More

    ಸಮುದ್ರಕ್ಕೆ ಕಸ ಸುರಿದಿದ್ದ ವಾಹನ ವಶ

    ಉಳ್ಳಾಲ: ಕಟ್ಟಡದ ತ್ಯಾಜ್ಯ ಸಮುದ್ರಕ್ಕೆ ಸುರಿದು ಹೋಗಿದ್ದ ವಾಹನವನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು, ಉಳ್ಳಾಲ ನಗರಸಭೆಗೆ ಒಪ್ಪಿಸಿದ್ದಾರೆ.
    ವಾರದ ಹಿಂದೆ ಮಿನಿ ಲಾರಿಯೊಂದರಲ್ಲಿ ಥರ್ಮಾಕೋಲ್ ಮತ್ತು ಕಟ್ಟಡದ ತ್ಯಾಜ್ಯ ತಂದು ಉಳ್ಳಾಲ ಜೆಟ್ಟಿಯಲ್ಲಿ ಸಮುದ್ರಕ್ಕೆ ಸುರಿಯಲಾಗಿತ್ತು. ಈ ಸಂದರ್ಭ ಅಲ್ಲಿ ವಿಹರಿಸುತ್ತಿದ್ದ ಪರಿಸರ ಪ್ರೇಮಿಗಳು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

    ಬಳಿಕ ಎಚ್ಚೆತ್ತ ಉಳ್ಳಾಲ ನಗರಸಭೆ ಆಯುಕ್ತ ರಾಯಪ್ಪ, ಲಾರಿಯ ನಂಬರ್ ನಮೂದಿಸಿ ವಶಕ್ಕೆ ಪಡೆಯುವಂತೆ ಉಳ್ಳಾಲ ಪೊಲೀಸರಲ್ಲಿ ಕೇಳಿಕೊಂಡಿದ್ದರು. ಅದರಂತೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ, ಲಾರಿಯನ್ನು ವಶಕ್ಕೆ ಪಡೆದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಸಜಿತ್ ಅವರಿಗೆ ಒಪ್ಪಿಸಿದ್ದಾರೆ. ಸಮುದ್ರಕ್ಕೆ ಕಸ ಸುರಿದು ಮಲಿನ ಮಾಡಲು ಬಳಸಿದ್ದ ಲಾರಿಗೆ ಒಂದು ಲಕ್ಷ ರೂ. ವರೆಗೆ ದಂಡ ವಿಧಿಸಲು ನಗರಸಭೆಗೆ ಅವಕಾಶ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿ ಗುರುಪುರ ಬಳಿಯ ಉಳಾಯಿಬೆಟ್ಟುವಿನ ಜಿ.ಉಸ್ಮಾನ್ ಎಂಬುವರಿಗೆ ಸೇರಿದ್ದು, ಅಬ್ದುಲ್ ಖಾದರ್ ಚಾಲಕರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts