪದ ವೇಳೆ ವರಸೆ ಬದಲು, ಬೆಸ್ತುಬಿದ್ದವ ಮಾಡಿದ್ದೇನು?

    ಇದೀಗ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಸಂಜಿತ್​ ಮತ್ತು ಶ್ರುತಿ ಹಾಸನ್ ಮಳೆಯ ನಡುವೆ ತುಟಿಗೆ ತುಟಿ ಚುಂಬಿಸುತ್ತಿರುವ ದೃಶ್ಯ ಮತ್ತೊಮ್ಮೆ ಟಾಕ್​ ಆಫ್​ ದಿ ಟೌನ್​ ಆಗಿದೆ. ಫೆ. 5ರಂದು ಟ್ರೈಲರ್​ ಬಿಡುಗಡೆಯಾಗಿದ್ದು, ಈಗಾಗಲೇ 8 ಲಕ್ಷಕ್ಕೂ ಅಧಿಕ ವಿಕ್ಷಣೆ ಪಡೆದುಕೊಂಡಿದೆ.

    ಮಹಾನಟಿ ಸಿನಿಮಾ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಶ್ರುತಿ ಹಾಸನ್ ಅವರ ಸಂಚಿಕೆಗೆ ನಿರ್ದೇಶನ ಮಾಡಿದ್ದಾರೆ. ಇನ್ನುಳಿದ ಮೂರು ಕಥೆಗಳಿಗೆ ನಂದಿನಿ ರೆಡ್ಡಿ, ಸಂಕಲ್ಪ ರೆಡ್ಡಿ, ತರುಣ್ ಭಾಸ್ಕರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಅಮಲಾ ಪೌಲ್​, ಈಶಾ ರೆಬ್ಬಾ ಮತ್ತು ಸಾನ್ವೆ ಮೆಘಾನಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ಇತ್ತೀಚೆಗೆ ಬಂದಿದ್ದ ‘ಪಾವಾ ಕದೈಗಾಳ್’ ಚಿತ್ರವನ್ನೇ ತೆಲುಗಿನಲ್ಲಿ ರಿಮೇಕ್ ಮಾಡಲಾಗಿದ್ದು, ಫೆ. 19ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts