More

    ವಾಸಿಂ ಅಕ್ರಂ 54ನೇ ಜನ್ಮದಿನದಂದು, ನನಗಿನ್ನೂ 53 ವರ್ಷ ಎಂದಿದ್ದೇಕೆ?

    ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ, ದಿಗ್ಗಜ ವೇಗಿ ವಾಸಿಂ ಅಕ್ರಂ ಬುಧವಾರ 54ನೇ ವರ್ಷಕ್ಕೆ ಕಾಲಿಟ್ಟರು. ಆದರೂ, ನನಗಿನ್ನೂ 53 ವರ್ಷ ಎಂದವರು ಹೇಳಿಕೊಂಡಿದ್ದಾರೆ. ಇದಕ್ಕೆ ಅವರು ನೀಡಿರುವ ಕಾರಣ, ಕರೊನಾ ವೈರಸ್ ಹಾವಳಿಯ ಕಡೆ ಬೆರಳು ತೋರಿಸುತ್ತಿದೆ!

    ಇದನ್ನೂ ಓದಿ: ಅಂದು ಸ್ಪೋರ್ಟ್ಸ್ ಸ್ಟಾರ್ಸ್‌..ಇಂದು ಕೋವಿಡ್ ವಾರಿಯರ್ಸ್‌..

    ವಾಸಿಂ ಅಕ್ರಂ ಅವರ ಈ ಬಾರಿಯ ಜನ್ಮದಿನವನ್ನು ಅವರ ಆಸ್ಟ್ರೇಲಿಯಾ ಮೂಲದ ಪತ್ನಿ ಶನೈರಾ ‘ಕ್ವಾರಂಟೈನ್ ಬರ್ತ್‌ಡೇ’ ಎಂದು ಕರೆದಿದ್ದಾರೆ. ಟ್ವಿಟರ್‌ನಲ್ಲಿ ಬುಧವಾರ ವಾಸಿಂ ಅಕ್ರಂಗೆ ಜನ್ಮದಿನದ ಶುಭಾಶಯ ತಿಳಿಸುತ್ತಾ ಶನೈರಾ, ‘ಕ್ವಾರಂಟೈನ್ ಬರ್ತ್‌ಡೇಯಂದು ನಿಮ್ಮೊಂದಿಗೆ ಅಮೂಲ್ಯ ಸಮಯವನ್ನು ಕಳೆಯುವ ಸಲುವಾಗಿ ನಾನು ಹೊರಗೆಲ್ಲೂ ಹೋಗುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ವಾಸಿಂ ಅಕ್ರಂ, ತಮಗೆ ಜನ್ಮದಿನದ ಶುಭಾಶಯ ಹೇಳಿದವರಿಗೆಲ್ಲ ಧನ್ಯವಾದ ತಿಳಿಸಿದ್ದಾರೆ. ಜತೆಗೆ, ‘ಈ ವರ್ಷ ನಾನು ಸರಿಸುಮಾರು ಮೂರು ತಿಂಗಳನ್ನು ಕ್ವಾರಂಟೈನ್‌ನಲ್ಲೇ ಕಳೆದಿರುವೆ. ಹೀಗಾಗಿ ನನ್ನ ಈ ಬರ್ತ್‌ಡೇಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಇನ್ನೊಂದು ವರ್ಷದ ಮಟ್ಟಿಗೆ ನನ್ನ ವಯಸ್ಸು 53ರಲ್ಲೇ ಇರಲಿದೆ’ ಎಂದು ಅಕ್ರಂ ಹೇಳಿದ್ದಾರೆ.

    ಇದನ್ನೂ ಓದಿ: ಮೋದಿ ಮಾತೇ ಸ್ಫೂರ್ತಿಯಾಯ್ತಾ? ಲೋಕಲ್​ ಬ್ರ್ಯಾಂಡ್‌ಗಳಿಗೆ ಪ್ರಚಾರ ಕೊಡ್ತಾರಂತೆ ಸಾನಿಯಾ ಮಿರ್ಜಾ

    104 ಟೆಸ್ಟ್ ಮತ್ತು 356 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 414 ಮತ್ತು 502 ವಿಕೆಟ್ ಕಬಳಿಸಿದ ಸಾಧನೆ ಮಾಡಿರುವ ವಾಸಿಂ ಅಕ್ರಂ, 2,898 ಮತ್ತು 3,717 ರನ್ ಸಿಡಿಸುವ ಮೂಲಕ ಆಲ್ರೌಂಡರ್ ಆಗಿಯೂ ಮಿಂಚಿದ್ದಾರೆ. 1992ರಲ್ಲಿ ಪಾಕಿಸ್ತಾನ ತಂಡ ವಿಶ್ವಕಪ್ ಜಯಿಸಿದ ವೇಳೆ ಅವರು ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠರೂ ಆಗಿದ್ದರು.

    ಕರ್ಣಂ ಮಲ್ಲೇಶ್ವರಿ ಪಾತ್ರದಲ್ಲಿ ನಟಿಸಲ್ವಂತೆ ನಿತ್ಯಾ ಮೆನನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts