More

    ಕುರಾನ್ ಪದ್ಯಗಳನ್ನು ತೆಗೆಯಲು ಕೋರಿದ್ದ ಅರ್ಜಿ ವಜಾ

    ನವದೆಹಲಿ : ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಖುರಾನ್​​ನಿಂದ ಕೆಲವು ಪದ್ಯಗಳನ್ನು ತೆಗೆದುಹಾಕಲು ಕೋರಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯೊಂದನ್ನು ಇಂದು ಸುಪ್ರೀಂ ಕೋರ್ಟ್ ದಂಡ ವಿಧಿಸಿ ವಜಾಗೊಳಿಸಿದೆ.

    ಉತ್ತರಪ್ರದೇಶದ ಶಿಯಾ ವಕ್ಫ್ ಬೋರ್ಡ್​ ಮಾಜಿ ಅಧ್ಯಕ್ಷ ಸೈಯೆದ್​ ವಾಸಿಮ್ ರಿಜ್ವಿ ಅವರು ಸಲ್ಲಿಸಿದ್ದ ಈ ಅರ್ಜಿಯಲ್ಲಿ ಖುರಾನಿನ 26 ಶ್ಲೋಕಗಳನ್ನು ತೆಗೆದುಹಾಕಬೇಕು ಎಂದು ಕೋರಲಾಗಿತ್ತು. “ಕೆಲವು ಪದ್ಯಗಳ ಅಕ್ಷರಶಃ ವ್ಯಾಖ್ಯಾನವು ನಂಬಿಕೆಯಿಲ್ಲದವರ ವಿರುದ್ಧ ಹಿಂಸಾಚಾರವನ್ನು ಬೋಧಿಸುತ್ತದೆ. ಆದ್ದರಿಂದ ಸದರಿ ಪದ್ಯಗಳನ್ನು ಮದರಸಾಗಳಲ್ಲಿ ಮಕ್ಕಳಿಗೆ ಹೇಳಿಕೊಡುವುದನ್ನು ನಿಲ್ಲಿಸಬೇಕು” ಎಂದು ಅರ್ಜಿದಾರರ ವಕೀಲ ಆರ್​.ಕೆ.ರಾಯ್ಜಾದ ಹೇಳಿದರು.

    ಈ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಮೂರ್ತಿ ಆರ್​.ಎಫ್​.ನಾರಿಮನ್ ಅವರು, “ಇದು ಸಂಪೂರ್ಣವಾಗಿ ಕ್ಷುಲ್ಲಕವಾದ ರಿಟ್ ಅರ್ಜಿಯಾಗಿದೆ” ಎಂದು ಹೇಳಿ ವಜಾ ಮಾಡಿದರು. ಜೊತೆಗೆ ಅರ್ಜಿದಾರರಿಗೆ 50,000 ರೂ. ವೆಚ್ಚವನ್ನು ವಿಧಿಸಿದರು. (ಏಜೆನ್ಸೀಸ್)

    ಪ್ರಧಾನಿ ಮೋದಿ ವಿರುದ್ಧ ಸಿಬಿಐ ತನಿಖೆ ಕೋರಿ ಪಿಐಎಲ್

    ಕರೊನಾ ರೋಗಿ ಸತ್ತಿದ್ದಕ್ಕೆ ಕೂಗಾಡಿದ ರಾಜಕಾರಣಿಗಳು… ರಾಜೀನಾಮೆ ಸಲ್ಲಿಸಿದ ವೈದ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts