More

    ಹೊಸ ಕುರಾನ್​ ರಚಿಸಿದ ವಾಸಿಮ್ ರಿಜ್ವಿ! ಬಳಕೆಗೆ ಅನುಮತಿ ಕೊಡಿ ಎಂದು ಪ್ರಧಾನಿಗೆ ಮನವಿ

    ಲಖನೌ: ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಮ್ ರಿಜ್ವಿ ಈಗಿರುವ ಕುರಾನ್​ನಲ್ಲಿ ಬದಲಾವಣೆಗಳನ್ನು ಮಾಡಿ ಹೊಸ ಕುರಾನ್​ ರಚಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆ ಕುರಾನ್​ ಬಳಕೆಗೆ ಅವಕಾಶ ಮಾಡಿಕೊಡಿ ಎಂದು ಪ್ರಧಾನಿಗೆ ಮನವಿ ಪತ್ರವನ್ನೂ ಬರೆದಿದ್ದಾರೆ.

    ಈಗಿರುವ ಕುರಾನ್​ನಲ್ಲಿ ಕಾನೂನನ್ನು ಉಲ್ಲಂಘಿಸಿ ಉಗ್ರವಾದವನ್ನು ಉತ್ತೇಜಿಸುವಂತಹ 26 ಪದ್ಯಗಳನ್ನು ರಿಜ್ವಿ ತೆಗೆದುಹಾಕಿದ್ದಾರಂತೆ. ಹಾಗಾಗಿ ಈ ಹೊಸ ಕುರಾನ್​ ಅನ್ನು ದೇಶದ ಎಲ್ಲ ಮದರಸ ಹಾಗೂ ಮುಸ್ಲಿಂ ಸಂಸ್ಥೆಗಳಲ್ಲಿ ಬಳಸಲು ಅಧಿಕಾರ ಮಾಡಿಕೊಡಿ ಎಂದು ಅವರು ಮನವಿಯಲ್ಲಿ ಕೇಳಿಕೊಂಡಿದ್ದಾರೆ. ಹಾಗೆಯೇ ಈ ಕುರಾನ್​ ಅನ್ನು ಶೀಘ್ರವೇ ಮಾರುಕಟ್ಟೆಗೆ ತರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

    ರಿಜ್ವಿ ಅವರು ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರುತ್ತಿದ್ದರು. ಇದೀಗ ಹೊಸ ಕುರಾನ್​ ಮೂಲಕ ಸುದ್ದಿಯಾಗುತ್ತಿದ್ದಾರೆ. ಅವರ ವಿರುದ್ಧ ಸಿಬಿಐ ತನಿಖೆಯೂ ನಡೆಯುತ್ತಿದೆ. (ಏಜೆನ್ಸೀಸ್​)

    ‘ಸಿನಿಮಾದಲ್ಲಿ ನೀನಿರಬೇಕೆಂದರೆ ಹೀರೋ ಜತೆ ಮಲಗಬೇಕೆಂದರು!’ ನಟಿ ಬಿಚ್ಚಿಟ್ಟ ಸತ್ಯ

    ಜಾರಕಿಹೊಳಿ ಸಿಡಿ ಪ್ರಕರಣ: ನರೇಶ್, ಶ್ರವಣ್​ ಸಲ್ಲಿಸಿರುವ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮುಂದಾದ ಎಸ್​ಐಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts