More

    VIDEO | ಕರೊನಾ ಲಸಿಕೆ ಪಡೆದವರಿಗೆ ‘ದೇಶಭಕ್ತ’ ಎಂದು ಬ್ಯಾಡ್ಜ್​ ನೀಡುತ್ತಿರುವ ಪೊಲೀಸರು!

    ಭೋಪಾಲ್​ : ಕರೊನಾ ವಿರುದ್ಧದ ಹೋರಾಟದಲ್ಲಿ ಕರೊನಾ ಲಸಿಕೆ ಹಾಕಿಸಿಕೊಳ್ಳುವುದು ಪ್ರಮುಖ ಅಸ್ತ್ತವಾಗಿದೆ. ಹೀಗಿರುವಾಗ ಉದಾಸೀನ ಮಾಡದೆ ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರಿಗೆ ಪ್ರೇರಣೆ ನೀಡಲು ಆಡಳಿತ ವ್ಯವಸ್ಥೆ ಪ್ರಯತ್ನಿಸುತ್ತಿದೆ. ಮಧ್ಯಪ್ರದೇಶದ ನಿವಾರಿ ಜಿಲ್ಲೆಯ ಪೊಲೀಸರು ಈ ನಿಟ್ಟಿನಲ್ಲಿ ವಿನೂತನ ಮಾದರಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

    ರಸ್ತೆಯಲ್ಲಿ ಹೋಗುವವರನ್ನು ನಿಲ್ಲಿಸಿ, ಲಸಿಕೆ ಪಡೆದಿದ್ದಾರಾ ಇಲ್ಲವಾ ಎಂದು ವಿಚಾರಿಸುತ್ತಿರುವ ನಿವಾರಿಯ ಪೊಲೀಸರು, ಲಸಿಕೆ ಪಡೆದಿರುವವರಿಗೆ ‘ನಾನು ನಿಜವಾದ ದೇಶಭಕ್ತ, ನಾನು ಕರೊನಾ ಲಸಿಕೆ ತೆಗೆದುಕೊಂಡಿದ್ದೇನೆ’ ಎಂದು ಬರೆದಿರುವ ಬ್ಯಾಡ್ಜ್​ಗಳನ್ನು ಹಾಕಿ ಸನ್ಮಾನಿಸುತ್ತಿದ್ದಾರೆ. ನೀವು ಜವಾಬ್ದಾರಿಯ ಕೆಲಸ ಮಾಡಿದ್ದೀರಾ ಎಂದು ಶಹಭಾಸ್​ ಹೇಳುತ್ತಿದ್ದಾರೆ.

    ಮತ್ತೊಂದೆಡೆ, ಇನ್ನೂ ಲಸಿಕೆ ಪಡೆದಿಲ್ಲದವರು ಸಿಕ್ಕರೆ, ಅವರಿಗೆ ‘ನನ್ನಿಂದ ದೂರವಿರಿ, ಯಾಕೆಂದರೆ ನಾನು ಇನ್ನೂ ಕರೊನಾ ಲಸಿಕೆ ಪಡೆದಿಲ್ಲ’ ಎಂದಿರುವ ಕರಪತ್ರವನ್ನು ಅಂಟಿಸುತ್ತಿದ್ದಾರೆ. ತಮ್ಮ ಅಂಗಿಗೆ ಹಾಕಿದ ಫಲಕವನ್ನು ಜನರಿಂದ ಓದಿಸಿ, ಆದಷ್ಟು ಬೇಗ ಲಸಿಕೆ ಪಡೆಯಿರಿ ಎಂದು ಬುದ್ಧಿ ಹೇಳಿ ಕಳುಹಿಸುತ್ತಿದ್ದಾರೆ. (ಏಜೆನ್ಸೀಸ್)

    ಕಾಂಗ್ರೆಸ್​​ಗೆ ಕೈಕೊಟ್ಟು ಬಿಜೆಪಿ ಸೇರಿದ ಮಾಜಿ ಸಚಿವ ಜಿತಿನ್​ ಪ್ರಸಾದ

    VIDEO| ಮನೆ ಬಾಗಿಲಿಗೆ ಹೋಗಿ ಕರೆದರೂ ಕರೊನಾ ವ್ಯಾಕ್ಸಿನ್​ ಪಡೆಯಲು ಸೋಲಿಗರು ಹಿಂದೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts